• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಜಯ ಸಾಧಕರು

2.5 ವರ್ಷಕ್ಕೆ ಗಿನ್ನಿಸ್ ದಾಖಲೆ; ಪುಟ್ಟಪೋರನ ವಿಶಿಷ್ಟ ಸಾಧನೆ

Sharadhi by Sharadhi
in ವಿಜಯ ಸಾಧಕರು
Featured Video Play Icon
0
SHARES
5
VIEWS
Share on FacebookShare on Twitter

ಎಲೆಮರೆ ಕಾಯಿಯಂತಿದ್ದು ಅಪೂರ್ವ ಸಾಧನೆ ಮಾಡಿ ಇತರರಿಗೆ ಸ್ಫೂರ್ತಿಯಾಗಿರೋ ವಿಶೇಷ ಸಾಧಕರನ್ನು ಪರಿಚಯಿಸೋ ವಿಜಯಸಾಧಕರು ಕಾರ್ಯಕ್ರಮದಲ್ಲಿ ಚಿನ್ನದ ಊರು ಕೋಲಾರದ ಲಕ್ಕೂರಿನ ವಿಶಿಷ್ಟ ಸಾಧಕನ ಪರಿಚಯ. ಆತನ ಹೆಸರು ತಾನೀಶ್. ವಯಸ್ಸು ಬರೀ ಎರಡೂವರೆ ವರ್ಷ.  ಈ ರೀತಿ ಪಟಪಟ ಅಂತ ಉತ್ತರ ಕೊಟ್ಟು ಎದುರಿಗಿದ್ದವರನ್ನು ಅಚ್ಚರಿಪಡಿಸೋ ಈ ಬಾಲಕನ ಹೆಸರು ತಾನೀಶ್‌. ಈತನಿಗೆ ನೀವು ಯಾವ ಸಾಮಾನ್ಯ ಜ್ಙಾನದ ಯಾವ ಪ್ರಶ್ನೆಯನ್ನಾದ್ರೂ ಕೇಳಿ ಅಳುಕಿಲ್ಲದೆ, ತಪ್ಪಿಲ್ಲದೆ ಉತ್ತರ ಕೊಡ್ತಾನೆ.

ಇದು ಬರೀ ಎರಡೂವರೆ ವರ್ಷದ ಈ ಪೋರನ ಸಾಧನೆಯ ಸ್ಯಾಂಪಲ್‌ ಅಷ್ಟೇ. ಈತನೊಳಗೆ ಇನ್ನಷ್ಟು ಪ್ರತಿಭೆಗಳಿವೆ. ಈತನ ಪ್ರತಿಭೆಯನ್ನು ಗುರುತಿಸಿ  ಇಂಡಿಯನ್ ಬುಕ್ ಆಪ್ ರೆಕಾರ್ಡ್ಸ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ವಿಲ್ ಮೆಡಲ್ ಬುಕ್ ಆಫ್ ರೆಕಾರ್ಡ್, ಹಾಗೂ ಕಿಡ್ಸ್ ವರ್ಡ್ ರೆಕಾರ್ಡ್ ಮಾಡುವ ಮೂಲಕ ಈತ ಕರುನಾಡಿಗೆ ಕೀರ್ತಿ ತಂದಿದ್ದಾನೆ. ತಾನೀಶ್.ಎನ್ ದೇಶದ ಮೂವತ್ತು ರಾಜ್ಯಗಳ ಹೆಸರು ಮತ್ತು ರಾಜಧಾನಿಗಳ ಹೆಸರು, 150 ಜನ ಮಹಾನ್ ಸಾಧಕರ ಭಾವಚಿತ್ರಗಳ ಹೆಸರು, ಜ್ಞಾನಪೀಠ ಪ್ರಶಸ್ತಿ ಪಡೆದ ಪುರಸ್ಕೃತರ ಹೆಸರು, ಕರ್ನಾಟಕದ 30 ಜಿಲ್ಲೆಗಳು, ಪ್ರಂಪಚದ ವಿವಿಧ ದೇಶಗಳ ಹೆಸರುಗಳು, 90 ಪ್ಲಾಷ್ ಕಾರ್ಡ್ಸ್ ಹೆಸರುಗಳು, ಪ್ರಚಲಿತ ವಿದ್ಯಮಾನದ ಸಾಮಾನ್ಯ ಜ್ಞಾನದ 80 ಪ್ರಶ್ನೆಗಳಿಗೆ  ನಿರರ್ಗಳವಾಗಿ ಉತ್ತರ ನೀಡುತ್ತಾನೆ‌.

ಅಷ್ಟೇ ಅಲ್ಲ ಹಣ್ಣುಗಳು, ತರಕಾರಿಗಳು, ಬಣ್ಣಗಳು, ವಾಹನಗಳು, ಮಾನವ ದೇಹದ ಅಂಗಾಗಳು, ಕನ್ನಡ ವರ್ಣಮಾಲೆ, 12 ತಿಂಗಳುಗಳು, A TO Z ಅಲ್ಪಬೇಟ್ಸ್, ಆಕ್ಷನ್ ವರ್ಡ್ಸ್ ಗಳನ್ನು ಬಹುಬೇಗನೆ ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಾನೆ ಈ ಮುದ್ದು ಕಂದ. ತಾನೀಶ್‌ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ಯುವಕವಿ ಲಕ್ಕೂರು ಎಂ.ನಾಗರಾಜ್ ಹಾಗೂ ಶ್ರೀಮತಿ ಶ್ವೇತನಾಗರಾಜ್ ದಂಪತಿಯ ಪುತ್ರ. ತಮ್ಮ ಮಗನ ಸಾಧನೆ ಬಗ್ಗೆ ಹೆತ್ತವರಿಗೆ ಹೆಮ್ಮೆ ತಂದಿದೆ.  

ತಾನೀಶ್‌ ಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸಿ ಅದನ್ನು ತಿದ್ದಿ ತೀಡಿ ಅದಕ್ಕೆ ಮೂರ್ತ ರೂಪ ಕೊಟ್ಟವರು ತಾನೀಶ್‌ ತಾಯಿ ಶ್ವೇತ ನಾಗರಾಜ್‌. ಅವರಿಗೆ ಅವರ ಮಗ ಇನ್ನಷ್ಟು ಸಾಧನೆ ಮಾಡಬೇಕು, ಇನ್ನಷ್ಟು ಎತ್ತರಕ್ಕೆ ಬೆಳೀಬೇಕು ಅನ್ನೋ ಆಸೆ. ತಾನೀಶ್.ಎನ್ ನ ಮೇರು ಪ್ರತಿಭೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಇಂಥಾ ಸಾಧನೆ ಮಾಡಿದ ತಾನಿಶ್‌ ಇನ್ನಷ್ಟು ಪ್ರಶಸ್ತಿ ಗಳಿಸಲು ಅನ್ನೋದು ಕ್ಷೇತ್ರ ಶಿಕ್ಷಣಾಧಿಕಾರಿ ಹಾರೈಕೆ. ತಾನೀಶ್‌ ಭರತನಾಟ್ಯ ಕಲಿಕೆಯ ಜೊತೆಗೆ ಕರಾಟೆ, ತಬಲ, ಸ್ಕೇಟಿಂಗ್ ತರಗತಿಗಳ ತರಬೇತಿ ಪಡೆಯುತ್ತಿದ್ದಾನೆ. ಈಗ ಈ ಕ್ಷೇತ್ರದಲ್ಲೂ ಮಹತ್ತರ ಸಾಧನೆ ಮಾಡಲು ಸಜ್ಜಾಗುತ್ತಿದ್ದಾನೆ.

ಮೂಲಕ ಮಹತ್ತರ ಸಾಧನೆಯತ್ತ ಗಿನ್ನೆಸ್ ದಾಖಲೆ ನಿರ್ಮಿಸುವ ಗುರಿಯತ್ತ ತನ್ನ ನಿರಂತರ ಅಭ್ಯಾಸವನ್ನು ಅಮ್ಮನ ಸಹಕಾರದಿಂದ ಪಡೆಯುತ್ತಿದ್ದಾನೆ ಇದು ನಮ್ಮ ಚಿನ್ನದ ನೆಲದ ನಿಮ್ಮ ಅಕ್ಕರೆಯ ಪ್ರತಿಭೆ ನೀವು ಸಹ ಹಾರೈಸಿ ಎಂದು ತಂದೆ  ಲಕ್ಕೂರು ಎಂ ನಾಗರಾಜ್ ತಿಳಿಸಿದರು. ಅಕ್ಕರೆಯ ಕಂದ ತಾನೀಶ್ ಗೆ ಯಾವುದೇ ವಿಷಯವನ್ನು ಒಮ್ಮೆ ಹೇಳಿದರೆ ಸಾಕು ಕೂಡಲೇ ಅರ್ಥೈಸಿಕೊಂಡು ಮರು ಕ್ಷಣದಲ್ಲಿಯೇ ನಮಗೆ ಹೇಳಿ ಕೋಡುವಷ್ಟು ಸಮರ್ಥವಾದ ಜ್ಞಾನವನ್ನು ಪಡೆದಿದ್ದಾನೆ. ಇವನು ಎಲ್ಲಾ ಕ್ಷೇತ್ರದಲ್ಲಿಯೂ ಅಪ್ರತಿಮ ಸಾಧನೆ ಮಾಡಿ ನಮ್ಮ ಜಿಲ್ಲೆಯ ಛಾಯೆಯನ್ನು ಎಲ್ಲೆಡೆ ಪಸರಿಸುವ ಮೂಲಕ ವಿಶ್ವಮಾನವ ಕುವೆಂಪು, ಅಂಬೇಡ್ಕರ್, ಬುದ್ದ, ಬಸವ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ಸಾಗಲಿ ಎಂದು ಬಯಸುವೆ ಎಂಬ ಮಾತನ್ನು ತಾಯಿ ಶ್ರೀಮತಿ ಶ್ವೇತನಾಗರಾಜ್ ತಿಳಿಸಿದರು. ತಾನೀಶ್‌ ಮುಂದಿನ ಗುರಿ ಗಿನ್ನಿಸ್‌ ದಾಖಲೆ. ಒಂದು ನಿಮಿಷದಲ್ಲಿ ೧೨೨ ರಾಷ್ಟ್ರಗಳ ರಾಷ್ಟ್ರ ಧ್ವಜದ ಹೆಸರನ್ನ ಹೇಳಿ ಹೊಸ ಸಾಧನೆ ಮಾಡ ಹೊರಟಿದ್ದಾನೆ. ಆತನ ಸಾಧನೆಯ ಹಾದಿ ಸುಗಮವಾಗಲಿ.ತಾನೀಶ್‌ ಇನ್ನಷ್ಟು ದಾಖಲೆಗಳನ್ನು ಮಾಡಿ ಕರುನಾಡಿಗೆ ಹಾಗೂ ಈ ದೇಶಕ್ಕೆ ಕೀರ್ತಿ ತರಲಿ ಅನ್ನೋದು ವಿಜಯಟೈಮ್ಸ್‌ ಶುಭ ಹಾರೈಕೆ.

  • ಸೀತಾ, ವಿಜಯಟೈಮ್ಸ್‌, ಬೆಂಗಳೂರು

Related News

ಬೆಂಗಳೂರು ವಕೀಲರ ಸಂಘದಿಂದ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಗೌರವಾರ್ಪಣೆ
ಪ್ರಮುಖ ಸುದ್ದಿ

ಬೆಂಗಳೂರು ವಕೀಲರ ಸಂಘದಿಂದ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಗೌರವಾರ್ಪಣೆ

April 1, 2023
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದ ರಾಜಸ್ಥಾನ್ ಮಹಿಳಾ ಬಾಡಿ ಬಿಲ್ಡರ್; ‘ಹೆಣ್ಮಕ್ಕಳೇ ಸ್ಟ್ರಾಂಗು ಗುರು..!’
ವಿಜಯ ಸಾಧಕರು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದ ರಾಜಸ್ಥಾನ್ ಮಹಿಳಾ ಬಾಡಿ ಬಿಲ್ಡರ್; ‘ಹೆಣ್ಮಕ್ಕಳೇ ಸ್ಟ್ರಾಂಗು ಗುರು..!’

December 30, 2022
ಪತ್ರಿಕೋದ್ಯಮ ಬರವಣಿಗೆ ಸಾಹಿತ್ಯಕ್ಕೆ ದೊಡ್ಡ ಸಮಸ್ಯೆಯಾಗಿ ಪರಿವರ್ತಿಸಿದೆ : ಕಾದಂಬರಿಕಾರ ಖಾಲಿದ್ ಜಾವೇದ್
ವಿಜಯ ಸಾಧಕರು

ಪತ್ರಿಕೋದ್ಯಮ ಬರವಣಿಗೆ ಸಾಹಿತ್ಯಕ್ಕೆ ದೊಡ್ಡ ಸಮಸ್ಯೆಯಾಗಿ ಪರಿವರ್ತಿಸಿದೆ : ಕಾದಂಬರಿಕಾರ ಖಾಲಿದ್ ಜಾವೇದ್

December 27, 2022
Featured Video Play Icon
ವಿಜಯ ಸಾಧಕರು

ಬಾಗಲಕೋಟೆಯ ಮಾದರಿ ಸಾಧಕ ಮೆಹಬೂಬ ಸಾಬಾ…

November 17, 2020

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.