ಬಾಗಲಕೋಟೆಯ ಮಾದರಿ ಸಾಧಕ ಮೆಹಬೂಬ ಸಾಬಾ…

Peon brought  Glory to School | Vijaya sadhakaru | Vijayatimes

ಇದು ಬಾಗಲಕೋಟೆ ಜಿಲ್ಲೆಯ ಇಳಕಲ್  ತಾಲೂಕಿನಲ್ಲಿರೋ   ಹಿರೇಶಿವನಗುತ್ತಿ ಗ್ರಾಮದ ಶಾಲೆ .. ಈ ಶಾಲೆಯ ಹೆಸರು  ಬಿವಿ ಸಂಗನಾಳ ಸರಕಾರಿ ಶಾಲೆ ಅಂತ. ಆದ್ರೆ  ಈ ಶಾಲೆ  ಮಾತ್ರ ಈಗ ಫಳ ಫಳ ಅಂತ ಹೊಳೆಯುತ್ತಿದೆ .. ಅದಕ್ಕೆ ಕಾರಣ ಸಾಮಾನ್ಯ ವ್ಯಕ್ತಿಯಾಗಿರೋ     ಮೆಹಬೂಬ ಸಾಬ ..ಸಾಧನೆಗೆ ಸಮಯ , ಬಡತನ  ವಯಸ್ಸು ಯಾವುದು ಅಡ್ಡ ಬರಲ್ಲ ಅನ್ನೋದಕ್ಕೆ  ಮೆಹಬೂಬ ಸಾಬ ಅವರೇ ಸಾಕ್ಷಿ. ಕಡುಬಡತನದಲ್ಲಿ ಇದ್ರೂ ತನ್ನ ಜೇಬಿನಲ್ಲಿರೋ ಹಣವನ್ನೇ ಖರ್ಚು ಮಾಡಿ ಶಾಲೆಯ ಗೋಡೆಗೆ ಸುಣ್ಣ ಬಳಿದಿದ್ದಾರೆ . ಈ ಮೂಲಕ ಇತರರಿಗೂ ಇಂಥಹ ಕೆಲಸ ಮಾಡಲು ಇವರು  ಸ್ಫೂರ್ತಿಯಾಗಿದ್ದಾರೆ.

ಮೆಹಬೂಬ ಸಾಬಾ ಇಮಾಮಹುಸೇನ್  ಅವರಿಗೆ ೪೮ ವರ್ಷ ಇದೇ  ಬಿ.ವಿ ಸಂಗನಾಳ ಸರಕಾರಿ ಶಾಲೆಯಲ್ಲಿ ಡಿ ವರ್ಗ ನೌಕರರಾಗಿ ಕೆಲಸಮಾಡುತ್ತಿದ್ದಾರೆ. ಇದೇ  ಶಾಲೆಯಲ್ಲಿ   ಇವರ ಮಗನಾದ   ಮೊಹಮ್ಮದ್ ಮುಸ್ತಾಫ್   ಕೂಡ  ೨ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡ್ತಾ ಇದ್ದಾರೆ. ಇದೀಗ ಮಗನಿಗಾಗಿ ಇವರು  ಶಾಲೆಯ  ಗೋಡೆಗಳಿಗೆ ಸುಣ್ಣ ಬಣ್ಣ ಹಚ್ಚಿ ಸಾಮಾಜಿ  ಕಾಳಜಿ ತೋರಿಸಿದ್ದು ನಿಜಕ್ಕೂ ಮಾದರಿ.. ಬಿ.ವಿ ಸಂಗನಾಳ ಸರಕಾರಿ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿರುವ  ಇವರು ಈ ಶಾಲೆಗೆ ಸಿಪಾಯಿನೂ ಹೌದು.. ಕಡಿಮೆ ಸಂಬಳ ಇದ್ರೂ   ಕಷ್ಟದಲ್ಲಿರುವವರ ಕಣ್ಣಿರನ್ನು ಒರೆಸುವ ಕೆಲಸ  ಇವರು ಮಾಡ್ತಿದ್ದಾರೆ.. ಹಾಗಿದ್ರೆ ಇವರ ಸಾಧನೆಯ ಕೆಲಸ ಹೇಗಿದೆ ಎಂಬುವುದನ್ನು ನೋಡಲು ಈ  ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ  ಲೈಕ್ ಮಾಡಿ ಶೇರ್ ಮಾಡಿ ..

Exit mobile version