ವಿಶ್ವ ದಾಖಲೆಗಳ ಸರದಾರ ಆಸ್ಟ್ರೇಲಿಯಾದ ಆರೋನ್‌ಫಿಂಚ್‌ ವಿದಾಯ

Cricket: ಆಸ್ಟ್ರೇಲಿಯಾ(Australia) ತಂಡದ ನಾಯಕ ಮತ್ತು ಅನೇಕ ವಿಶ್ವ ದಾಖಲೆಗಳ ಸರದಾರ ಆರೋನ್‌ಫಿಂಚ್‌(Aaron Finch) ಎಲ್ಲ ಮಾದರಿಯ  ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.  ಈ ಮೂಲಕ ಅವರು ಕ್ರಿಕೆಟ್‌ (Aaron Finch cricket Retirement) ಜಗತ್ತಿನಿಂದ ದೂರ ಸರಿದಿದ್ದಾರೆ.

ಕಳೆದ ವರ್ಷದ ಕೊನೆಯಲ್ಲಿ ಏಕದಿನ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದ ಫಿಂಚ್‌,

ಕಳೆದ ವರ್ಷ ನಡೆದ ಟಿ-20(T20) ವಿಶ್ವಕಪ್‌ನಲ್ಲಿ(Worldcup) ಆಸ್ಟ್ರೇಲಿಯಾ ತಂಡ ವಿಶ್ವಕಪ್‌ಗೆಲ್ಲುವಲ್ಲಿ ವಿಫಲವಾದ ನಂತರ ಅವರ ನಿವೃತ್ತಿ ಕುರಿತು ಚರ್ಚೆ ನಡೆದಿತ್ತು.

ಅನೇಕ ಮಾದ್ಯಮಗಳು ಆರೋನ್‌ ಫಿಂಚ್‌ ಅವರು ಟಿ-20 ಮಾದರಿಗೂ  ನಿವೃತ್ತಿಗೆ ಘೋಷಿಸಲಿದ್ದಾರೆ ಎಂದು ವರದಿ ಮಾಡಿದ್ದವು. ಇದೀಗ ಅವರು 2024ಕ್ಕೆ ನಿವೃತ್ತಿ ಘೋಷಿಸಿದ್ದಾರೆ.

“ನಾನು 2024 ರಲ್ಲಿ ಮುಂದಿನ ಟಿ-20 ವಿಶ್ವಕಪ್ ವರೆಗೆ ಆಡುವುದಿಲ್ಲ ಎಂದು ಅರಿತುಕೊಂಡಿದ್ದೇನೆ. ಇದೀಗ ಸರಿಯಾದ ಕ್ಷಣಕ್ಕೆ ನಾನು ವಿದಾಯ ಹೇಳಿದ್ದೇನೆ.

ಹೀಗಾಗಿ ಹೊಸ ಕಾರ್ಯಕ್ರಮವನ್ನು ಯೋಜಿಸಲು ಮತ್ತು ನಿರ್ಮಿಸಲು ತಂಡಕ್ಕೆ ಸಮಯವನ್ನು ನೀಡಿ.  ನಾನು ಪ್ರೀತಿಸುವ ಆಟವನ್ನು ಅತ್ಯುನ್ನತ ಮಟ್ಟದಲ್ಲಿ ಆಡಲು ಅವಕಾಶ ನೀಡಿದ ನನ್ನ ಕುಟುಂಬಕ್ಕೆ,

ವಿಶೇಷವಾಗಿ ನನ್ನ ಪತ್ನಿ ಆಮಿ(Aamy), ನನ್ನ ತಂಡದ ಸಹ ಆಟಗಾರರು, ಕ್ರಿಕೆಟ್ ವಿಕ್ಟೋರಿಯಾ, ಕ್ರಿಕೆಟ್ ಆಸ್ಟ್ರೇಲಿಯಾ(Cricket Australia) ಮತ್ತು ಆಸ್ಟ್ರೇಲಿಯನ್ ಕ್ರಿಕೆಟಿಗರ ಸಂಘಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.

ಇದನ್ನೂ ಓದಿ: ಅನ್ಯರಂತೆ ಶೋ ಆಫ್‌ ಮಾಡದ ಅಪ್ಪಟ್ಟ ಜೋಡಿ ಅಂದ್ರೆ ಸಿದ್ಧಾರ್ಥ್- ಕಿಯಾರಾ : ಕಂಗನಾ ರಣಾವತ್

ನನ್ನ ಅಂತರಾಷ್ಟ್ರೀಯ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ.

ತಂಡದ ಯಶಸ್ಸಿಗಾಗಿ ನಾವು ಆಟವನ್ನು ಆಡುತ್ತೇವೆ. 2021 ರಲ್ಲಿ ಚೊಚ್ಚಲ ಟಿ-20 ವಿಶ್ವಕಪ್ ಗೆಲುವು ಮತ್ತು 2015 ರಲ್ಲಿ ತವರು ನೆಲದಲ್ಲಿ ಏಕದಿನ ವಿಶ್ವಕಪ್ (Aaron Finch cricket Retirement) ಎತ್ತಿ ಹಿಡಿದಿದ್ದು ನಾನು ಹೆಚ್ಚು ಪ್ರೀತಿಸುವ ಎರಡು ನೆನಪುಗಳಾಗಿವೆ.

12 ವರ್ಷಗಳ ಕಾಲ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರರೊಂದಿಗೆ ಮತ್ತು ವಿರುದ್ಧವಾಗಿ ಆಡಲು ಸಾಧ್ಯವಾಗುವುದು ನಂಬಲಾಗದ ಗೌರವವಾಗಿದೆ”

ಎಂದು ಆರೋನ್‌ಫಿಂಚ್‌ ಸಾಮಾಜಿಕ ಮಾದ್ಯಮಗಳಲ್ಲಿ(Social Media) ಬರೆದುಕೊಂಡಿದ್ದಾರೆ.

ಇನ್ನು “ವಿಶ್ವಕಪ್ ಗೆಲುವಿಗೆ ಆಸ್ಟ್ರೇಲಿಯಾದ ನಾಯಕತ್ವ ವಹಿಸಿದ ಕೇವಲ ನಾಲ್ವರು ಪುರುಷ ಆಟಗಾರರಲ್ಲಿ ಒಬ್ಬರಾಗಿ,

ಆರನ್  ಫಿಂಚ್‌ಆಸ್ಟ್ರೇಲಿಯನ್ ಕ್ರಿಕೆಟ್ ಇತಿಹಾಸದಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿರುತ್ತಾರೆ.

ಒಂದು ದಶಕಕ್ಕೂ ಹೆಚ್ಚು ಕಾಲ ಅತ್ಯುನ್ನತ ಮಟ್ಟದಲ್ಲಿ ಆಡಲು ನಂಬಲಾಗದ ನಿರ್ಣಯ ಮತ್ತು ಸಮರ್ಪಣೆ ಅಗತ್ಯವಿರುತ್ತದೆ.

ಆದ್ದರಿಂದ ನಾವು ಆರನ್ ಅವರ ಅಗಾಧ ಕೊಡುಗೆಗಾಗಿ ಧನ್ಯವಾದಗಳು ಮತ್ತು ಅವರ ವೃತ್ತಿಜೀವನದ ಮುಂದಿನ ಹಂತದಲ್ಲಿ ಅವರಿಗೆ ಶುಭ ಹಾರೈಸುತ್ತೇವೆ” ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಡಾ.ಲಾಚ್ಲಾನ್ ಹೆಂಡರ್ಸನ್ ಹೇಳಿದ್ದಾರೆ.

Exit mobile version