ಬಿಯರ್ ಬೇಡ ನೀರು ಬೇಕು: ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ಮಹಿಳೆಯರ ಪ್ರತಿಭಟನೆ

Bagalkote: ಹೊಸದಾಗಿ ರಾಜ್ಯದಲ್ಲಿ 1000 ಮದ್ಯದಂಗಡಿಯನ್ನು ತೆರೆಯಲು ಚಿಂತಿಸುತ್ತಿರುವ (Womens protest against Alchohal Shop) ಸರ್ಕಾರದ ಕ್ರಮವನ್ನು ವಿರೋಧಿಸಿ

ಮತ್ತು ಸಂಪೂರ್ಣವಾಗಿ ಮದ್ಯವನ್ನು ನಿಷೇಧಿಸುವಂತೆ ರಾಜ್ಯಾದ್ಯಂತ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಯಚೂರಿನಲ್ಲಿ (Raichur) ಮಹಿಳೆಯರು ಗಾಂಧಿ ಜಯಂತಿ

(Gandhi Jayanthi) ಕಾರ್ಯಕ್ರಮಕ್ಕೆ ಬಂದ ಸಚಿವರಿಗೆ ಘೇರಾವ್ ಹಾಕುವ ಯತ್ನವೂ ನಡೆಯಿತು.​

ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಈ ನಡುವೆ ಅಬಕಾರಿ ಸಚಿವ ಆರ್​.ಬಿ ತಿಮ್ಮಾಪುರ (ಆರ್​.ಬಿ ತಿಮ್ಮಾಪುರ) ಅವರ ತವರು ಜಿಲ್ಲೆಯಾದ ಬಾಗಲಕೋಟೆಯಲ್ಲಿ ಮದ್ಯಪಾನ

ನಿಷೇಧಿಸುವಂತೆ (Alcohol Ban) ಮಹಿಳೆಯರು ಬೀದಿಗೆ ಇಳಿದಿದ್ದು, ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಕಳೆದ ಎರಡು ದಿನಗಳಿಂದ ಮಹಿಳೆಯರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಭಾನುವಾರ ಇಡೀ ದಿನ ಮತ್ತು ಅಹೋರಾತ್ರಿ ಧರಣಿ ನಡೆಸಿದರು. ಸೋಮಾವರ ಕೂಡ ಪ್ರತಿಭಟನೆ ಮುಂದುವರೆದಿದ್ದು, ಮದ್ಯಪಾನ ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. “ಬೀರು ಬೇಡ ನೀರು ಬೇಕು”

“ಸಾರಾಯಿ ಬೇಡ ಶಿಕ್ಷಣ ಬೇಕು” ಎಂದು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಕಾಂಗ್ರೆಸ್​ ಶಾಸಕ ಹೆಚ್ ವೈ ಮೇಟಿ, ಜಿಲ್ಲಾಧಿಕಾರಿ ಕೆ.ಎಮ್​. ಜಾನಕಿ (K.M. Janaki) ಭೇಟಿ ನೀಡಿದ್ದಾರೆ.

ಶಾಸಕ ಹಾಗೂ ಜಿಲ್ಲಾಧಿಕಾರಿ ಎದುರು ಮಹಿಳೆಯರು “ಸಾರಾಯಿ ಕುಡಿದು ನಮ್ಮ ಗಂಡ, ಮಕ್ಕಳು ಮೃತರಾಗುತ್ತಿದ್ದಾರೆ. ನಮ್ಮ ಕುಟುಂಬಗಳು ಬೀದಿಗೆ ಬರುತ್ತಿವೆ. ಆದ್ದರಿಂದ ಸಾರಾಯಿ ಬಂದ್ ಮಾಡಿಸಿ.

ಗ್ರಾಮೀಣ ಭಾಗದಲ್ಲಿ ಆಕ್ರಮವಾಗಿ ಎಲ್ಲೆಂದರಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು, ಅದನ್ನು (Womens protest against Alchohal Shop) ತಡೆಯಿರಿ ಎಂದು ಕಣ್ಣೀರು ಹಾಕಿದರು.

ಮಹಿಳೆಯರು ಸಾರಾಯಿ ಬಂದ್​ ಮಾಡಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು. ಮದ್ಯನಿಷೇಧ ಆಂದೋಲನ ಪ್ರಗತಿಪರ ಸಂಘಟನೆ ಒಕ್ಕೂಟ ಧರಣಿ ನಡೆಸಿ,

ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ. ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದರು

ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಅಕ್ರಮ‌ ಮದ್ಯ ಮಾರಾಟಗಾರರ ಮೇಲೆ ಕ್ರಮಕ್ಕೆ ಸರ್ಕಾರ ಮುಂದಾಗಬೇಕು. ಗ್ರಾಮಸಭೆಗೆ ಪರಮಾಧಿಕಾರ ನೀಡುವ ಆದೇಶ ಹೊರಡಿಸಬೇಕು.

ಹೊಸದಾಗಿ ಒಂದು ಸಾವಿರ ಮದ್ಯದಂಗಡಿ ಪರವಾನಿಗೆ ಪ್ರಸ್ತಾವವನ್ನು ಹಿಂಪಡಯಬೇಕು ಎಂದು ಒತ್ತಾಯಿಸಿದರು.

ಈ ಘಟನೆ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನೆ ಕಾವನ್ನು ತಿಳಿಸಿಗೊಳಿಸಿದರು. ಕೊನೆಗೆ ಎನ್ಎಸ್ ಬೋಸರಾಜ್ (N.S.Bosaraju) ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ,

ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.

ಇದನ್ನು ಓದಿ: ಬೆಂಗಳೂರು ವಿವಿ ದೂರ ಶಿಕ್ಷಣ ಪ್ರವೇಶಾತಿಗೆ ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ

Exit mobile version