ಅಗತ್ಯವಿದ್ದರೆ ‘ಯೋಗಿ ಮಾದರಿ’ ಜಾರಿಗೆ ತರುತ್ತೇನೆ : ಬಸವರಾಜ ಬೊಮ್ಮಾಯಿ

Basavaraj Bommai

ಕರ್ನಾಟಕದಲ್ಲಿ(Karnataka) ಬಿಜೆಪಿ ಕಾರ್ಯಕರ್ತನ(BJP Worker) ಹತ್ಯೆಯು(Murder) ಭಾರೀ ಪ್ರತಿಭಟನೆಗೆ ಕಾರಣವಾದ ನಂತರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಅಗತ್ಯವಿದ್ದರೆ, ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಲು ರಾಜ್ಯದಲ್ಲಿ ‘ಯೋಗಿ ಆದಿತ್ಯನಾಥ್ ಮಾದರಿ’ಯನ್ನು(Yogi Adityanath Model) ಅನುಸರಿಸುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ವತಃ ಬಿಜೆಪಿ ಕಾರ್ಯಕರ್ತರೇ ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.

ಘಟನೆಯ ನಂತರ ಪಕ್ಷ ಮತ್ತು ಸಂಘಪರಿವಾರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಅಗತ್ಯವಿದ್ದಲ್ಲಿ ಕೋಮುಗಲಭೆಗಳನ್ನು ತಡೆಯಲು ಯೋಗಿ ಆದಿತ್ಯನಾಥ್ ಮಾದರಿಯನ್ನು ಅನುಸರಿಸುತ್ತೇವೆ. ಇಂತಹ ಘಟನೆಗಳನ್ನು ತಡೆಯಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ನಾನು ನೊಂದ ಕುಟುಂಬಕ್ಕೆ ಭರವಸೆ ನೀಡಿದ್ದೇನೆ. ನಾವು ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಪಿಎಫ್ಐ(PFI) ಮತ್ತು ಎಸ್ಡಿಪಿಐ(SDPI) ನಿಷೇಧಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ನಾವು ಏನು ಮಾಡಬೇಕೋ ಅದನ್ನು ಮಾಡಿದ್ದೇವೆ, ಪಿಎಫ್ಐ ನಿಷೇಧಿಸುವ ಪ್ರಕ್ರಿಯೆ ನಡೆಯುತ್ತಿದೆ, ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಇದೆ. ಇನ್ನು ಈ ಹತ್ಯೆಯ ನಂತರ ನಮ್ಮ ಹೃದಯದಲ್ಲಿ ಕೋಪವಿದೆ. ಶಿವಮೊಗ್ಗದಲ್ಲಿ ಹರ್ಷ ಹತ್ಯೆಯಾದ ಕೆಲವೇ ತಿಂಗಳುಗಳಲ್ಲಿ ಈ ಘಟನೆ ನಡೆದಿರುವುದು ನನಗೆ ನೋವುಂಟುಮಾಡಿದೆ ಎಂದು ಸಿಎಂ ಹೇಳಿದರು.

ಪ್ರವೀಣ ಕುಮಾರ್‌ ನೆಟ್ಟಾರು ಹತ್ಯೆಯ ನಂತರ, ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಹಲವೆಡೆ ಉದ್ವಿಗ್ನತೆ ಉಂಟಾಗಿದ್ದು, ಕಲ್ಲು ತೂರಾಟ ಮತ್ತು ಪೊಲೀಸ್ ಲಾಠಿಚಾರ್ಜ್ ನಿದರ್ಶನಗಳು ವರದಿಯಾಗಿವೆ. ಪುತ್ತೂರು(Puttur) ಭಾಗದಲ್ಲಿ 144 ಸೆಕ್ಷನ್(Section 144) ಜಾರಿ ಮಾಡಲಾಗಿದ್ದು, ಪ್ರತಿಭಟನೆ ಭುಗಿಲೆದ್ದಿದ್ದರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ಳಾರೆ ಗ್ರಾಮದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Exit mobile version