ಮೊದಲ ಹಂತದ ಮತದಾನದ ದಿನ ರಾಜ್ಯದಲ್ಲಿ 2,172 ಪ್ರಕರಣ ದಾಖಲು

Bengaluru: ಲೋಕಸಭೆಯ (Lok Sabha Election) ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಶುಕ್ರವಾರ ಮತದಾನ (2172 Cases Registered in Kar) ನಡೆದಿದೆ. ಮೊದಲ ಹಂತದ

ಚುನಾವಣೆ ಸಂದರ್ಭದಲ್ಲಿ ಎಸ್​ಎಸ್​ಟಿ (SST) ಮತ್ತು ಪೊಲೀಸ್​ ಇಲಾಖೆ ರಾಜ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಹಣ, ಮದ್ಯ, ಡ್ರಗ್ಸ್, ಚಿನ್ನಾಭರಣ (Money, Alcohol, Drugs, Jewellery) ಮತ್ತು

ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿದ್ದು, ಈ ಸಂಬಂಧ 2,172 ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಅಬಕಾರಿ ಇಲಾಖೆ 3098 ಹೀನಸ್ ಪ್ರಕರಣಗಳನ್ನು ದಾಖಲಿಸಿದೆ.

ಇನ್ನು ರಾಜ್ಯದ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಘಟಾನುಘಟಿ ನಾಯಕರು ಸೇರಿದಂತೆ 247 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಮೊದಲ ಹಂತದ

ಮತದಾನದಲ್ಲಿ ಶೇ 69 ರಷ್ಟು ಮತದಾನವಾಗಿದೆ. ಕರ್ನಾಟಕದಲ್ಲಿ (Karnataka) ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ.

ಈಗಾಗಲೇ ಲೈಸೆನ್ಸ್ (License) ಉಲ್ಲಂಘನೆ ಮಾಡಿದ್ದಕ್ಕೆ 4789 ಪ್ರಕರಣ, ಎನ್​ಡಿಪಿಎಸ್​ (NDPS) ಕಾಯ್ದೆ ಅಡಿ 177, ಸೆಕ್ಷನ್ 15ರಡಿ 28,299 ಪ್ರಕರಣಗಳು ದಾಖಲಾಗಿವೆ. ಅಧಿಕಾರಿಗಳು ಒಟ್ಟು 1,916

ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆ (Income Tax Department) ಅಧಿಕಾರಿಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲಹಂಕಾದ ಮಾದನಾಯನಹಳ್ಳಿ ಬಳಿ

4.80 ಕೋಟಿ ರೂಪಾಯಿ (2172 Cases Registered in Kar) ಜಪ್ತಿ ಮಾಡಿದ್ದಾರೆ.

ಎಫ್​ಎಸ್​ಟಿ ತಂಡ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೋರಮಂಗಲದಲ್ಲಿ 18.82 ಲಕ್ಷ ರೂಪಾಯಿ, ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆಜಿಎಫ್​ನ ಬೇತಮಂಗಲದಲ್ಲಿ 47.56 ಲಕ್ಷ ,

ಮೈಸೂರಿನ ಕಾಳಿದಾಸನಹುಂಡಿ ಚೆಕ್​​ಪೋಸ್ಟ್​​ನಲ್ಲಿ 81.90 ಲಕ್ಷ, ಬೆಂಗಳೂರಿನ (Bengaluru) ರಾಯನ್ ಸರ್ಕಲ್ ಚೆಕ್​​​ಪೋಸ್ಟ್​ನಲ್ಲಿ 20 ಲಕ್ಷ, ಉಡುಪಿ ಜಿಲ್ಲೆ ಕುಂದಾಪುರದಲ್ಲಿ 43.34 ಲಕ್ಷ ರೂಪಾಯಿ ಜಪ್ತಿ

ಮಾಡಲಾಗಿದೆ.

ಇದನ್ನು ಓದಿ: ಮೋದಿ ಭಾಷಣವನ್ನು ತಿರುಚಿ ಅಪ್ಲೋಡ್: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ದೂರು ದಾಖಲು

Exit mobile version