download app

FOLLOW US ON >

Tuesday, June 28, 2022
Breaking News
ಕೆಂಪೇಗೌಡರ ಪಠ್ಯ ಕೈಬಿಟ್ಟಾಗ ಸಿದ್ದರಾಮಯ್ಯ ಯಾಕೆ ಪ್ರಶ್ನಿಸಲಿಲ್ಲ? : ಬಿಜೆಪಿದಲಿತರನ್ನು ಸಿಎಂ ಮಾಡುವ ಬದ್ಧತೆ ಕಾಂಗ್ರೆಸ್ ಪಕ್ಷಕ್ಕಿದೆಯೇ? : ಬಿಜೆಪಿಎಸ್‍ಸಿ-ಎಸ್‍ಟಿಯವರಿಗೆ ತಿಳುವಳಿಕೆ ಕಡಿಮೆ, ಸ್ವಾಭಿಮಾನ ಮನಸ್ಥಿತಿ ಇನ್ನೂ ಬಂದಿಲ್ಲ : ಸಿದ್ದರಾಮಯ್ಯ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳುಶಿವಸೇನೆ ಬಂಡಾಯ : ಕುಟುಂಬ ರಾಜಕೀಯಕ್ಕೆ ಹೊಸ ಸವಾಲುಕುಟಿಲತೆ ಇಲ್ಲದ ರಾಜನೀತಿ ಕೆಂಪೇಗೌಡರನ್ನು ಅಜರಾಮರರನ್ನಾಗಿಸಿದೆ : ಹೆಚ್.ಡಿ.ಕೆರಾವಣ ರಾಜ್ಯ ಶ್ರೀಲಂಕಾದಲ್ಲಿ ಪೆಟ್ರೋಲ್ 550, ಡಿಸೇಲ್ 460 ರೂ. ಏರಿಕೆಸಲಿಂಗಕಾಮಿ ಪ್ರೀತಿಯನ್ನು ಒಪ್ಪದ ಪೋಷಕರ ನಿರ್ಧಾರಕ್ಕೆ ‘ಈಕೆ’ ತೆಗೆದುಕೊಂಡ ನಿರ್ಧಾರ ಅಚ್ಚರಿ!ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು : ಡಿ.ಕೆ.ಶಿ“ಮಹಾರಾಷ್ಟ್ರಕ್ಕೆ ಒಂದು ಬಲ ನಿರ್ಧಾರದೊಂದಿಗೆ ಹಿಂತಿರುಗುತ್ತೇವೆ” : ಬಂಡಾಯ ಶಾಸಕ
English English Kannada Kannada

ಭಾಳಾ ಒಳ್ಳೆಯವರು ನಮ್ ಮಿಸ್ಸು, ಸಮಾಜಸೇವೆಗೆ ಯಸ್ ಯಸ್ಸು

ಸಾಧನೆ ಅನ್ನೋದು ಮೂರು ಅಕ್ಷರದ ಪದವಲ್ಲ. ಅದರ ಹಿಂದೆ ಅವಿರತ ಶ್ರಮ, ನಿರಂತರ ಸಾಧನೆಯೇ ಕಾರಣ. ಅಂಥಹ ಪದಕ್ಕೆ ಅರ್ಥ ನೀಡಿರೋದು ನಾಗಮಣಿ ಅನ್ನೋ ಶಿಕ್ಷಕಿ . ಹಾಗಿದ್ರೆ ಅವರ ವಿಶೇಷ ಸಾಧನೆ ಏನು ? ಈ ಸಾಧಕಿಯ ಸಾಧನೆಯ ಕತೆ ಕುತೂಹಲಕಾರಿಯಾಗಿದೆ.

ಸಕಾರಾತ್ಮಕ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಮಕ್ಕಳನ್ನು ತಿದ್ದಿ ತೀಡಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತಾರೆ. ಅದರಲ್ಲೂ ಕೆಲ ಅಪರೂಪದ ಶಿಕ್ಷಕರು ಒಂದು ಕೈ ಮೇಲು ಎಂಬಂತೆ ಮಕ್ಕಳ ಮನಸ್ಸಲ್ಲಿ ಶಾಶ್ವತವಾಗಿ ಉಳಿದುಕೊಂಡು ಮಕ್ಕಳ ಭವಿಷ್ಯವನ್ನೇ ಬದಲಾಯಿಸೋ ಶಿಲ್ಪಿಗಳಾಗ್ತಾರೆ. ಅಂಥಾ ಅಪರೂಪದ ಶಿಕ್ಷಕಿಯೇ ನಾಗಮಣಿ. ಇವರದ್ದು ಮುತ್ತಿನಂಥ ಮಾತು. ಪಾಠ ಮಾಡಲು ಪ್ರಾರಂಭಿಸಿದ್ರೆ ಶತ ದಡ್ಡರಿಗೂ ಶಿಕ್ಷಣ ಸುಲಭವಾಗಿ ಅರ್ಥ ಆಗುತ್ತೆ. ಇವರ ಪಾಠ ಮಾಡೋ ಕ್ರಮಕ್ಕೆ ಎಂಥವರೂ ತಲೆ ಬಾಗಬೇಕು. ತೂಕಡಿಸೋ ಮಕ್ಕಳೂ ಕೂಡ ಎದ್ದು ಕೂತು ಪಾಠವನ್ನು ಕಿವಿಗೊಟ್ಟು ಕೇಳಬೇಕು ಅಂಥ ಶಕ್ತಿ ನಾಗಮಣಿ ಟೀಚರಲ್ಲಿದೆ. ನಾಗಮಣಿ ಟೀಚರ್ ವೃತ್ತಿಯಲ್ಲಿ ನಿವೃತ್ತಿ ಪಡೆದಿದ್ದಾರೆ. ಆದ್ರೆ ಅವರು ಪಾಠ ಹೇಳಿಕೊಡೋದನ್ನು ನಿಲ್ಲಿಸಿಲ್ಲ. ಕಲಿಸೋದನ್ನ ಪ್ರವೃತ್ತಿ ಮಾಡಿಕೊಂಡಿರೋ ನಾಗಮಣಿ ಟೀಚರ್ ಪ್ರಸ್ತುತ ನೂರಾರು ಬಡಮಕ್ಕಳ ಪಾಲಿನ ವಿದ್ಯಾ ದೇವತೆಯಾಗಿದ್ದಾರೆ. ಬಡಮಕ್ಕಳಿಗೆ ವಿದ್ಯಾದಾನ ಮಾಡೋ ಮೂಲಕ ಜ್ಜಾನದ ಬೆಳಕನ್ನ ಬೆಳಗಿಸುತ್ತಿದ್ದಾರೆ. ಅಭ್ಯುದಯ ಅನ್ನೋ ಫ್ರೀ ಟೀಚಿಂಗ್ ಸೆಂಟರ್ ನಲ್ಲಿ ನಿಸ್ವಾರ್ಥವಾಗಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಿದ್ದಾರೆ.

ಸಮಾಜ ಸೇವೆಗೆ ಸದಾ ಮುಂದು: ನಾಗಮಣಿ ಟೀಚರ್, ಉಚಿತವಾಗಿ ಪಾಠ ಮಾಡೋದ್ರ ಜೊತೆ ಜೊತೆಗೆ ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ, ಪ್ರಚಾರದ ಹಂಗಿಲ್ಲದೆ ಇವರು ಅದೆಷ್ಟೋ ಜನರಿಗೆ ಸಹಾಯಹಸ್ತವನ್ನು ಚಾಚಿದ್ದಾರೆ, ನೊಂದವರ ಕಣ್ಣೀರು ಒರೆಸಿದ್ದಾರೆ. ಇವರು ಮುಖ್ಯವಾಗಿ ನೊಂದ ಹೆಣ್ಮಕ್ಕಳಲ್ಲಿ ಹೊಸ ಆಶಾಕಿರಣ ಮೂಡಿಸುತ್ತಿದ್ದಾರೆ., ಗಂಡ ಬಿಟ್ಟು ಬಂದ ಹೆಣ್ಮಕ್ಕಳನ್ನು ಇವರೇ ಪೋಷಣೆ ಮಾಡುತ್ತಿದ್ದಾರೆ. ಅನಾಥ ಮಕ್ಕಳು ಕಡುಬಡತನದಲ್ಲಿರೋ ಅದೆಷ್ಟೋ ಹೆಣ್ಮಕ್ಕಳಿಗೆ ದಾರಿ ದೀಪವಾಗಿದ್ದಾರೆ .. ಯಾರಾದ್ರು ತನಗೆ ಕಷ್ಟ ಇದೆ ಅಂತ ಹೇಳಿದ್ರೆ ಅದಕ್ಕೆ ತಕ್ಷಣ ಸ್ಪಂದಿಸಿ ಅವರ ಸಮಸ್ಯೆ ಪರಿಹಾರಕ್ಕೆ ಮುಂದಾಗ್ತಾರೆ ನಾಗಮಣಿ. ತಾಯಿ ಮನಸ್ಸಿನ ನಾಗಮಣಿ ಟೀಚರ್‌ಜಿ ಬಡವರಿಗೆ ಬಟ್ಟೆ , ಕುಕ್ಕರ್ , ಮಕ್ಕಳಿಗೆ ಆಟದ ಸಾಮಾಗ್ರಿಗಳನ್ನು ನೀಡುತ್ತಲೇ ಇದ್ದಾರೆ. ಇದರ ಜೊತೆಗೆ ಎಂಟು ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರೋ ನಾಗಮಣಿ ಟೀಚರ್, ಮುಖ್ಯೋಪಾಧ್ಯಾಯನಿಯಾಗಿ ನಿವೃತ್ತಿಯಾದ್ರು . ಆದ್ರೆ ಎಂಟು ಶಾಲೆಗಳಲ್ಲಿ ಇವರು ಪಡೆದ ಅನುಭವ ಭಿನ್ನ ವಿಭಿನ್ನ.

ಶಾಲೆಯೇ ಪಾಠಶಾಲೆ: ಶಾಲೆಯೇ ಇವರ ಜೀವನ ಪಾಠಶಾಲೆಯಾಗಿದೆ. ಇವರ ಬೋಧನಾ ಶೈಲಿಗೆ ಮಕ್ಕಳು ಪೋಷಕರು ಮನಸೋತಿದ್ರೂ, ಸಹದ್ಯೋಗಿಗಳೇ ಇವರ ಸಾಧನೆಗೆ ಅಡ್ಡಿಯಾಗಿದ್ರು. ಮಕ್ಕಳಿಗೆ ಪಾಠವನ್ನೇ ಮಾಡಬಾರದು, ಇವರು ಶಾಲೆಯನ್ನೇ ಬಿಟ್ಟು ಹೋಗ್ಬೇಕು ಅಂತ ಸಾಕಷ್ಟು ಕಿರುಕುಳವನ್ನೂ ನೀಡಿದ್ರು. ಆದ್ರೆ ಇವರು ಛಲ ಬಿಡದೆ ಪಾಠದ ಜೊತೆಗೆ ಸಾಮಾಜಿಕ ಸೇವೆಯನ್ನು ಮಾಡಿ ಮಕ್ಕಳ ಮನಸ್ಸಲ್ಲಿ ಶಾಶ್ವತವಾಗಿ ಉಳಿದು ಕೊಂಡ್ರು. ನಾಗಮಣಿ ಟೀಚರ್ ಅವರಿಗೆ ಮಕ್ಕಳೇ ಬರದಂಥಾ ಶಾಲೆಗಳಿಗೆ ವರ್ಗಾವಣೆಯಾಗುತ್ತಿತ್ತು.ಆದ್ರೆ ಅಂಥಾ ಶಾಲೆಗಳ ಚಿತ್ರಣವನ್ನೇ ಚದಲಾಯಿಸುತ್ತಿದ್ರು ನಾಗಮಣಿ ಟೀಚರ್. ಅದ್ರಲ್ಲೂ ಕೊಣನಕುಂಟೆ ಸರಕಾರಿ ಶಾಲೆಯಂತೂ ಯಾರಿಗೂ ಬೇಡದ ಸ್ಥಿತಿಯಲ್ಲಿತ್ತು. ಆ ಶಾಲೆಯ ಚಿತ್ರಣವನ್ನೇ ಇವರು ಬದಲಾಯಿಸಿದ್ರು. ಮೂಲ ಸೌಕರ್ಯಗಳೇ ಇಲ್ಲದ ಶಾಲೆಗೆ ಮೂಲ ಸೌಕರ್ಯಗಳ ಜೊತೆ, . ಸಂಪೂರ್ಣ ಶಾಲೆಯನ್ನಾಗಿ ನಾಗಮಣಿ ಟೀಚರ್ ರೂಪಿಸಿಬಟ್ರು.

ಸಾಧನೆಗೆ ಸಂದಿದೆ ಪ್ರಶಸ್ತಿ: ನಾಟಕ , ಪದ್ಯ,ಗಳ ಮೂಲಕ ಮಕ್ಕಳ ಮನಸ್ಸನ್ನು ಮುಟ್ಟುತ್ತಿದ್ದ ನಾಗಮಣಿ ಟೀಚರ್ ಸಾಧನೆಯ ಕೆಲಸ ಇಲ್ಲಿಗೆ ಮುಗಿದಿಲ್ಲ.. ನಿವೃತ್ತಿ ಹೊಂದಿದ್ರು ಇನ್ನಷ್ಟು ಉತ್ತಮವಾದ ಸೇವೆಯನ್ನು ಮಾಡಬೇಕು ಎಂಬುದು ಇವರ ಮಹದಾಸೆ. ಇವರ ಸಾಧನೆಯನ್ನು ಗುರುತಿಸಿ ನಾನಾ ಸಂಘ ಸಂಸ್ಥೆಗಳು ಇವರು ಹತ್ತು ಹಲವು ಪ್ರಶಸ್ತಿಗಳನ್ನು ನೀಡಿವೆ. ಕೇವಲ ರಾಜ್ಯ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ನಾಗಮಣಿ ಟೀಚರ್ ಉತ್ತಮ ಶಿಕ್ಷಕರೆನಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರೋ ನಾಗಮಣಿ ಟೀಚರ್ ಅವರದ್ದು ಪುಟ್ಟ ಕುಟುಂಬ ..ಮಗಳು ಹಾಗೂ ಪತಿ ಜೊತೆ ಹಾಯಾಗಿ ಜೀವನ ಸಾಗಿಸ್ತಾ ಇರೋ ಇವರಿಗೆ ಇಬ್ಬರು ಮೊಮ್ಮಕ್ಕಳು ಇದ್ದಾರೆ. ನಾಗಮಣಿ ಟೀಚರ್ ಪ್ರತಿ ಕೆಲಸಕ್ಕೆ ಸಾಥ್ ಕೊಡೋದು ಪತಿ ಹಾಗೂ ಇವರ ಕುಟುಂ ಬ ಸದಸದ್ಯರು

ಅಂಧ ಮಕ್ಕಳಿಗೂ ದಾರಿದೀಪ : ಅಂಧ ಮಕ್ಕಳಿಗೂ ದಾರಿ ದೀಪವಾಗಿರೋ ನಾಗಮಣಿ ಟೀಚರ್ .ತಮ್ಮ ಜೀವನವನ್ನು ಅಂಧ ಮಕ್ಕಳ ಜೊತೆ ಕಳೆಯುವ ನಿರ್ಧಾರ ಮಾಡಿದ್ದಾರೆ. ಸ್ವಇಚ್ಚೆಯಿಂದ ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಿದ್ದಾರೆ . ಇವರ ಈ ಮಹಾತ್ಕಾರ್ಯ ಹೀಗೆ ಮುಂದುವರಿಯಲಿ ಅನ್ನೋದು ವಿಜಯ ಟೈಮ್ಸ್ ಆಶಯ ..
ದೀಪಿಕಾ ಪರಿವಾರ

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article