Bengaluru: ರಾಜ್ಯದ 68 ಕಡೆಗಳಲ್ಲಿ ನಡೆಸಲಾದ ಸೊಳ್ಳೆ ಪರೀಕ್ಷೆಗಳಲ್ಲಿ (Zika Virus Alert – Dinesh Gundu Rao) ಚಿಕ್ಕಬಳ್ಳಾಪುರದ (Chikkaballapura) ತಲಕಾಯಬೆಟ್ಟದ
ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಅಧಿಕಾರಿಗಳು ವಿಶೇಷ ಸಭೆ ನಡೆಸಿದ್ದು, ವೈರಸ್ ಹರಡದಂತೆ ತಡೆಯಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು
ಕೈಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ.
ರಾಜ್ಯದಲ್ಲಿ ಝೀಕಾ ವೈರಸ್ (Zika Virus) ಪ್ರಕರಣಗಳು ಹೆಚ್ಚುತ್ತಿವೆ ಎಂಬ ಸುದ್ದಿಯ ಹಿನ್ನಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಇದುವರೆಗೂ ಮನುಷ್ಯರ ದೇಹದಲ್ಲಿ ಝೀಕಾ ವೈರಸ್
ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ಜ್ವರ ಬಾಧಿಸಿದವರ ರಕ್ತದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಬರಲಿದೆ. ನಿಪಾ ವೈರಸ್ನಷ್ಟು
(Nipah Virus) ಝೀಕಾ ಮಾರಣಾಂತಿಕ (Zika Virus Alert – Dinesh Gundu Rao) ವೈರಸ್ ಅಲ್ಲ.
ಹೀಗಾಗಿ ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ. ಆದರೆ ಮಕ್ಕಳು ವಿಶೇಷವಾಗಿ ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ. ಇನ್ನು ಝೀಕಾ ವೈರಸ್
ಪ್ರಕರಣಗಳ ಕುರಿತು ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮಾಜಿ ಸಚಿವ ಸುಧಾಕರ್ (Sudhakar) ಆಗ್ರಹಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾರಕ ಝಿಕಾ ವೈರಸ್
ಪತ್ತೆಯಾಗಿರುವುದು ಅತ್ಯಂತ ಕಳವಳಕಾರಿ.
ವೈರಾಣು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ
ಸಚಿವರು ಹಾಗೂ ಸ್ಥಳೀಯ ಶಾಸಕರು ಈ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ರೋಗ ಲಕ್ಷಣಗಳು : ಜ್ವರ, ತಲೆ ನೋವು, ಕೀಲು ನೋವು, ಸ್ನಾಯು ಸೆಳೆತವಿರುತ್ತದೆ. ಈ ವೈರಸ್ (Virus) ಬಾಧಿಸಿದರೆ ಮರಣವನ್ನಪ್ಪುವ ಸಾಧ್ಯತೆ ತೀರಾ ಕಡಿಮೆ. ಆದರೆ ಗರ್ಭಿಣಿಯರು
ಎಚ್ಚರದಿಂದಿರಬೇಕು. ಗರ್ಭಾವಸ್ಥೆಯ ವೇಳೆ ಝಿಕಾ ವೈರಸ್ ಕಾಣಿಸಿದರೆ ಹುಟ್ಟುವ ಮಗು ಅಂಗವೈಕಲ್ಯಕ್ಕೀಡಾಗಬಹುದು. ಗರ್ಭಪಾತಕ್ಕೂ ಕಾರಣವಾಗಬಹುದು. ಹೀಗಾಗಿ ಗರ್ಭೀಣಿಯರು
ಸಾಕಷ್ಟು ಎಚ್ಚರಿಕೆ ವಹಿಸಬೇಕು.
ಇದನ್ನು ಓದಿ: ಸಮಾನತಾವಾದಿಗಳಾದ ನಾವು ಸರ್ದಾರ್ ಪಟೇಲ್ ಅವರನ್ನು ತಿರಸ್ಕರಿಸಬೇಕು – ನಟ ಚೇತನ್