Heart Attack : ಹೃದಯಾಘಾತದ ಸಾಮಾನ್ಯ ಲಕ್ಷಣಗಳಾವುವು? ಇಲ್ಲಿದೆ ಮಾಹಿತಿ ಓದಿ

Heart Attack : ಇತ್ತೀಚಿನ ದಿನಗಳಲ್ಲಿ ಯುವಜನರಲ್ಲೂ ಹೃದಯಾಘಾತದ(Cardiac Arrest) ಪ್ರಮಾಣ ಹೆಚ್ಚಾಗುತ್ತಿದೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರು ಕೂಡಾ ಹಠಾತ್‌ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಕಂಡು ಬಂದಿದ್ದು, ಇದಕ್ಕೆ ಅನೇಕ ಕಾರಣಗಳಿವೆ.

ಮುಖ್ಯವಾಗಿ ಹೃದಯಾಘಾತವು ಕೆಲವೊಮ್ಮೆ ಸೌಮ್ಯ ಲಕ್ಷಣದ ಹೃದಯಾಘಾತವಾಗಿರಬಹುದು. ಹೃದಯಕ್ಕೆ ರಕ್ತ ಪರಿಚಲನೆ ಮತ್ತು ಆಮ್ಲಜನಕದ(Oxygen) ಪೂರೈಕೆಗೆ ಅಡ್ಡಿಯಾದಾಗ ಹೃದಯಾಘಾತ ಸಂಭವಿಸುತ್ತದೆ. ಇದಕ್ಕೂ ಮುನ್ನ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಆಧಾರದ ಮೇಲೆ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.

ಹೃದಯಾಘಾತದ ಸಾಮಾನ್ಯ ಲಕ್ಷಣಗಳ ಮಾಹಿತಿ ಇಲ್ಲಿದೆ ನೋಡಿ :

ಸೌಮ್ಯ ಲಕ್ಷಣದ ಹೃದಯಾಘಾತ ಎಂದರೇನು? : ಹೃದ್ರೋಗ ತಜ್ಞರ ಪ್ರಕಾರ, ಸೌಮ್ಯ ಲಕ್ಷಣದ ಹೃದಯಾಘಾತದಲ್ಲಿ ಹೃದಯವು ಹೆಚ್ಚು ಹಾನಿಗೊಳಗಾಗಿರುವುದಿಲ್ಲ. ಹೃದಯವು ರಕ್ತವನ್ನು ಪಂಪ್ ಮಾಡುವುದನ್ನು ಮುಂದುವರೆಸುತ್ತದೆ. ಇದು ತೀವ್ರ ಹೃದಯಾಘಾತವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಹೀಗಾಗಿ ಸೌಮ್ಯ ಲಕ್ಷಣದ ಹೃದಯಾಘಾತವನ್ನು ಗುರುತಿಸುವುದು ಅತಿಮುಖ್ಯ. ಸೌಮ್ಯ ಲಕ್ಷಣದ ಹೃದಯಾಘಾತ ಸಂಬಂಧಿಸಿದಾಗ ಉಂಟಾಗುವ ಲಕ್ಷಣಗಳ ವಿವರ ಇಲ್ಲಿದೆ ನೋಡಿ. ವಾಕರಿಕೆ ಹೃದಯಾಘಾತದ ಲಕ್ಷಣಗಳಲ್ಲಿ ಮುಖ್ಯವಾಗಿದೆ. ಮಧುಮೇಹಿಗಳಲ್ಲಿ ಇದು ಸಾಮಾನ್ಯ ಲಕ್ಷಣ.

ಇದನ್ನೂ ಓದಿ : https://vijayatimes.com/brahmastra-reaches-global-collection/

ಸೌಮ್ಯ ಹೃದಯಾಘಾತದ ಸಂದರ್ಭದಲ್ಲಿ ಅರ್ಧದಷ್ಟು ಮಾತ್ರ ಎದೆನೋವು ಕಾಣಿಸಿಕೊಳ್ಳುತ್ತದೆ. ತೀವ್ರ ಆಯಾಸ ಮತ್ತು ತಲೆತಿರುಗುವುದು ಸೌಮ್ಯ ಹೃದಯಾಘಾತದ ಲಕ್ಷಣವಾಗಿದ್ದು, ತೀವ್ರ ರಕ್ತದ ಒತ್ತಡದಿಂದ ತಲೆತಿರುಗುತ್ತದೆ. ಹೀಗಾಗಿ ತಲೆತಿರುಗುವಿಕೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ನಿರ್ಲಕ್ಷ್ಯ ತೋರದೇ ಎಚ್ಚರವಹಿಸಿ ತಜ್ಞ ವೈದ್ಯರನ್ನು ಸಂಪರ್ಕಿಸಿ.

ದವಡೆಯ ನೋವು, ತೋಳು ನೋವು, ಕುತ್ತಿಗೆ ನೋವು ಸೌಮ್ಯ ಹೃದಯಾಘಾತದ ಮುಖ್ಯ ಲಕ್ಷಣಗಳಾಗಿವೆ. ಮಹಿಳೆಯರಲ್ಲಿ ಈ ಲಕ್ಷಣಗಳು ಹೆಚ್ಚು ಕಂಡು ಬರುತ್ತದೆ.

ಸೌಮ್ಯ ಲಕ್ಷಣದ ಹೃದಯಾಘಾತವಾದಾಗ ಉಸಿರಾಟಕ್ಕೆ ತೊಂದರೆಗೊಳಗಾಗುವ ಲಕ್ಷಣಗಳು ಕಂಡು ಬರುತ್ತವೆ. ಅಸ್ತಮಾ ರೋಗಿಗಳಲ್ಲಿ ಇದು ಹೆಚ್ಚಾಗಿ ಕಂಡು ಬರುವ ಸಾಧ್ಯತೆಗಳಿರುತ್ತವೆ. ಉಸಿರಾಟಕ್ಕೆ ತೊಂದರೆ ಉಂಟಾದಾಗ ವೈದ್ಯರನ್ನು ಭೇಟಿ ಮಾಡಿ.

Exit mobile version