ಈ 5 ವಿಷಯಗಳ ಬಗ್ಗೆ ಎಚ್ಚರಿಕೆ ಇರಲಿ ; ಇಲ್ಲದೇ ಹೋದರೆ, ನಿಮ್ಮ ವಾಟ್ಸಾಪ್ ಅಕೌಂಟ್ ಬ್ಯಾನ್ ಆಗಬಹುದು!

India : ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ (WhatsApp) ಬಳಸದಿರುವವರು ಯಾರೂ ಇಲ್ಲ. ಮೆಟಾ-ಮಾಲೀಕತ್ವದ ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್, ಕೆಲವೊಮ್ಮೆ ಸ್ಕ್ಯಾಮರ್‌ಗಳು ಮತ್ತು ಹ್ಯಾಕರ್‌ಗಳಿಂದ(Hackers) ಭಾದಿತವಾಗಿ ನಕಲಿ ಸುದ್ದಿಗಳನ್ನು ಹರಡುವ ಸಾಧ್ಯತೆಯಿರುತ್ತದೆ.

ಇಂತಹ ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿಯಂತ್ರಿಸಲು, ವಾಟ್ಸಾಪ್ ಆಗಾಗ ಭದ್ರತಾ ನವೀಕರಣಗಳು ಮತ್ತು ಗೌಪ್ಯತೆ ಸಂಬಂಧಿತ ಸೇವೆಗಳನ್ನು ಬಿಡುಗಡೆ ಮಾಡುತ್ತದೆ.

ತಕ್ಷಣ-ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರನ್ನು ಸ್ಕ್ಯಾಮರ್‌ಗಳು ಮತ್ತು ಇತರ ಅನುಮಾನಾಸ್ಪದ ಖಾತೆಗಳಿಂದ ಸುರಕ್ಷಿತವಾಗಿರಿಸಲು, ಭದ್ರತಾ ಕ್ರಮಗಳು ಮತ್ತು ಸ್ಪ್ಯಾಮ್ ಪತ್ತೆ ತಂತ್ರಜ್ಞಾನವನ್ನು ನಿಯಮಿತವಾಗಿ ನವೀಕರಿಸುತ್ತದೆ.


ಇನ್ನು, ವಾಟ್ಸಾಪ್ ಖಾತೆಯ ಬಳಕೆದಾರರು ಸ್ಪ್ಯಾಮ್, ವಂಚನೆಗಳಲ್ಲಿ ತೊಡಗಿಸಿಕೊಂಡಾಗ ಅಥವಾ ವಾಟ್ಸಾಪ್ ಸೇವಾ ನಿಯಮಗಳನ್ನು ಉಲ್ಲಂಘಿಸಿದಾಗ,

ಕಂಪನಿಯು ಬಳಕೆದಾರರ ಸಂಖ್ಯೆಯನ್ನು ನಿರ್ಬಂಧಿಸುತ್ತದೆ ಮತ್ತು ನಿಷೇಧಿಸುತ್ತದೆ. ವಾಟ್ಸಾಪ್ನ ಮಾಸಿಕ ಬಳಕೆದಾರರ ಸುರಕ್ಷತಾ ವರದಿಯ ಪ್ರಕಾರ,

ಇದನ್ನೂ ಓದಿ : https://vijayatimes.com/bjp-targets-siddaramaiah-/

ಆಗಸ್ಟ್ ತಿಂಗಳಲ್ಲಿ 2.3 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ! ಹಾಗಾಗಿ ವಾಟ್ಸಾಪ್ ನಲ್ಲಿ ಸಂದೇಶಗಳನ್ನು ಕಳುಹಿಸುವಾಗ ಯಾವಾಗಲೂ ಜಾಗರೂಕರಾಗಿರಲು ಸೂಚಿಸಲಾಗುತ್ತದೆ. ಬಳಕೆದಾರರ ಖಾತೆಗಳನ್ನು ಬ್ಯಾನ್ ಮಾಡುವುದನ್ನು ತಡೆಯಲು ವಾಟ್ಸಪ್ಪ್ ಕೆಲವು ಪ್ರಮುಖ ಸೂಚನೆಗಳನ್ನು ಸಹ ನೀಡಿದೆ.


ವಾಟ್ಸಾಪ್ನಲ್ಲಿ ನಿಮ್ಮ ಖಾತೆಯನ್ನು ಬ್ಯಾನ್ ಮಾಡುವುದನ್ನು ತಡೆಯಲು ಸಲಹೆಗಳು : ನೀವು ಕಳಿಸುತ್ತಿರುವ ಸಂದೇಶವು ಸತ್ಯವೇ ಅಥವಾ ಅಸಲಿ ಮೂಲದಿಂದ ಬ್ಯಾಕಪ್ ಆಗಿದೆಯೇ ಎಂದು ನಿಮಗೆ ಖಚಿತವಿಲ್ಲದಿದ್ದರೆ, ಅಂತಹ ಸಂದೇಶವನ್ನು ಫಾರ್ವರ್ಡ್ ಮಾಡಬೇಡಿ.

ಅನಗತ್ಯ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ಪತ್ತೆಹಚ್ಚಲು ಮತ್ತು ನಿಷೇಧಿಸಲು ವಾಟ್ಸಾಪ್, ಯಂತ್ರ ಕಲಿಕೆ ತಂತ್ರಜ್ಞಾನ ಮತ್ತು ಬಳಕೆದಾರರ ವರದಿಗಳನ್ನು ಬಳಸುತ್ತದೆ ಎಂದು ಹೇಳಲಾಗುತ್ತದೆ.


ಪ್ರಸಾರ ಪಟ್ಟಿ(ಬ್ರಾಡ್ ಕಾಸ್ಟ್ ಲಿಸ್ಟ್) ಮೂಲಕ ಸಂದೇಶಗಳನ್ನು ಕಳುಹಿಸುವ ಬಳಕೆಯನ್ನು ಮಿತಿಗೊಳಿಸಿ.

ಪ್ರಸಾರ ಸಂದೇಶಗಳನ್ನ ಪದೇ ಪದೇ ಕಳುಹಿಸುವುದೂ ಸಹ ನಿಮ್ಮ ಸಂದೇಶಗಳನ್ನು ವರದಿ ಮಾಡಲು ಕಾರಣವಾಗಬಹುದು. ನಿಮ್ಮ ಖಾತೆಯನ್ನು ಹಲವು ಬಾರಿ ವರದಿ ಮಾಡಿದರೆ, ವಾಟ್ಸಾಪ್ ನಿಮ್ಮ ಖಾತೆಯನ್ನು ನಿಷೇಧಿಸುತ್ತದೆ.


ಗೌಪ್ಯತೆಯನ್ನು ಗೌರವಿಸಿ ಮತ್ತು ಇತರ ಬಳಕೆದಾರರನ್ನು ಅವರು ಇರಲು ಬಯಸದ ಗುಂಪುಗಳಿಗೆ ಎಂದಿಗೂ ಸೇರಿಸಬೇಡಿ.

ಅಲ್ಲದೆ, ಯಾರಾದರೂ ನಿಮಗೆ ಈ ಬಗ್ಗೆ ತಿಳಿಸಿದರೆ, ಸಂದೇಶ ಕಳುಹಿಸುವುದನ್ನು ನಿಲ್ಲಿಸಿ.

ಪದೇ ಪದೇ ಇದನ್ನು ಉಲ್ಲಂಘಿಸಿದರೆ, ನೀವು ಇತರ ಬಳಕೆದಾರರಿಂದ ವರದಿಯಾಗಬಹುದು ಮತ್ತು ಹಲವಾರು ಬಾರಿ ನಿಮ್ಮ ಖಾತೆಯ ಬಗ್ಗೆ ವರದಿಯಾದರೆ ವಾಟ್ಸಾಪ್ ನಿಮ್ಮ ಖಾತೆಯನ್ನು ನಿರ್ಬಂಧಿಸುತ್ತದೆ.

https://youtu.be/X0N-X9ugedA ಕಂಠೀರವ ಕಿರಿಕ್‌ ! ಕಂಠೀರವ ಸ್ಟೇಡಿಯಂ ಒಳಗೆ ಅಥ್ಲೀಟ್ಸ್‌ಗೆ ಅವಕಾಶ ಪ್ರವೇಶವಿಲ್ಲ. COVER STORY


ವಾಟ್ಸಾಪ್ನ ಸೇವಾ ನಿಯಮಗಳನ್ನು ಉಲ್ಲಂಘಿಸಬೇಡಿ. ಎಂದಿಗೂ ಸುಳ್ಳು ಸುದ್ದಿಗಳನ್ನು ಪ್ರಕಟಿಸಬೇಡಿ ಅಥವಾ ಕಾನೂನು ಬಾಹಿರ, ಮಾನಹಾನಿಕರ, ಬೆದರಿಸುವ ಅಥವಾ ಕಿರುಕುಳ ನೀಡುವ ನಡವಳಿಕೆಯಲ್ಲಿ ತೊಡಗಬಾರದು. ವಾಟ್ಸಾಪ್ “ನಮ್ಮ ಸೇವೆಗಳ ಸ್ವೀಕಾರಾರ್ಹ ಬಳಕೆ” ವಿಭಾಗದ ಅಡಿಯಲ್ಲಿ ಬಳಕೆದಾರರ ಮಾರ್ಗಸೂಚಿಗಳನ್ನು ಉಲ್ಲೇಖಿಸಿದೆ.


ಇನ್ನು, ನೀವು ಇಂತಹ ಯಾವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಇದ್ದರೂ, ಆಕಸ್ಮಿಕವಾಗಿ ನಿಮ್ಮ ಖಾತೆಯನ್ನು ವಾಟ್ಸಾಪ್ ನಲ್ಲಿ ನಿಷೇಧಿಸಿದರೆ, ನೀವು ಇ-ಮೇಲ್(E Mail) ಮೂಲಕ ಅವರನ್ನು ಸಂಪರ್ಕಿಸಬಹುದು ಅಥವಾ ವಿಮರ್ಶೆಯನ್ನು ವಿನಂತಿಸಬಹುದು. ನಿಮ್ಮ ಖಾತೆಯನ್ನು ನಿಷೇಧಿಸಿದರೆ #WhatsApp ನಿಮಗೆ ಮೇಲ್ ಮತ್ತು ನೋಟಿಫಿಕೇಟಿನ್ ಕಳುಹಿಸುತ್ತದೆ.

Exit mobile version