ಕರಾಟೆ ಕಿಕ್‌ ಬದಲಾಯಿಸಿತು ಬದುಕು

Karate queen | Vijaya sadhakaru | Vijaya times

ಪ್ರವೀಣ ಡಿ ಸುವರ್ಣ… ಕರಾಟೆ ಪ್ರವೀಣೆ ಅಂತಲೇ ಖ್ಯಾತಿ ಪಡೆದಿರೋ ಧೈರ್ಯವಂತೆ ಮಹಿಳೆ ಇವರು . ಉಡುಪಿ ಜಿಲ್ಲೆಯಲ್ಲಿ ಕರಾಟೆ ಪ್ರವೀಣ ಅವರ ಹೆಸರು ಕೇಳದ ಜನರು ಕೂಡ ತೀರ ವಿರಳ.. ಯಾಕಂದ್ರೆ ಎಲೆಮರೆ ಕಾಯಿಯಂತಿದ್ದ ಈ ಯುವತಿ ಇಂದು ಇತತರಿಗೂ ಮಾದರಿ .. ಇವರ ದಿಟ್ಟತನ ಹಾಗೂ ಛಲ ಇಂದು ಎಲ್ಲರನ್ನೂ ಒಮ್ಮೆ ತಿರುಗಿ

ನೋಡುವಂತೆ ಮಾಡಿದೆ .. ಪ್ರವೀಣ ಉಡುಪಿ ತಾಲೂಕಿನ ಹೆರ್ಗಾ ಗ್ರಾಮದ ಪರ್ಕಳ ನಿವಾಸಿ. ಚಿಕ್ಕ ಹಳ್ಳಿಯಲ್ಲಿ ಜನಿಸಿರೋ ಇವರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ . ಹೆಸರಿಗೆ ತಕ್ಕಂತೆ ಇವರು ಪ್ರವೀಣೆ ನೂ ಹೌದು …ಕರಾಟೆ ಅನ್ನೋದು ಕೇವಲ ಗಂಡಸರಿಗೆ ಮಾತ್ರ ಅನ್ನೋ ಕಾನ್ಸೆಪ್ಟ್ ಅನ್ನು ಇಂದು ಪ್ರವೀಣ ಅನ್ನೋ ಕರಾಟೆ ಕ್ವೀನ್‌ ಉಡುಪಿಯಲ್ಲಿ ಸಂಪೂರ್ಣ ಬದಲಾಯಿಸಿದ್ದಾರೆ ..

ಉಡುಪಿಯಲ್ಲಿ ಪಿಕೆಸಿ ಎಂಬ ತಂಡವನ್ನು ಕಟ್ಟಿರೋ ಪ್ರವೀಣ .. ಈ ತಂಡದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಚಿನ್ನ ಬೆಳ್ಳಿ ಕಂಚಿನ ಪದಕಗಳ ಸರಮಾಲೆಯನ್ನೇ ಪೋಣಿಸಿಕೊಂಡಿದ್ದಾರೆ … ಉಡುಪಿಯ ಶಾಲೆಯೊಂದರಲ್ಲಿ ಮಕ್ಕಳಿಗೆ ಪ್ರತಿದಿನ ಕರಾಟೆಯನ್ನು ಹೇಳಿಕೊಡೋದರ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ .

ಪ್ರತಿ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣೋ ಪ್ರವೀಣ ಯಾವುದೇ ಬೇಧ ಭಾವವಿಲ್ಲದೆ , ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರತಿ ಮಕ್ಕಳಿಗೂ ಶ್ರದ್ದೆಯಿಂದ ಕರಾಟೆ ಅನ್ನೋ ವಿದ್ಯೆಯನ್ನು ಹೇಳಿಕೊಡುತ್ತಿದ್ದಾರೆ .

ಪ್ರತಿಮಕ್ಕಳನ್ನು ಯಾವುದೇ ಕರಾಟೆ ಸ್ಪರ್ಧೆಯಿಂದ ವಂಚಿತರಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂಬ ಹಂಬಲವಿದ್ದ ಪ್ರವೀಣ ಅವರ ಕೈ ಹಿಡಿದಿದ್ದು ಕರಾಟೆ ಅನ್ನೋ ಸಾಹಸ. ೫ ನೇ ತರಗತಿಯಿಂದಲೇ ಕರಾಟೆ ವ್ಯಾಸಂಗ ಪ್ರಾರಂಭಿದ ಪ್ರವೀಣ ತನ್ನ ವ್ಯಾಸಂಗದ ಸಂದರ್ಭದಲ್ಲೇ ಎ ಗ್ರೇಡ್ ನೊಂದಿಗೆ ಎಲ್ಲಾ ಬೆಲ್ಟ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ..

ರಾಜ್ಯ ರಾಷ್ಟ್ರಮಟ್ಟ ಸೇರಿ ೨೫೦ ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿರೋ ಪ್ರವೀಣ ತನ್ನ ಕರಾಟೆ ಶಕ್ತಿಯನ್ನು ಇತರಿಗೂ ಧಾರೆ ಎಳೆದಿದ್ದಾರೆ . ಉಡುಪಿ ಸೇರಿದಂತೆ ಹಲವೆಡೆ ಇವರ ಗರಡಿಯಲ್ಲಿ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಂದು ತರಭೇತಿಯನ್ನು ಪಡೆಯುತ್ತಿದ್ದಾರೆ . ಇನ್ನು ಪ್ರವೀಣ ಡಿ .ಸುವರ್ಣ ಅವರ ಸಾಧನೆಯ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಓಪನ್ ಮಾಡಿ ….

Exit mobile version