20 ವರ್ಷದ ಯುವತಿಗೆ 51 ಬಾರಿ ಇರಿದು ಹತ್ಯೆಗೈದ ದುಷ್ಕರ್ಮಿ ; ಆರೋಪಿಗಾಗಿ ಶೋಧ!

Chattisgarh : ಛತ್ತೀಸ್‌ಗಢದ (women murder in Chattisgarh) ಕೊರ್ಬಾ ಜಿಲ್ಲೆಯಲ್ಲಿ 20 ವರ್ಷದ ಯುವತಿಗೆ, ಯುವಕನೊಬ್ಬ 51 ಬಾರಿ ಇರಿದು ಆಕೆಯನ್ನು ಹತ್ಯೆಗೈದಿರುವ ಘಟನೆ ನಗರದ ಪೊಲೀಸರನ್ನು ಬೆಚ್ಚಿಬೀಳಿಸಿದೆ.

ಶನಿವಾರ (ಡಿಸೆಂಬರ್ 24) ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (ಎಸ್ ಇಸಿಎಲ್) ಪಂಪ್ ಹೌಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಘಟನೆಯ ವಿವರ :

ಪೊಲೀಸ್‌ ಅಧಿಕಾರಿಗಳು ನೀಡಿರುವ ವರದಿ ಪ್ರಕಾರ, ಜಶ್‌ಪುರ (women murder in Chattisgarh) ಜಿಲ್ಲೆಯಲ್ಲಿ ವಾಸವಿದ್ದ ಆರೋಪಿ ಹತ್ಯೆಯಾದ ಯುವತಿಗೆ ಪರಿಚಿತನಾಗಿದ್ದು,

ಆಕೆ ತನ್ನ ಮನೆಯಲ್ಲಿ ಒಬ್ಬಂಟಿಯಾಗಿರುವ ಸಮಯವನ್ನು ನೋಡಿಕೊಂಡು ಭೇಟಿಯಾಗಲು ಬಂದಿದ್ದ. ಇವರಿಬ್ಬರು ಭೇಟಿಯಾದಾಗ ಮತ್ತೊಬ್ಬ ವ್ಯಕ್ತಿಯ ಜತೆಗಿನ ಸಂಬಂಧದ ಬಗ್ಗೆ ತಿಳಿದು ವಾಗ್ವಾದಕ್ಕಿಳಿದಿದ್ದಾನೆ.

ಮನನೊಂದ ಆರೋಪಿ, ಆಕೆಯ ಬಾಯಿಯನ್ನು ದಿಂಬಿನಿಂದ ಮುಚ್ಚಿ 51 ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಕೊರ್ಬಾದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.

ಸಂತ್ರಸ್ತೆಯ ಸಹೋದರ ಸೋಮವಾರ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ : https://youtu.be/bhzZkpi6OVo ಆಳ್ವಾಸ್ ಆವರಣದಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ವೈಭವ

ಆರೋಪಿಯು ಮೂರು ವರ್ಷಗಳ ಹಿಂದೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿದ್ದ, ಆರೋಪಿ ಪ್ರತಿದಿನ ಆ ನಗರದಲ್ಲಿ ಸಂಚರಿಸುವ ಬಸ್‌ನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದನ್ನು ಮತ್ತು ಯುವತಿ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಳು.

https://vijayatimes.com/cji-chandrachud-asked-supremecourt/

ಈ ಮೂಲಕ ಅಪರಿಚಿತರು ಚಿರಪರಿಚಿತರಾಗಿದ್ದಾರೆ ಎನ್ನಲಾಗಿದೆ.ಆರೋಪಿಯು ತನ್ನ ಕೆಲಸಕ್ಕಾಗಿ ಗುಜರಾತ್‌ನ (Gujarat) ಅಹಮದಾಬಾದ್‌ಗೆ (Ahmedabad) ತೆರಳಿದ್ದನ್ನು.

ದೂರವಿದ್ದರು ಇಬ್ಬರೂ ಫೋನ್‌ನಲ್ಲಿ ದಿನನಿತ್ಯ ಸಂಪರ್ಕದಲ್ಲಿದ್ದರು. ಯುವತಿ ಆತನೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ಏಕಾಏಕಿ ನಿಲ್ಲಿಸಿದ ನಂತರ, ಆರೋಪಿ ಕೊರ್ಬಾಗೆ ಬಂದು ಆಕೆಯನ್ನು ಭೇಟಿಯಾಗಲು ಮನೆಗೆ ಬಂದಿದ್ದಾನೆ ಎಂಬುದು ತಿಳಿದುಬಂದಿದೆ ಎಂದು ಎಸ್‌.ಪಿ ಸಿಂಗ್ ಹೇಳಿದರು.

ಸದ್ಯ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Exit mobile version