ಮತ್ತೊಂದು ಮಗುವಿಗೆ ಹೃದಯಾಘಾತ : ಕೊಪ್ಪದ 10ನೇ ತರಗತಿ ವಿದ್ಯಾರ್ಥಿ ಹಾರ್ಟ್‌ ಅಟ್ಯಾಕ್‌ಗೆ ಬಲಿ

Shivamogga : ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ 10ನೇ ತರಗತಿ ಓದುತ್ತಿದ್ದ ಜಯಂತ್ ರಜತಾದ್ರಯ್ಯ(young boy heart attack) ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂಬ ವರದಿ ಈಗ ಬೆಳಕಿಗೆ ಬಂದಿದೆ. ಆನವಟ್ಟಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಜಯಂತ್ ಬೆಳಗ್ಗೆ ಶಾಲೆಗೆ ಹೊರಟ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು.

ತಕ್ಷಣವೇ ಕುಟುಂಬಸ್ಥರು ಜಯಂತ್ ನನ್ನು ಎಣ್ಣೆಕೊಪ್ಪದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಜಯಂತ್ ಆಸ್ಪತ್ರೆಯಲ್ಲೆ ಮೃತ ಪಟ್ಟಿದ್ದಾನೆ.

ದೇಶಾದ್ಯಂತ ವಿದ್ಯಾರ್ಥಿಗಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿದ್ದು ಸಾವಿನ ಮೇಲೆ ಸಾವು ಸಂಭವಿಸುತ್ತಲೆ ಇವೆ.

ಈ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿದ್ರೆ ಎದೆ ಢವಢವ ಅನ್ನುತ್ತೆ. ಯುವ ಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ.

ಯುವ ಪೀಳಿಗೆ ದೈನಂದಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನುವುದರ ಪ್ರತಿಯೊಂದರ ವಿಚಾರವು ತಿಳೀದಿರಬೇಕಾಗಿದೆ.

ಕಳೆದ ಕೆಲ ದಿನಗಳಿಂದ, ಹೃದಯಾಘಾತವು ಯುವಜನತೆಗೆ ಅತ್ಯಂತ ದೊಡ್ಡ ಶತ್ರು ಎಂಬಂತೆ, ದಿನೇ ದಿನೇ ಅಪಾಯದ ಸೂಚನೆಯಿಂದ ತಿಳಿಯುತಿದೆ.

ಇದನ್ನೂ ಓದಿ : https://vijayatimes.com/soaked-almond-benefits/

ಈ ಒಳ ಶತ್ರು ಸಾಮಾನ್ಯವಾಗಿ ಪುರುಷರಲ್ಲಿ 50 ರ ಮೇಲೆ ಹಾಗೂ ಮಹಿಳೆಯರಲ್ಲಿ 65ರ ಮೇಲೆ ಪರಿಣಾಮ ಬೀರುತ್ತಿತ್ತು ಆದರೆ ಇತ್ತೀಚಿಗೆ 15 ವರ್ಷ ಮೇಲ್ಪಟ್ಟ ಇಳಿವಯಸ್ಸಿನ ಮಕ್ಕಳು ಸಹ ಈ ಹೃದಯ ಸಂಬಂಧಿ ದಾಳಿಗೆ ತುತ್ತಾಗುತ್ತಿದ್ದಾರೆ.

PCAD (Premature Coronary Artery Disease) ಅಧ್ಯಯನದ ಪ್ರಕಾರ ಈ ಹೃದಯಾಘಾತಗಳು ಸಾಮಾನ್ಯವಾಗಿ 50 ಅಥವಾ 60 ರ ಕೆಳಗಿನ ವಯಸ್ಸಿನಲ್ಲಿ ಸಂಭವಿಸುವ ಎದೆ ನೋವು ಸಾಮಾನ್ಯವಾಗಿ ಹೃದಯಾಘಾತಗಳಲ್ಲ ಎಂದು ವೈಧ್ಯಲೋಕ ತಿಳಿಸುತ್ತದೆ.

ಆದರೆ ಕಿರಿಯ ವಯಸ್ಸಿನವರಲ್ಲಿ ತೀರ ವಿಭಿನ್ನ ರೀತಿಯಲ್ಲಿ ಈ ಅಪಘಾತವು ಪ್ರಚೋದಕರಿಯಾಗಿ ಕಾಣಿಸುತ್ತಿದೆ. ಈ ಪ್ರಕರಣಗಳಲ್ಲಿ ಶೇ.12-13ರಷ್ಟು ಜನರು ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿದವರಾಗಿರುತ್ತಾರೆ.

ಯುವ ಜನತೆ ಅಥವಾ ಕಿರಿಯ ವಯಸ್ಸಿನ ರೋಗಿಗಳಲ್ಲಿ CHD (Coronary heart disease)ಅನ್ನು ಅಂಶವು ಹಿರಿಯರಿಗಿಂತ ಭಿನ್ನವಾಗಿರುತ್ತದೆ.

ಇದರಿಂದಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಹೃದಯಾಘಾತದ ಸಾವು ಕೇವಲ ಕೆಟ್ಟ ಜೀವನಶೈಲಿಯಿಂದ ಅಥವಾ ಒತ್ತಡಗಳಿಂದ ಮಾತ್ರವಲ್ಲ. ಮಾಲಿನ್ಯ ಆಗಿರಬಹುದು,

ಅಧಿಕ ಕಾರ್ಬ್ ಆಹಾರ ಸೇವನೆಯೂ ಸಹ ಹೃದಯಾಘಾತದ ಹೆಚ್ಚನ ಪರಿಣಾಮ ಬೀರುತ್ತದೆ.

ಈಗಿನ ಯುವಜನರು ಯಾವ ಆಹಾರ ಸೇವಿಸುತ್ತಿದ್ದಾರೆ ಅನ್ನುವುದಕ್ಕಿಂತ, ಇದು ಯಾವ ರೀತಿ ಆರೋಗ್ಯದ ಸಮಸ್ಯೆಯನ್ನು (young boy heart attack) ಉಂಟುಮಾಡುತ್ತಿದೆ ಎಂಬುದನ್ನು ನಾವು ಅರಿಯಬೇಕಾಗಿದೆ.

ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು, ಸಿಎಆರ್(CAR) ಬೋಹೈಡ್ರೇಟ್ ಗಳ ಆಹಾರವಾಗಿರಬಹುದು,

ಅಥವಾ ಬೇರೆ ಬೇರೆ ರೀತಿಯ ಮಾಂಸ ಆಹಾರವನ್ನು ಸೇವಿಸುವುದರಿಂದನ್ನು ಈ ಅನರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಇದರಿಂದ ಹೇಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ :

ಪತ್ರಿದಿನ ವ್ಯಾಯಾಮ ಮಾಡುವುದು, ಪೌಷ್ಟಿಕಾಂಶದ ಆಹಾರ ಸೇವನೆ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು,

ಒತ್ತಡ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದು. ಬೊಜ್ಜು, ಮಧುಮೇಹ, ಕಳಪೆ ಆಹಾರ,

ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದಯ ರಕ್ತನಾಳ ಸಂಬಂಧಿ ಕಾಯಿಲೆ ಮತ್ತು ಅಪಾಯಕಾರಿ ವಿಷಯದ ಬಗ್ಗೆ ಯೋಚಿಸದಿರುವುದು.

ಇದನ್ನೂ ಓದಿ : https://vijayatimes.com/champion-victoria-lee/

ಈ ಎಲ್ಲಾ ವಿಷಯದ ಶಿಕ್ಷಣವನ್ನು ನಾವು ಅರಿತುಕೊಳ್ಳಬೇಕಾಗಿದೆ. ಇವಲ್ಲದೇ,

ಹವಾಮಾನ ವೈಪರೀತ್ಯಗಳ ಬದಲಾವಣೆಯಿಂದಿರಬಹುದು ಅಥವಾ ಹವಾಮಾನ ಬದಲಾವಣೆಯಿಂದ ಬರುವ COVID ನಂತಹ ಖಾಯಿಲೆಗಳಿಂದ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ರಾತ್ರಿ ವೇಳೆ ಯಲ್ಲಿ ಎಚ್ಚರಗೊಳ್ಳದಿರುವುದು, ಲಘು ತಲೆ ಅಥವಾ ತಲೆಸುತ್ತು ಇದ್ದರೆ ತಕ್ಷಣ ವೈದ್ಯರ ಅಥವಾ ಹೃದ್ರೋಗ ತಜ್ಞರನ್ನು ಸಂಪರ್ಕಿಸಬೇಕು.

ಅನಾರೋಗ್ಯ ಎಚ್ಚರಿಕೆಯ ಆರೋಗ್ಯ ಚಿಹ್ನೆಗಳನ್ನು ಎಂದಿಗೂ ನಿರ್ಲಕ್ಷಿಸಬಾರದು, ಸಕಾರಾತ್ಮಕ ನಡವಳಿಕೆಯ ಬದಲಾವಣೆ ಜೊತೆಗೆ ಜೀವನಶೈಲಿಗೆ ಆತ್ಮವಿಶ್ವಾಸವನ್ನು ಮತ್ತು ಆದ್ಯತೆಯನ್ನು ನೀಡಬೇಕು.

Exit mobile version