ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

Bengaluru: ಅಭಿಷೇಕ್ ಅಂಬರೀಶ್ (Abhishek Ambarish) ಹಾಗೂ ಅವಿವಾ ಬಿದ್ದಪ್ಪ (Aviva Biddappa) ಮದುವೆ ಮುಹೂರ್ತ ನಿಗದಿ ಆಗಿದೆ.ಇದೇ ಬರುವ ಜೂನ್ 5 ರಂದು ಅದ್ಧೂರಿ ವಿವಾಹ ನಡೆಯಲಿದೆ. ಜೂನ್ 7 ರಂದು ಆರತಕ್ಷತೆ ನಡೆಯಲಿದೆ. ಅಭಿಷೇಕ್ ಅಂಬರೀಶ್-ಅವಿವಾ ಮದುವೆಯ ಆಮಂತ್ರಣ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ Abhishek Ambarish marriage) ವೈರಲ್ ಆಗಿದೆ. ಇವರ ಮದುವೆಗೆ ಸಾಕ್ಷಿಯಾಗಲು ಅಭಿಮಾನಿಗಳು ಕಾಯುತ್ತಿದ್ದಾರೆ, ಅಲ್ಲದೆ ಭವಿಷ್ಯದ ಜೋಡಿಗೆ ಅಭಿಮಾನಿಗಳು ಈಗಾಗಲೇ ಶುಭ ಹಾರೈಸುತ್ತಿದ್ದಾರೆ.

ಅಭಿಷೇಕ್ ಮತ್ತು ಅವಿವಾ ಡಿಸೆಂಬರ್ (December) 11, 2022 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಈ ಶುಭ ಕಾರ್ಯವನ್ನು ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಗಣ್ಯರ ಸಮ್ಮುಖದಲ್ಲಿ ಮಾಡಲಾಗಿತ್ತು.ಅಂದಿನಿಂದ, ಇವರಿಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆ (Abhishek Ambarish marriage) ಅಭಿಮಾನಿಗಳಿಗೆ ಮೂಡಿತ್ತು.ಇದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ.

ಜೆಪಿ ನಗರದ ಅಂಬಿ ನಿವಾಸದಲ್ಲಿ ಜೂನ್ 4 ರಂದು ಚಪ್ಪರ ಪೂಜೆ ನಡೆಯಲಿದೆ.

https://youtube.com/shorts/v_467g-UD_E?feature=share

ಜೂನ್ 5 ರಂದು ಬೆಳಿಗ್ಗೆ ಮಾಣಿಕ್ಯ-ಚಾಮರ ವಜ್ರದಲ್ಲಿ (Manikya-Chamara Vajra) ಮದುವೆ ನಡೆಯಲಿದೆ. ಜೂನ್ 7 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ.

ಸುಮಲತಾ ಅಂಬರೀಷ್ (Sumalatha Ambarish) ಇವರು ಚಿತ್ರರಂಗ ಮತ್ತು ರಾಜಕೀಯದಲ್ಲಿ ಗುರುತಿಸಿಕೊಂಡವರು. ಅಂಬರೀಶ್ ಕೂಡ ಬಹಳ ಜನಪ್ರಿಯತೆ ಹೊಂದಿದ್ದರು.


ಆದ್ದರಿಂದ ಎರಡೂ ಕ್ಷೇತ್ರದ ಗಣ್ಯರು ಆರತಕ್ಷತೆಗೆ ಬರಲಿದ್ದಾರೆ. ಇನ್ನು ಆಪ್ತ ಸ್ನೇಹಿತರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಡ್ಯದಲ್ಲಿ ಜೂನ್ 16ರಂದು ಬೀಗರ ಊಟ ನಡೆಯಲಿದೆ.
ಇದರಲ್ಲಿ ಸುಮಾರು 1 ಲಕ್ಷ ಜನರು ಭಾಗಿ ಆಗುವ ನಿರೀಕ್ಷೆ ಇದೆ.

ರಶ್ಮಿತಾ ಅನೀಶ್

Exit mobile version