New Delhi (ಜೂ.26) : ದೇಶದ ಅಗ್ರ ಕುಸ್ತಿಪಟುಗಳು ಜನವರಿಯಿಂದಲೂ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) (wrestlers fight in court)
ನಿರ್ಗಮಿತ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ (Brij Bhushan Sharan Singh) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು ಆದರೆ ಇನ್ನು ಮುಂದೆ ರಸ್ತೆಯಲ್ಲಿ ಪ್ರತಿಭಟನೆ ಮಾಡದೇ
ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುವುದಾಗಿ (wrestlers fight in court) ತಿಳಿಸಿದ್ದಾರೆ.

ಕುಸ್ತಿಪಟುಗಳಾದ ಭಜರಂಗ್ (Bajrang Punia), ವಿನೇಶ್ ಫೋಗಟ್ (Vinesh Phogat), ಸಾಕ್ಷಿ ಮಲಿಕ್ (Sakshi Malik) ಜಂತರ್ಮಂತರ್ ಅಥವಾ ಬೇರೆ ಕಡೆ ಎಲ್ಲೂ ಪ್ರತಿಭಟನೆ
ಮುಂದುವರಿಸುವುದಿಲ್ಲ ಎಂದು ಟ್ವೀಟರ್ (Twitter) ಮೂಲಕ ಭಾನುವಾರ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕುಸ್ತಿಪಟುಗಳು (Wrestlers) ನೀಡಿದ ಬೇಡಿಕೆಗಳನ್ನು ಸರ್ಕಾರವು ಈಡೇರಿಸಿದೆ.ಈಗಾಗಲೇ ತನಿಖೆ
ಪೂರ್ಣಗೊಳಿಸಿ, ಚಾರ್ಜ್ಶೀಟ್ ಕೂಡಾ ಸಲ್ಲಿಕೆಯಾಗಿದೆ. ಇನ್ನು ನ್ಯಾಯಾಲಯದಲ್ಲಿಯೇ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಬದಲಾಗಿ ರಸ್ತೆಯಲ್ಲಿ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಕುಸ್ತಿಪಟುಗಳು ಸರ್ಕಾರದ ಭರವಸೆ ಬಳಿಕ ಇತ್ತೀಚೆಗಷ್ಟೇ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಓರ್ವ ಅಪ್ರಾಪ್ತೆ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಭಾರತೀಯ
ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಹೀಗಾಗಿ ಒಲಿಂಪಿಯನ್ಗಳಾದ ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಹಾಗೂ ಭಜರಂಗ್ ಪೂನಿಯಾ ನೇತೃತ್ವದಲ್ಲಿ
ಬ್ರಿಜ್ಭೂಷಣ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ದೀರ್ಘಕಾಲದವರೆಗೆ ದೆಹಲಿಯ (Delhi) ಜಂತರ್ ಮಂತರ್ನಲ್ಲಿ (Jantar Mantar) ಪ್ರತಿಭಟನೆ ನಡೆಸಿದ್ದರು.

ಅಪ್ರಾಪ್ತೆ ಸೇರಿದಂತೆ 7 ಮಂದಿ ಕಳೆದ ಏಪ್ರಿಲ್ನಲ್ಲಿ(April) ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಬ್ರಿಜ್ಭೂಷಣ್ ವಿರುದ್ಧ ದೆಹಲಿ ಪೊಲೀಸರು ಪೋಕ್ಸೋ (Poxo) ಸೇರಿ 2 ಎಫ್ಐಆರ್ (FIR) ದಾಖಲಿಸಿದ್ದರು.
ಈ ಪ್ರಕಾರಣದ ಬಗ್ಗೆ ಪೊಲೀಸರು 5 ದೇಶಗಳಲ್ಲಿ ನಡೆದಿದ್ದ ಕುಸ್ತಿ ಕೂಟಗಳ ಸಂದರ್ಭಗಳಲ್ಲಿ ದಾಖಲಾಗಿದ್ದ ಸಿಸಿಟೀವಿ ದೃಶ್ಯಗಳ ಪರಿಶೀಲನೆ, ರೆಫ್ರಿ ಹಾಗೂ ಕೋಚ್ಗಳು ಮತ್ತು ಕುಸ್ತಿಪಟುಗಳು
ಸೇರಿದಂತೆ 180ಕ್ಕೂ ಹೆಚ್ಚು ಮಂದಿಯ ಹೇಳಿಕೆ ದಾಖಲಿಸಿಕೊಂಡು ದೆಹಲಿ ಮ್ಯಾಜಿಸ್ಪ್ರೇಟ್ ಕೋರ್ಚ್ಗೆ ನಂತರ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ.
ವಿವಿಧ ಸೆಕ್ಷನ್ಗಳಡಿ ಚಾರ್ಜ್ಶೀಟ್
ಪೋಕ್ಸೋ ಕೇಸ್ ಅನ್ನು ಬ್ರಿಜ್ ವಿರುದ್ಧ ರದ್ದುಗೊಳಿಸಲು ಶಿಫಾರಸು ಮಾಡಲಾಗಿದ್ದರೂ ವಿವಿಧ ಸೆಕ್ಷನ್ಗಳಡಿ ಇತರರ ದೂರುಗಳಿಗೆ ಸಂಬಂಧಿಸಿದಂತೆ ಚಾರ್ಜ್ಶೀಟ್ (Chargesheet) ಸಲ್ಲಿಕೆಯಾಗಿದೆ.
ಐಪಿಸಿ 354ಎ(ಲೈಂಗಿಕ ಕಿರುಕುಳ), 354(ಮಹಿಳೆಯರ ಮೇಲೆ ಹಲ್ಲೆ), 354ಡಿ(ಹಿಂಬಾಲಿಸುವಿಕೆ) ಹಾಗೂ 506 (ಬೆದರಿಕೆ) ಸೆಕ್ಷನ್ಗಳ ಅಡಿಯಲ್ಲಿ ಮುಂತಾದ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ಇದರ
ಜೊತೆಗೆ ಡಬ್ಲ್ಯುಎಫ್ಐನ ಹೆಚ್ಚುವರಿ ಕಾರ್ಯದರ್ಶಿ ವಿನೋದ್ ತೋಮರ್ (Vinod Tomar) ವಿರುದ್ಧ ಐಪಿಸಿ 109, 354, 354ಎ ಹಾಗೂ 506 ಸೆಕ್ಷನ್ಗಳಡಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ
ಇವರು ಈಗಾಗಲೇ ಅಮನತುಗೊಂಡಿದ್ದಾರೆ.
ಗುವಾಹಟಿ ಹೈಕೋರ್ಟ್ ಡಬ್ಲ್ಯುಎಫ್ಐ ಚುನಾವಣೆಗೆ ತಡೆ!
ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಚುನಾವಣೆ ಜುಲೈ 11ರಂದು ನಡೆಯಬೇಕಿತ್ತು ಆದರೆ ಗುವಾಹಟಿ ಹೈಕೋರ್ಟ್ (Guwahati High Court) ಭಾನುವಾರ ತಡೆಯಾಜ್ಞೆ ನೀಡಿದೆ. ಅಸ್ಸಾಂ (Assam)
ಕುಸ್ತಿ ಸಂಸ್ಥೆಯು ಡಬ್ಲ್ಯುಎಫ್ಐ, ತಾತ್ಕಾಲಿ ಸಮಿತಿ ಹಾಗೂ ಕ್ರೀಡಾ ಸಚಿವಾಯಲಯದ ವಿರುದ್ಧ ಡಬ್ಲ್ಯುಎಫ್ಐನ ಅಂಗಸಂಸ್ಥೆ ಸದಸ್ಯನಾಗಲು ಅರ್ಹತೆ ಹೊಂದಿದ್ದರೂ ಸದಸ್ಯತ್ವ ನೀಡಿಲ್ಲ
ಎಂದು ಅರ್ಜಿ ಸಲ್ಲಿಸಿದ್ದರು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಚುನಾವಣೆಗೆ ತಡೆ ನೀಡಿತು.
ರಶ್ಮಿತಾ ಅನೀಶ್