ಜಗತ್ತಿನಲ್ಲಿವೆ ನಿಮ್ಮನ್ನು ಬೆರಗುಗೊಳಿಸುವ ಅತ್ಯಂತ ವಿಶಿಷ್ಟ ಜಲಪಾತಗಳು!

ಜಲಪಾತಗಳು(World Amazing Waterfalls) ನಿಸರ್ಗದ ಸುಂದರ ಸೃಷ್ಟಿಗಳಲ್ಲಿ ಒಂದು. ಅತ್ಯಂತ ಎತ್ತರದಿಂದ ಭೋರ್ಗರೆಯುತ್ತಾ ಧುಮುಕುವ ಅದ್ಭುತ ಜಲಪಾತಗಳನ್ನು ನೋಡುವುದೇ ಚಂದ. ಕೆಲವು ಜಲಪಾತಗಳು ತಮ್ಮ ವೈಶಿಷ್ಟ್ಯತೆಯಿಂದಲೇ ಜಗತ್ಪ್ರಸಿದ್ಧವಾಗಿವೆ. ಅಂತಹ ಕೆಲವು ವಿಶಿಷ್ಟ ಜಲಪಾತಗಳ ವಿವರ ಇಲ್ಲಿದೆ ನೋಡಿ.


ವೆನೆಜುವೆಲಾದಲ್ಲಿರುವ 3,212 ಅಡಿ ಏಜಂಲ್ ಜಲಪಾತ : ಏಜೆಂಲ್ಸ್ ಜಲಪಾತ(World Amazing Waterfalls), ಕೆರೆಪಕುಪೈ ಮೆರು ಎಂಬ ಮತ್ತೊಂದು ಹೆಸರಿನಿಂದಲೂ ಜನಪ್ರಿಯವಾಗಿದೆ.

ವಿಶ್ವದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿರುವ ಇದರ ಎತ್ತರ 3212 ಅಡಿಗಳಷ್ಟಿದೆ!

ಈ ಏಂಜಲ್ ಜಲಪಾತ ವೆನೆಜುವೆಲಾದ ಕೆನೈಮಾ ನ್ಯಾಶನಲ್ ಪಾರ್ಕ್‍ನಲ್ಲಿದೆ. ಅದು ದಕ್ಷಿಣ ಅಮೆರಿಕಾದ ಬೋಲಿವರ್ ರಾಜ್ಯದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೂ ಹೌದು.

ಈ ಪ್ರಕೃತಿಯ ಅತ್ಯಾಕರ್ಷಕ ಸೃಷ್ಟಿಯಾದ ಏಂಜಲ್ ಜಲಪಾತದ ಸೊಬಗನ್ನು ಸವಿಯಲು ಇಲ್ಲಿಗೆ ಪ್ರತಿ ವರ್ಷ ಒಂದು ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ : https://vijayatimes.com/siddaramaiah-about-bridge-collapse/


2953 ಅಡಿ ಎತ್ತರದ ಓಲೋ ಉಪೇನಾ ಜಲಪಾತ, ಹವಾಯಿ : ವಿಶ್ವದ ಅತೀ ಎತ್ತರ, ಕಡಲ ತೀರದ ಬಂಡೆಗಳಿಂದ ಧುಮುಕುವ ಓಲೋ ಉಪೇನಾ ಜಲಪಾತ 2953 ಅಡಿ ಎತ್ತರವಿದ್ದು, ಹವಾಯಿಯಲ್ಲಿರುವ ದ್ವೀಪವಾದ ಮೋಲೋಕೈಯಲ್ಲಿದೆ.

ಈ ಸುಂದರ ಜಲಪಾತ ಅತ್ಯಂತ ಆಳವಾಗಿ ಇರುವುದರಿಂದ ಅದನ್ನು ಸಾಗರದ ಮೂಲಕ ಅಥವಾ ವಾಯು ಮಾರ್ಗದ ಮೂಲಕವಷ್ಟೇ ನೋಡಬಹುದು.

ಅದು ಕ್ವಾಜುಲ್ ಪ್ರಾಂತ್ಯದಲ್ಲಿರುವ ಡ್ರಾಕೆನ್ಸ್‍ಬರ್ಗ್ ಪರ್ವತದ ಸಮೀಪವಿರುವ ತುಗೇಲಾ ನದಿಯ ಮೂಲದಲ್ಲಿದೆ. ಇನ್ನು, ಪ್ರಕೃತಿ ಮತ್ತು ಅದರ ಸೌಂದರ್ಯವು ನಮ್ಮನ್ನು ಮಂತ್ರಮುಗ್ಧರನ್ನಾಗಿಸುವ ಹಲವಾರು ಸಂದರ್ಭಗಳನ್ನು ನೋಡಿರುತ್ತವೆ.

ಪ್ರಕೃತಿಯ ಇಂತಹ ವಿಸ್ಮಯಕ್ಕೆ ಉತ್ತಮ ಉದಾಹರಣೆಯಾಗಿರುವುದು ಪೆರುವಿನ ಈ ಜಲಪಾತವಾದ ವಧುವಿನ ಜಲಪಾತ.

ಹೌದು, ಈ ವಿಶಿಷ್ಟ ಜಲಪಾತದ ಹೆಸರೇ “ವಧುವಿನ ಜಲಪಾತ”. ಪೆರುವಿನ ಈ ಜಲಪಾತವು ಮದುವೆಯ ಡ್ರೆಸ್ ಮತ್ತು ಮುಸುಕು ಧರಿಸಿದ ವಧುವನ್ನು ಹೋಲುತ್ತದೆ.

ಮದುವೆಯ ಡ್ರೆಸ್ ಮತ್ತು ಮುಸುಕು ಧರಿಸಿದ ವಧುವನ್ನು ಹೋಲುವ ಜಲಪಾತದ ವೀಡಿಯೋ ಕೂಡ ಲಭ್ಯವಿದ್ದು, ಪ್ರವಾಸಿಗರು ಇದನ್ನು ನೋಡಿ ಬೆರಗಾಗಿದ್ದಾರೆ. ಈ ವಧುವಿನ ಜಲಪಾತವು ಪೆರುವಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.


2999 ಅಡಿ (914ಮೀ) ಎತ್ತರವಿರುವ ಟ್ರೆಸ್ ಹೆರ್ಮನಸ್ ಜಲಪಾತ : ಇದು ವಿಶ್ವದ ಮೂರನೆಯ ಅತ್ಯಂತ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದರ ಒಟ್ಟು ಎತ್ತರ 2999 ಅಡಿ! ಅತೀ ಎತ್ತರದಿಂದ ಭೋರ್ಗರೆಯುವ ಈ ಸುಂದರ ಜಲಪಾತವನ್ನು ನೋಡಬೇಕೆಂದರೆ, ಪೆರುವಿಯನ್ ಪ್ರಾಂತ್ಯದಲ್ಲಿರುವ ಜುನೀನ್‍ನಲ್ಲಿರುವ ಒಟಿಶಿ ನ್ಯಾಶನಲ್ ಪಾರ್ಕ್‍ಗೆ ಹೋಗಬೇಕು.

ಇದನ್ನೂ ಓದಿ : https://vijayatimes.com/kantara-song-controversy/

ಸುತ್ತಲೂ ದಟ್ಟ ಕಾಡಿನಿಂದ ಆವೃತವಾತವಾದ ಪ್ರದೇಶದಲ್ಲಿರುವ ಈ ಸುಂದರ ಜಲಪಾತದ ಸೊಬಗನ್ನು ಸವಿಯುವುದು ಒಂದು ಉಲ್ಲಾಸದ ಅನುಭವ.

Exit mobile version