ಬಾಗಲಕೋಟೆ : ರೋಗಿಯ ಹೊಟ್ಟೆಯಿಂದ 187 ನಾಣ್ಯಗಳನ್ನು ಹೊರತೆಗೆದ ವೈದ್ಯರು!

Bagalkot : ವಿಚಿತ್ರ(Weird) ಘಟನೆಯೊಂದು ನಮ್ಮ ರಾಜ್ಯದ ಬಾಗಲಕೋಟೆಯಲ್ಲಿ(187 Coins Removed) ನಡೆದಿದ್ದು, ವ್ಯಕ್ತಿಯ ಹೊಟ್ಟೆಯ ಭಾಗದಲ್ಲಿ ವಿಪರೀತ ನೋವು, ವಾಂತಿ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ತೆರಳಿದಾಗ ವ್ಯಕ್ತಿಗೆ ಹಾಗೂ ವೈದ್ಯರಿಗೆ ಅಚ್ಚರಿ ಕಾದಿತ್ತು!

ಭಾನುವಾರ ಕರ್ನಾಟಕದ ಬಾಗಲಕೋಟೆಯಲ್ಲಿ ವ್ಯಕ್ತಿಯೊಬ್ಬರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವ್ಯಕ್ತಿಯನ್ನು 58 ವರ್ಷದ ದ್ಯಾಮಪ್ಪ ಎಂದು ಗುರುತಿಸಲಾಗಿದ್ದು,

ರಾಯಚೂರು(187 Coins Removed) ಜಿಲ್ಲೆಯ ಲಿಂಗಸೂಗೂರಿನ ಆಸ್ಪತ್ರೆಯಲ್ಲಿ ಎಕ್ಸ್-ರೇ ಪರೀಕ್ಷೆ ಮತ್ತು ಎಂಡೋಸ್ಕೋಪಿ ನಡೆಸಿದ ನಂತರ ವೈದ್ಯರು ಬೆರಗಾಗಿದ್ದಾರೆ.

ಹೌದು, ರೋಗಿಯ ಹೊಟ್ಟೆಯಲ್ಲಿ ನಾಣ್ಯಗಳು ಪತ್ತೆಯಾಗಿದ್ದು, ವೈದ್ಯರು 187 ನಾಣ್ಯಗಳನ್ನು ಹೊರತೆಗೆದಿದ್ದಾರೆ. 5 ರೂ. ಮೌಲ್ಯದ 56 ನಾಣ್ಯಗಳು, 2 ರೂ.

ಮೌಲ್ಯದ 51ನಾಣ್ಯಗಳು, 1 ರೂ. ಮೌಲ್ಯದ ೮೦ ನಾಣ್ಯಗಳು, ಒಟ್ಟು 462 ರೂ. ಮೌಲ್ಯದ ನಾಣ್ಯಗಳನ್ನು ನುಂಗಿದ್ದರು ಎನ್ನಲಾಗಿದೆ.

https://fb.watch/h6GjblqLDv/ ಚಿತ್ರದುರ್ಗ, ಹೊಳಲ್ಕೆರೆ : ಪಾಳುಬಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ!

ನಾಣ್ಯಗಳ ತೂಕ 1.5 ಕಿಲೋಗ್ರಾಂ. ಆ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರು ಸ್ಕಿಜೋಫ್ರೇನಿಯಾ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ೨-೩ ತಿಂಗಳ ಅವಧಿಯಲ್ಲಿ ಇಷ್ಟು ನಾಣ್ಯಗಳನ್ನು ನುಂಗಿದ್ದಾರೆ ಎಂದು ಹೇಳಿದರು.

ಬಾಗಲಕೋಟೆಯ ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಾಣ್ಯಗಳನ್ನು ತೆಗೆಯುವ ಶಸ್ತ್ರಚಿಕಿತ್ಸೆ ನಡೆದಿದೆ.

ಇದನ್ನೂ ಓದಿ : https://vijayatimes.com/rahul-gandhi-sarcasam/

ಶನಿವಾರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದ್ಯಾಮಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಲ್ಲಿ ಒಬ್ಬರಾದ ಡಾ.ಈಶ್ವರ ಕಲಬುರ್ಗಿಚ ಅವರು ಮಾತನಾಡಿ, ಹೊಟ್ಟೆಯು ವಿಪರೀತ ಹಿಗ್ಗಿದೆ, ಹೊಟ್ಟೆಯ ವಿವಿಧ ಭಾಗದಲ್ಲಿ ಸಾಕಷ್ಟು ನಾಣ್ಯಗಳು ಸಿಲುಕಿಕೊಂಡಿವೆ.

ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ, ನಾವು ಎಲ್ಲಾ ನಾಣ್ಯಗಳನ್ನು ಹೊರತೆಗೆದಿದ್ದೇವೆ. ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ನೀರಿನ ಕೊರತೆ ಮತ್ತು ಇತರ ಸಣ್ಣ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು.

ರೋಗಿಯು ಆರೋಗ್ಯವಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/loss-for-onion-farmer/

ಸ್ಕಿಜೋಫ್ರೇನಿಯಾದ ಲಕ್ಷಣಗಳು ಭ್ರಮೆಗಳು, ದಿಢೀರ್ ಚಿಂತನೆ ಮತ್ತು ಅಸಹಜ ನಡವಳಿಕೆಯು ಮೂಲವಾಗಿ ಇರುತ್ತದೆ ಎಂದು ಹೇಳಿದರು.

Exit mobile version