ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಜುಲೈ 15 ರಿಂದ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಪ್ರವೇಶ ನಿಷೇಧ

ಬೆಂಗಳೂರು(ಜೂ.29): ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ (about Bengaluru Mysore Expressway) ಉದ್ಘಾಟನೆಯಾದ ಬಳಿಕ ಅದರಲ್ಲಿ ಪ್ರಯಾಣದ ಅವಧಿ ಕಡಿಮೆಯಾಗಿದೆ

ಆದರೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಎಲ್ಲಾ ವಾಹನಗಳಿಗೆ ಸಹ ರಸ್ತೆ ಉದ್ಘಾಟನೆ ಬಳಿಕ ಮುಕ್ತ ಪ್ರವೇಶ ನೀಡಲಾಗಿದೆ. ಈ ಎಕ್ಸ್‌ಪ್ರೆಸ್‌ವೇನಲ್ಲಿ(Express way) ಅತೀ ವೇಗದ ಚಾಲನೆ,

ವಿರುದ್ಧ ದಿಕ್ಕಿನಿಂದ ಸಂಚಾರ, ರಸ್ತೆ ನಿಯಮ ಉಲ್ಲಂಘನೆ ಸೇರಿದಂತೆ ಹಲವು ಕಾರಣಗಳಿಂದ ಅಪಘಾತ ಸಂಖ್ಯೆ ಹೆಚ್ಚಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority)ಇದರ ಬೆನ್ನಲ್ಲೇ ಇದೀಗ ಕಟ್ಟ ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ಜುಲೈ 15 ರಿಂದ ದ್ವಿಚಕ್ರ ವಾಹನ

(Two Wheeler) ಸಂಚಾರ ಹಾಗೂ ಆಟೋ ರಿಕ್ಷಾ(about Bengaluru Mysore Expressway) ಪ್ರವೇಶಕ್ಕೆ ನಿರ್ಬಂಧ ಹೇರಲಾಗತ್ತಿದೆ.

ಪ್ರಮುಖವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದು ದುರಂತಕ್ಕೆ ಮುಖ್ಯ ಕಾರಣವಾಗುತ್ತಿದೆ. ಇದರ ಜೊತೆಗೆ ಇಲ್ಲಿ ಹಾಕಿರುವ ಫೆನ್ಸಿಂಗ್ (Fencing) ಅನ್ನು

ರಸ್ತೆ ಇಕ್ಕೆಲ ವ್ಯಾಪಾರಿಗಳು ತಮ್ಮ ವ್ಯಾಪಾರಕ್ಕಾಗಿ ಮುರಿದಿದ್ದಾರೆ. ಇದರಿಂದ ಜನರು ರಸ್ತೆ ದಾಟುತ್ತಿದ್ದಾರೆ. ಇದರ ಜೊತೆಗೆ ಪ್ರಾಣಿಗಳು ಮತ್ತು ನಾಯಿಗಳು ಸಹ ಇದೇ ದಾರಿ ಮೂಲಕ ದಾಟುತ್ತಿದ್ದವೇ.

ಇದು ಕೂಡ ಅಪಘಾತಕ್ಕೆ ಪ್ರಮುಖ ಕಾರಣಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅತೀ ವೇಗದ ಚಾಲನೆ, ದಿಢೀರ್ ನಿಲ್ಲಿಸುವಿಕೆಗಳಿಂದ ಮತ್ತು ಲೇನ್ ಬದಲಾಯಿಸುವಿಕೆಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತು ವಿರುದ್ಧ ದಿಕ್ಕಿನಿಂದ ಹಲವು ದ್ವಿಚಕ್ರ ವಾಹನ ಸವಾರರು ಚಲಿಸುತ್ತಿದ್ದಾರೆ.

ಹೆಚ್ಚಿನ ಅಪಘಾತದ ಹಿಂದೆ ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನ ಕಾರಣವಾಗಿದೆ. ಹೀಗಾಗಿ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಸಂಚರವನ್ನು ಹೀಗಾಗಿ ಜುಲೈ 15ರ ಬಳಿಕ ನಿಷೇಧಿಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತ ಅಧಿಸೂಚನೆಗಾಗಿ ಕಾಯುತ್ತಿದೆ. ಜುಲೈ(JULY) ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : ಭಾರತದಿಂದ ಬ್ಯಾಂಕಾಕ್‌ಗೆ ಶೀಘ್ರದಲ್ಲಿಯೇ ಹೆದ್ದಾರಿ : ಥೈಲ್ಯಾಂಡ್‌ಗೆ ಈ ಹೆದ್ದಾರಿ ಶಾರ್ಟ್‌ಕಟ್‌

ಗಂಟೆಗೆ 120 ಕಿಲೋಮೀಟರ್ ಎಂದು ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿಯ ವೇಗವನ್ನು ನಿಗದಿ ಮಾಡಲಾಗಿದೆ. ಆದರೆ ಆಟೋ ರಿಕ್ಷಾ, ಮತ್ತು ಬೈಕ್ 120 ಕಿಲೋಮೀಟರ್

ವೇಗದಲ್ಲಿ ಸಂಚಾರ ಮಾಡುತ್ತಿರುವುದರಿಂದ ಅಪಾಯ (about Bengaluru Mysore Expressway) ತಂದೊಡ್ಡಲಿದೆ.

ಇತ್ತೀಚೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರವನ್ನು(Toll Rate) ಸಹ ಹೆಚ್ಚಿಸಲಾಗಿದೆ. ಇದರ ವಿರುದ್ದ ಅನೇಕ ಬಾರಿ ಪ್ರತಿಭಟೆಗಳೂ ನಡೆದಿದೆ. ಕಾರ್‌, ಜೀಪ್‌ ಮತ್ತು ವ್ಯಾನ್‌ಗಳ ಏಕಮುಖ

ಟೋಲ್ ದರ 135 ರೂಪಾಯಿಯಿಂದ 165 ರು.ಗೆ ಏರಿಸಲಾಗಿದೆ. ದ್ವಿಮುಖ ಸಂಚಾರ ದರವನ್ನು 205 ರಿಂದ 250 ರೂಪಾಯಿಗೆ ಏರಿಸಲಾಗಿದೆ.

ಸ್ಥಳೀಯ ವಾಹನಗಳ ಶುಲ್ಕವನ್ನು 70ರಿಂದ 85 ರೂಗಳಿಗೆ ಎರೆಕೆಯಾಗಿದೆ. ಇನ್ನು ತಿಂಗಳ ಪಾಸ್‌ ಅನ್ನು 4525 ರೂಪಾಯಿಂದ 5575 ರುಪಾ​ಯಿಗೆ ಹೆಚ್ಚಿಸ​ಲಾ​ಗಿ​ದೆ. ಮಿನಿ ಬಸ್‌ಗಳ ಮತ್ತು ಲಘು ವಾಹನಗಳ

ಏಕಮುಖ ಟೋಲ್‌ 220ರಿಂದ 270 ರೂ ಮತ್ತು ದ್ವಿಮುಖ ಸಂಚಾರಕ್ಕೆ 330 ರಿಂದ 405 ರುಪಾಯಿ (75ರು. ಹೆಚ್ಚಳ) ಏರಿಕೆಯಾಗಿದೆ.

ರಶ್ಮಿತಾ ಅನೀಶ್

Exit mobile version