ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ : ಮುರ್ಮು ಗೆಲುವು ಬಹುತೇಕ ಖಚಿತ

Draupadi Murmu

ಇಂದು ರಾಷ್ಟ್ರಪತಿ ಚುನಾವಣೆಗೆ(President Election) ಮತದಾನ(Voting) ನಡೆಯಲಿದೆ. ದೇಶದ ಎಲ್ಲ ರಾಜ್ಯಗಳ  ವಿಧಾನಸಭಾ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಮತದಾನ ಮಾಡಲಿದ್ದಾರೆ. ದೇಶದ ಮುಂದಿನ ರಾಷ್ಟ್ರಪತಿ(President) ಯಾರು ಎಂದು ಜುಲೈ 21 ರಂದು ತಿಳಿಯಲಿದೆ. ಜುಲೈ 25 ರಂದು ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇನ್ನು ಜುಲೈ 24 ರಂದು ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್(Ramnath Kovind) ಅವರು ನಿವೃತ್ತರಾಗಲಿದ್ದಾರೆ. ಜುಲೈ 25 ರಂದು ನೂತನ ರಾಷ್ಟ್ರಪತಿಗಳು ಸುಪ್ರೀಂಕೋರ್ಟ್‌(Supremecourt) ಮುಖ್ಯನ್ಯಾಯಮೂರ್ತಿಗಳಿಂದ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇನ್ನು ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ(NDA) ಮೈತ್ರಿಕೂಟ ಅಭ್ಯರ್ಥಿಯಾಗಿ ಒಡಿಶಾ(Odisha) ಮೂಲದ ಆದಿವಾಸಿ ಮಹಿಳೆ ಮತ್ತು ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು(Draupadi Murmu) ಅವರನ್ನ ಆಯ್ಕೆ ಮಾಡಿದೆ.

ಇನ್ನೂ ವಿಪಕ್ಷಗಳು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ(Yashwanth Sinha) ಅವರನ್ನ ಅಭ್ಯರ್ಥಿಯಾಗಿಸಿವೆ.  ಸದ್ಯದ ಮತ ಮೌಲ್ಯದ ಲೆಕ್ಕಾಚಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಗೆಲ್ಲುವುದು ಬಹುತೇಕ ಖಚಿತ ಎಂದೇ ಹೇಳಬಹುದು. ರಾಷ್ಟ್ರಪತಿ ಚುನಾವಣೆಯ ಮತಗಳ ಒಟ್ಟು ಮೌಲ್ಯ-10,98,882 ಇದ್ದು, ರಾಷ್ಟ್ರಪತಿಗಳ ಆಯ್ಕೆಗೆ ಅಗತ್ಯವಾಗಿರುವ ಮತಗಳ ಮೌಲ್ಯ – 5,49,442. ಆದರೆ  ಬಿಜೆಪಿ ನೇತೃತ್ವದ ಎನ್‌ಡಿಎ  ಮೈತ್ರಿಕೂಟದ ಮತಗಳ ಮೌಲ್ಯ – 5,27,371  ಶೇಕಡಾ 48.10.  ಅದೇ ರೀತಿ  ವಿರೋಧ ಪಕ್ಷಗಳ ಒಟ್ಟು ಮತಗಳ ಮೌಲ್ಯ-1,73,849 ಶೇ.15.90 ಮಾತ್ರ. 

ಹೀಗಾಗಿ ಇತರ ಸಣ್ಣ ಪಕ್ಷಗಳ ನೆರವಿನೊಂದಿಗೆ  ಬಿಜೆಪಿ ನೇತೃತ್ವದ ಅಭ್ಯರ್ಥಿ ಸುಲಭವಾಗಿ ಗೆಲುವು  ಸಾಧಿಸಲಿದ್ದಾರೆ. ಆ ಮೂಲಕ ದ್ರೌಪದಿ ಮುರ್ಮು ಅವರು ದೇಶದ ಮೊದಲ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಷ್ಟಪತಿಯಾಗಲಿದ್ದಾರೆ.

Exit mobile version