ಅಪಘಾತಕ್ಕೀಡಾದ ತಂದೆ : ಶಾಲೆ ಮುಗಿಸಿ ಝೊಮಾಟೊ ಡೆಲಿವರಿ ಕೆಲಸ ಮಾಡುವ ಬಾಲಕ ; ವಿಡಿಯೋ ವೈರಲ್

Zomato

ನವದೆಹಲಿ : ನವದೆಹಲಿಯ(New Delhi) 7 ವರ್ಷದ ಬಾಲಕ ಇತ್ತೀಚೆಗೆ ಝೊಮಾಟೊ(Zomato) ಡೆಲಿವರಿ ಬಾಯ್(Delivery Boy) ಆಗಿ ಕೆಲಸ ಮಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ(Social Boy) ಭಾರಿ ವೈರಲ್(Viral) ಆಗಿದೆ. ಈ ಹುಡುಗನ ಹೆಸರು ತಿಳಿದುಬಂದಿಲ್ಲ, ಆದ್ರೆ ಈ ಹುಡುಗ ಅಪಘಾತಕ್ಕೆ ಒಳಗಾದ ತನ್ನ ತಂದೆ, ಕೆಲಸಕ್ಕೆ ಹೋಗಲು ಸಾಧ್ಯವಾಗದ ಸ್ಥಿತಿಯಲ್ಲಿರುವುದನ್ನು ಕಂಡು, ಅವರು ಮಾಡುತ್ತಿದ್ದ ಡೆಲಿವರಿ ಕೆಲಸವನ್ನು ತೆಗೆದುಕೊಂಡಿದ್ದಾನೆ. ಪ್ರತಿದಿನ ಈ ಕೆಲಸವನ್ನು ಮಾಡುತ್ತಿದ್ದಾನೆ ಎಂಬುದು ತಿಳಿದುಬಂದಿದೆ.

ಝೊಮಾಟೊದಲ್ಲಿ ಆಹಾರವನ್ನು ಆರ್ಡರ್ ಮಾಡಿದ ಟ್ವಿಟರ್(Tweeter) ಬಳಕೆದಾರರೊಬ್ಬರು, ಚಿಕ್ಕ ಹುಡುಗನೊಬ್ಬ ತನ್ನ ಆರ್ಡರ್ ಅನ್ನು ಡೆಲಿವರಿ ಮಾಡುತ್ತಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಇದನ್ನು 30 ಸೆಕೆಂಡ್ ಗಳ ವಿಡಿಯೋ ಮಾಡಿಕೊಂಡ ಅವರು, ಬಾಲಕನಿಗೆ ಯಾಕೆ ಈ ಕೆಲಸ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆಗ ಹುಡುಗ ತನ್ನ ತಂದೆಗೆ ಆದ ಘಟನೆ ಬಗ್ಗೆ ವಿವರವಾಗಿ ಹೇಳಿದ್ದಾನೆ. ಬಾಲಕ ಪ್ರತಿದಿನ ಬೆಳಿಗ್ಗೆ ಶಾಲೆಗೆ ಹಾಜರಾಗಿ, ಶಾಲೆಯನ್ನು ಮುಗಿಸಿ, ಸಂಜೆ 6 ರಿಂದ ರಾತ್ರಿ 11 ಗಂಟೆಯವರೆಗೆ ಡೆಲಿವರಿ ಕೆಲಸವನ್ನು ಮಾಡುತ್ತಿದ್ದಾನೆ ಎಂಬುದು ತಿಳಿದುಬಂದಿದೆ.

ರಾಹುಲ್ ಮಿತ್ತಲ್ ಎಂಬುವರು ಹುಡುಗನ ಕುರಿತು ಮಾಡಿದ ವೀಡಿಯೊವನ್ನು, ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಬಾಲಕನ ಬಗ್ಗೆ ಹೆಮ್ಮೆ ಪಟ್ಟ ರಾಹುಲ್ ಮಿತ್ತಲ್ ಅವರು, ಬಾಲಕನಿಗೆ ಚಾಕೊಲೇಟ್‌ಗಳನ್ನು ನೀಡಿ ಪ್ರೀತಿಯಿಂದ ಪ್ರೋತ್ಸಾಹಿಸಿದ್ದಾರೆ. ಟ್ವೀಟರ್ ನಲ್ಲಿ ಅವರು, “ಈ 7 ವರ್ಷದ ಹುಡುಗ ತನ್ನ ತಂದೆಯ ಕೆಲಸವನ್ನು ಮಾಡುತ್ತಿದ್ದಾನೆ. ಏಕೆಂದರೆ ಅವನ ತಂದೆ ಅಪಘಾತಕ್ಕೀಡಾದ ಬಳಿಕ ಬೆಳಿಗ್ಗೆ ಶಾಲೆಗೆ ಹೋಗುತ್ತಾನೆ ಮತ್ತು ಸಂಜೆ 6ರ ನಂತರ ಅವನು @zomato ಸಂಸ್ಥೆಗೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾನೆ.

ಮತ್ತು ನಾವು ಈ ಹುಡುಗನ ಶ್ರಮವನ್ನು ಪ್ರೋತ್ಸಾಹಿಸಬೇಕು ಮತ್ತು ಅವರ ತಂದೆಗೆ ಸಹಾಯ ಮಾಡಬೇಕು” ಎಂದು ಬರೆದುಕೊಂಡಿದ್ದಾರೆ. #zomato” ಝೊಮಾಟೊ ಕೂಡ ಈ ವಿಡಿಯೋಗೆ ಪ್ರತಿಕ್ರಿಯಿಸಿದೆ. ಸಹಾಯ ಮಾಡಲು ಮಿತ್ತಲ್ ಅವರ ಬಳಿ ಹುಡುಗನ ಬಗ್ಗೆ ಹೆಚ್ಚಿನ ವಿವರಗಳನ್ನು ಕಳುಹಿಸುವಂತೆ ಕೇಳಿಕೊಂಡಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ನೆಟ್ಟಿಗರು ಕೂಡ ಬಾಲಕನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದು, ಬಾಲಕನ ಧೈರ್ಯವನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಝೊಮಾಟೊ ಬಾಲಕನ ವಿಷಯದ ಬಗ್ಗೆ ತಿಳಿದುಕೊಂಡು ಹುಡುಗನಿಗೆ ಹೇಗೆ ಸಹಾಯ ಮಾಡಬೇಕು ಎಂಬುದರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

Exit mobile version