ದಾವಣಗೆರೆಯ ನಾಲ್ವರು ವಿಜ್ಞಾನಿಗಳು ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಗೆ ಸೇರ್ಪಡೆ

Davanagere: ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯೊಂದನ್ನು ಅಮೆರಿಕದ (worlds top scientists from DVG) ಸ್ಟ್ಯಾನ್‌ ಫೋರ್ಡ್ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿದ್ದು, ಅದರಲ್ಲಿ

ದಾವಣಗೆರೆ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ.ಸಿ. ಪ್ರಸನ್ನ ಕುಮಾರ (B C Prasanna Kumara) ಅವರು ಸ್ಥಾನ ಪಡೆದಿದ್ದಾರೆ. ಪ್ರಸನ್ನ ಅವರ

ಮಾರ್ಗದರ್ಶನದಲ್ಲಿ ಸಂಶೋಧನೆಗಳನ್ನು ನಡೆಸುತ್ತಿರುವ ಡಾ. ಜೆ.ಕೆ.ಮಧುಕೇಶ್‌, ಡಾ. ಆರ್‌.ಜೆ.ಪುನೀತ್‌ ಗೌಡ, ಡಾ.ಆರ್‌.ನವೀನ್‌ ಕುಮಾರ್‌ ಮತ್ತು ಡಾ. ಆರ್‌.ಎಸ್‌. ವರುಣ್‌ ಕುಮಾರ್‌

ಅವರೂ ಸಹ ಈ ಪಟ್ಟಿಯಲ್ಲಿ (worlds top scientists from DVG ) ಸೇರ್ಪಡೆಯಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಎಚ್‌-ಇಂಡೆಕ್ಸ್‌ (H-Index), ಐ-ಟೆನ್‌ ಇಂಡೆಕ್ಸ್‌

ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ಸ್ಟ್ಯಾನ್‌ ಫೋರ್ಡ್‌ (Stan Ford) ವಿವಿಯು ಸಿದ್ಧಪಡಿಸಲಾಗಿದೆ. ಈ ಮಾನದಂಡಗಳ ಪ್ರಕಾರ ವಿಜ್ಞಾನಿಗಳನ್ನು 22 ವೈಜ್ಞಾನಿಕ

ಕ್ಷೇತ್ರಗಳು ಮತ್ತು 174 ಉಪ-ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ.

ಇದರಲ್ಲಿ ಸತತ ಮೂರನೇ ಬಾರಿಗೆ ದಾವಣಗೆರೆ (Davanagere) ವಿವಿಯ ಗಣಿತಶಾಸ್ತ್ರ ವಿಭಾಗದ ಪ್ರೊ.ಬಿ.ಸಿ. ಪ್ರಸನ್ನಕುಮಾರ್‌ ಈ ವರ್ಷದ ಶ್ರೇಯಾಂಕ ಪಡೆದಿದ್ದು, ಸತತ ಮೂರನೇ ಬಾರಿಗೆ

ಈ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ವೃತ್ತಿ ಜೀವನದ ಸಾಧನೆಯಲ್ಲಿ ಶ್ರೇಯಾಂಕವನ್ನು ಪಡೆದಿರುವುದು ಗಮನರ್ಹವಾಗಿದೆ.

4 ವಿಜ್ಞಾನಿಗಳು ಪ್ರಸುತ್ತ ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಮಾರ್ಗದರ್ಶದಲ್ಲಿಸಂಶೋಧನೆ ನಡೆಸುತ್ತಿರುವ ನಾಲ್ವರು ವಿದ್ಯಾರ್ಥಿಗಳು ಕೂಡ ಗಣಿತಶಾಸ್ತ್ರದ ಶಾಖ

ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ ವಿಷಯಗಳಲ್ಲಿಸಂಶೋಧನೆಯಲ್ಲಿ ತೊಡಗಿದ್ದಾರೆ. ಮಾರ್ಗದರ್ಶಕರೊಡನೆಯೇ ವಿಜ್ಞಾನಿಗಳ ಪಟ್ಟಿಗೆ ಸೇರಿರುವುದು ಸ್ಪೂರ್ತಿದಾಯಕವಾಗಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಟ್ರಾಫಿಕ್ ಸಿಗ್ನಲ್‌ಗೆ ಜಿಪಿಎಸ್: ಸಂಚಾರ ದಟ್ಟಣೆ ಸಮಸ್ಯೆಗೆ ಸಿಗುತ್ತಾ ಮುಕ್ತಿ

Exit mobile version