ರೈತರಿಗೆ 7 ತಾಸು ಕರೆಂಟನ್ನು ಹೊರ ರಾಜ್ಯದಿಂದ ಖರೀದಿಸಿಯಾದ್ರೂ ನೀಡುತ್ತೇವೆ: ಸಚಿವ ವೆಂಕಟೇಶ್ ಭರವಸೆ

Chamarajanagar: ಚಾಮರಾಜನಗರದಲ್ಲೂ ಲೋಡ್ ಶೆಡ್ಡಿಂಗ್ (Load Shedding) ಬಗ್ಗೆ ರೈತರು ಸಚಿವ ವೆಂಕಟೇಶ್ (7hours electricity to farmers) ಅವರನ್ನು ಪ್ರಶ್ನಿಸಿದ್ದು,

ಹೊರರಾಜ್ಯಗಳಿಂದ ವಿದ್ಯುತ್ ಖರೀದಿಸುವ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ. ಸಿಎಂ ಸಿದ್ದಾರಾಮಯ್ಯ ಅವರು ವಿದ್ಯುತ್ ಕೊರತೆ ನೀಗಿಸಲು,

ಅಧಿಕಾರಿಗಳ ಸಭೆ ನಡೆಸಿ ಅನುಸರಿಸಬಹುದಾದ ಕ್ರಮಗಳ ಬಗ್ಗೆ ಚರ್ಚೆ (7hours electricity to farmers) ಮಾಡಿದ್ದಾರೆ ಎಂದು ಭರವಸೆ ನೀಡಿದರು.

ಹೊರರಾಜ್ಯದಿಂದ ವಿದ್ಯುತ್ ಖರೀದಿ ಮಾಡಿ 7 ಗಂಟೆ ವಿದ್ಯುತ್ ನೀಡಲಾಗುವುದು. ಅಲ್ಲಿವರೆಗೆ 5 ಗಂಟೆ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದಿದ್ದು, ಪ್ರತಿ ದಿನ 7 ತಾಸು ಪಂಪ್‌ ಸೆಟ್‌ಗಳಿಗೆ

ವಿದ್ಯುತ್‌ ನೀಡಬೇಕೆಂಬ ರೈತ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ನಗರದ ಜೆ.ಎಚ್‌.ಪಟೇಲ್‌ (J.H.Patil) .ಸಭಾಂಗಣದಲ್ಲಿ ನಡೆದ ರೈತ ಸಂಘದ ಮುಖಂಡರು, ರೈತರು ಹಾಗೂ ಅಧಿಕಾರಿಗಳ

ಸಭೆಯ ಅಧ್ಯಕ್ಷತೆ ವಹಿಸಿ ಈ ಕುರಿತು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ನಮ್ಮ ಸರ್ಕಾರ ರೈತರ ಪರವಾಗಿದೆ. ಸರ್ಕಾರ ಎಲ್ಲ ರೀತಿಯಲ್ಲೂ ವಿದ್ಯುತ್‌ ಖರೀದಿಗೆ ಕ್ರಮ ವಹಿಸಲು ಪ್ರಯತ್ನ

ನಡೆಸುತ್ತಿದ್ದು, ರೈತರು ಸಹ ಸಹಕಾರ ನೀಡಬೇಕು. ಅಲ್ಲಿಯವರೆಗೆ ಕೃಷಿ ಪಂಪ್‌ಸೆಟ್‌ಗಳಿಗೆ (Pumpset) 5 ತಾಸು ವಿದ್ಯುತ್‌ ನೀಡಲಾಗುವುದು, ಎಂದು ಹೇಳಿದರು.

ನಮ್ಮಲ್ಲಿ ಲಭ್ಯವಿರುವ ವಿದ್ಯುತ್‌ ಅನ್ನು ಪರಿಸ್ಥಿತಿಗೆ ಅನುಗುಣವಾಗಿ ಪೂರೈಸಬೇಕು. ಅಧಿಕಾರಿಗಳು 7 ಗಂಟೆ ವಿದ್ಯುತ್‌ ನೀಡುವುದಾಗಿ ಹೇಳಿದ್ದಾರೆ. ಆದರೆ, ಕನಿಷ್ಠ 5 ಗಂಟೆಗಳಾದರೂ ನೀಡಲೇಬೇಕೆಂದು

ಸಿದ್ದರಾಮಯ್ಯ ಅವರು ಕೆಪಿಟಿಸಿಎಲ್‌ ಅಧಿಕಾರಿಗಳ ಸಭೆ ನಡೆಸಿ, ಆದೇಶಿಸಿದ್ದಾರೆ,’’ ಎಂದರು.

ಪಂಜಾಬ್(Punjab), ಉತ್ತರಪ್ರದೇಶಗಳಿಂದ (Uttarpradesh) ವಿದ್ಯುತ್‌ ಖರೀದಿ ಪ್ರಕ್ರಿಯೆ ನಡೆದಿದ್ದು, ಅದು ದೊರೆತ ಕೂಡಲೇ 7 ಗಂಟೆ ವಿದ್ಯುತ್‌ ಪೂರೈಸಲಾಗುವುದು. ಸದ್ಯ ವಿದ್ಯುತ್‌

ವಿತರಣೆಯಲ್ಲಿ ಲೋಪ ಆಗದಂತೆ ಕ್ರಮ ವಹಿಸಬೇಕು, ಎಂದು ಸೆಸ್ಕ್‌ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಸರಿಯಾಗಿ ವಿದ್ಯುತ್‌ ಸಿಗದೆ ಜಮೀನಿನಲ್ಲಿ ಬೆಳೆದಿರುವ ಫಸಲು ಒಣಗುತ್ತಿವೆ.

ವಿದ್ಯುತ್‌ ನೀಡಲು ಸಾಧ್ಯವಾಗದಿದ್ದರೆ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಹಳ್ಳಿ ಕೆರೆಹುಂಡಿ ಭಾಗ್ಯರಾಜ್‌ ಒತ್ತಾಯಿಸಿದರು.

ಇದನ್ನು ಓದಿ: ಮದುವೆ ಕಾರ್ಯಕ್ರಮದಲ್ಲಿ ಶಿವಾನಂದ ಪಾಟೀಲ್ ಕಾಲಡಿಯಲ್ಲಿ ರಾಶಿ ರಾಶಿ ದುಡ್ಡು: ಸಕ್ಕರೆ ಸಚಿವರ ವರ್ತನೆಗೆ ಭಾರಿ ಟೀಕೆ.

Exit mobile version