ಯುವ ವಯಸ್ಕರಲ್ಲಿ ಹೃದ್ರೋಗದ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳ ವಿವರ ಇಲ್ಲಿದೆ ನೋಡಿ

Heart Attack

ಇತ್ತೀಚಿನ ದಿನಗಳಲ್ಲಿ ಯುವಜನತೆ ಕೂಡಾ ಹೃದ್ರೋಗದ(Heart Disease) ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಹದಿಹರೆಯದ ವಯಸ್ಸಿನಲ್ಲೇ ಯುವಕರು ಹೃದಯಾಘಾತದಂತ ಗಂಭೀರ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಯುವ ವಯಸ್ಕರಲ್ಲಿ ಹೃದ್ರೋಗದ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳ ವಿವರ ಇಲ್ಲಿದೆ.

ಧೂಮಪಾನ(Smoking) ಮತ್ತು ಮದ್ಯಪಾನದಂತಹ(Alcoholic) ಅಭ್ಯಾಸಗಳು ಯುವ ವಯಸ್ಕರಲ್ಲಿ ಅಧಿಕ ರಕ್ತದೊತ್ತಡದ ಉಂಟು ಮಾಡುತ್ತವೆ. ಇದು ಹೃದಯಾಘಾತ, ಮೂತ್ರಪಿಂಡ ವೈಫಲ್ಯದಂತ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಟೈಪ್ 2 ಮಧುಮೇಹವು ಹೃದಯ ರಕ್ತಪರಿಚಲನಾ ವ್ಯವಸ್ಥೆಯಲ್ಲಿನ ನರಗಳನ್ನು ಹಾನಿಗೊಳಿಸುತ್ತದೆ. ಆದ್ದರಿಂದ, ನೀವು ಮಧುಮೇಹವನ್ನು ಹೊಂದಿದ್ದರೆ, ಹೃದ್ರೋಗ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ : https://vijayatimes.com/health-facts-of-cardamom/

ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮಹಿಳೆಯರು ಹೃದಯಾಘಾತ, ಪಾರ್ಶ್ವವಾಯು ಕಾಯಿಲೆಯ ಅಪಾಯವನ್ನು ಹೆಚ್ಚು ಎದುರಿಸುತ್ತಾರೆ. ಪೋಷಕರು 55 ವರ್ಷಕ್ಕಿಂತ ಮೊದಲು ಹೃದ್ರೋಗದಿಂದ ಬಳಲುತ್ತಿದ್ದರೆ, ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ಹೃದಯ ಕಾಯಿಲೆಯ ಅಪಾಯವು 50% ಕ್ಕೆ ಏರಬಹುದು.

ದೀರ್ಘಾವಧಿಯ ಕೆಲಸ-ಸಂಬಂಧಿತ ಒತ್ತಡವನ್ನು ಹೊಂದಿರುವ ಹೆಚ್ಚಿನ ಜನರು ಕಡಿಮೆ ವ್ಯಾಯಾಮ, ಅನಾರೋಗ್ಯಕರ ಆಹಾರ, ಧೂಮಪಾನ ಮತ್ತು ಮದ್ಯಪಾನವನ್ನು ಮಾಡುವುದರಿಂದ ಸ್ಥೂಲಕಾಯತೆಗೆ ತುತ್ತಾಗುತ್ತಾರೆ. ಇದು ಹೃದಯಾಘಾತದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಹೃದಯರಕ್ತನಾಳದ ಅಸ್ವಸ್ಥತೆಗಳಿಗೆ ವಾಯು ಮಾಲಿನ್ಯವು ಪ್ರಮುಖ ಅಪಾಯಕಾರಿ ಅಂಶವಾಗಿದೆ.

ಆರೋಗ್ಯಕರ ಹೃದಯಕ್ಕಾಗಿ ತಡೆಗಟ್ಟುವ ಕ್ರಮಗಳು :

ಫೈಬರ್, ಪ್ರೋಟೀನ್‌, ಹಣ್ಣುಗಳು ಮತ್ತು ತರಕಾರಿಗಳು, ಕಾಳುಗಳು, ಕಡಿಮೆ-ಕೊಬ್ಬಿನ ಆಹಾರ ಉತ್ಪನ್ನಗಳು, ಚರ್ಮವಿಲ್ಲದ ಮೀನಿನ ಆಹಾರವನ್ನು ಸೇವಿಸಿ. ಪ್ಯಾಕೇಜ್ ಮಾಡಿದ ಆಹಾರಗಳು, ಜಂಕ್ ಫುಡ್, ಗಾಳಿಯಾಡಿಸಿದ ಪಾನೀಯಗಳು, ಸಕ್ಕರೆ ಮತ್ತು ಉಪ್ಪಿನ ಅತಿಯಾದ ಸೇವನೆ ಬೇಡ.

ಇದನ್ನೂ ಓದಿ : https://vijayatimes.com/rules-circular-from-state-government/

ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಕಾಲಕಾಲಕ್ಕೆ ಕುಟುಂಬದೊಂದಿಗೆ ರಜಾ ದಿನಗಳನ್ನು ಕಳೆಯಿರಿ. ಒತ್ತಡದಿಂದ ಹೊರಬನ್ನಿ. ರಕ್ತದ ಸಕ್ಕರೆಯ ಮಟ್ಟ ಮತ್ತು ಬಿಪಿಯನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ವರ್ಷಕ್ಕೊಮ್ಮೆಯಾದರೂ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿ.

ನಿಮ್ಮ ಕುಟುಂಬದ ಇತಿಹಾಸವನ್ನು ತಿಳಿದುಕೊಳ್ಳಿ. ಪೋಷಕರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರೆ ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ. ಪ್ರತಿವಾರ ಕನಿಷ್ಠ 150 ನಿಮಿಷಗಳ ದೈಹಿಕ ಚಟುವಟಿಕೆಯು ಅತ್ಯಗತ್ಯವಾಗಿರುತ್ತದೆ. ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ.

Exit mobile version