ಅನ್ನಭಾಗ್ಯಕ್ಕೆ ಇದೀಗ ಮತ್ತೊಂದು ಅಡೆತಡೆ : ಪಡಿತರ ಸಂಘದಿಂದ ಜುಲೈ 13 ರವರೆಗೂ ರೇಷನ್‌ ವಿತರಣೆ ಮಾಡದಿರಲು ನಿರ್ಧಾರ

Bengaluru: ಸರಕಾರ ಬಿಪಿಎಲ್‌ ಕಾರ್ಡ್‌ದಾರರಿಗೆ ಅನ್ನಭಾಗ್ಯ (about Ration Association Decision) ಯೋಜನೆಯಡಿ ಅಕ್ಕಿ ಬದಲು ಹಣ ನೀಡಲು ಮುಂದಾಗುತ್ತಿರುವ ನಡುವೆಯೇ ಇದೀಗ ಹೊಸ ಸಮಸ್ಯೆ

ತಲೆದೋರಿದೆ. ಸರ್ಕಾರಿ ಪಡಿತರ ವಿತರಕರ ಸಂಘವು ಇದೀಗ ರಾಜ್ಯ ಸರ್ಕಾರವು ಅಕ್ಕಿ ಬದಲು ಹಣ ಕೊಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದೂ ಜುಲೈ (July) 13ರವರೆಗೈ ಅಕ್ಕಿ ಪಡೆಯಲ್ಲ ಎಂದು ನಿರ್ಧರಿಸಿದೆ.

ಈ ಬಗ್ಗೆ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ ಕೃಷ್ಣಪ್ಪ (T.Krishnappa) ನೇತೃತ್ವದಲ್ಲಿ ಬೆಂಗಳೂರಿನಲ್ಲಿ (Bengaluru) ಮಂಗಳವಾರ ಸಭೆ ನಡೆಸಲಾಯಿತು. ಸಭೆಯಲ್ಲಿ ಸಾವಿರಾರು ಮಾಲೀಕರು

ಹಾಗೂ ತಾಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಪದಾರ್ಥಗಳ ಬದಲಾಗಿ ಹಣ ನೀಡಿದರೆ ಪಡಿತರ ವಿತರಕರಿಗೆ ಕಮಿಷನ್‌ ತುಂಬಾ ಕಡಿಮೆ ಆಗಲಿದೆ

ಎಂದು ಆಕ್ರೋಶ (about Ration Association Decision) ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ

ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ನಮ್ಮ ಕಮಿಷನ್‌ ಹಣವನ್ನು ಸಹ ಹೆಚ್ಚಳ ಮಾಡಬೇಕು.ಪಡಿತರ ವಿತರಕರ ಸಂಘ ಸರ್ಕಾರದ ಮುಂದೆ ಪಡಿತರದಾರರಿಗೆ ಆಹಾರ ಪದಾರ್ಥಗಳನ್ನು ಮಾತ್ರ ವಿತರಣೆ ಮಾಡಬೇಕು

ಎಂಬ ಬೇಡಿಕೆಯನ್ನು ಇಟ್ಟಿದೆ. ಈ ಬಗ್ಗೆ ಪಡಿತರ ವಿತರಕರ ಸಂಘ ಜುಲೈ 13ರೊಳಗೆ ಪಡಿತರ ವಿತರಕರ ಸಂಘಟನೆಗಳ ಸಭೆಯನ್ನು ಕರೆದು ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದೆ.

ಅಲ್ಲಿಯವರೆಗೂ ಗೋದಾಮಿನಿಂದ ಪಡಿತರ ಸಾಮಗ್ರಿಗಳನ್ನು ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು ಎತ್ತುವಳಿ ಮಾಡಬಾರದು ಎನ್ನುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ ಕ್ವಿಂಟಾಲ್‌ಗೆ 124 ರೂ. ಕಮಿಷನ್‌!

ಈ ಮೊದಲು ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಜುಲೈ 5ರವರೆಗೆ ಅಕ್ಕಿ ಬದಲು ಹಣ ನೀಡುವುದನ್ನು ವಿರೋಧಿಸಿ ಪಡಿತರ ವಿತರಣೆ ಮಾಡದಿರಲು ನಿರ್ಧರಿಸಿತ್ತು. ಆದರೆ, ಜುಲೈ 13ರವರೆಗೂ ಪಡಿತರ

ಎತ್ತುವಳಿ ಮಾಡಬಾರದು ಎಂಬ ತೀರ್ಮಾನವನ್ನು ಮಂಗಳವಾರ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಸದ್ಯ ಪಡಿತರ ವಿತರಣೆಗೆ ವಿತರಕರಿಗೆ ಪ್ರತಿ ಕ್ವಿಂಟಾಲ್‌ 124 ರೂ. ಕಮಿಷನ್‌ ಸಿಗುತ್ತಿದೆ.ಒಂದು ವೇಳೆ

10 ಕೆಜಿ ಪಡಿತರ ವಿತರಿಸಿದರೆ ಅವರಿಗೆ ಹೆಚ್ಚು ಕಮಿಷನ್‌ ಹಣ ಅವರಿಗೆ ಸಿಗುತ್ತಿತ್ತು. ಆದರೆ,ಪಡಿತರ ವಿತರಕರಿಗೆ ಸಿಗಬೇಕಿರುವ ಕಮಿಷನ್‌ ಹಣ ಕಾರ್ಡ್‌ದಾರರಿಗೆ ನೇರವಾಗಿ ಹಣ ನೀಡಿದರೆ ಸಿಗುವುದಿಲ್ಲ.

ಅಕ್ಕಿ ಬದಲು ರೊಕ್ಕ ನೀಡಲು ನಿರ್ಧಾರ

ರಾಜ್ಯ ಕಾಂಗ್ರೆಸ್‌ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಚುನಾವಣೆ ವೇಳೆ ಘೋಷಿಸಿದಂತೆ 10 ಕೆಜಿ ಅಕ್ಕಿಯನ್ನು ಬಿಪಿಎಲ್‌ ಕಾರ್ಡ್‌ನ ಪ್ರತಿಯೊಬ್ಬರಿಗೂ ನೀಡಲು ಮುಂದಾಗಿತ್ತು. ಆದರೆ ಬೇರೆ ರಾಜ್ಯಗಳಿಂದಲೂ ಅಕ್ಕಿ ದಾಸ್ತಾನು

ಹೊಂದಿಸಲು ಆಗದಿರುವ ಕಾರಣ ಮತ್ತು ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅಕ್ಕಿ ಸಿಗದ ಹಿನ್ನೆಲೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸದ್ಯ ಅಕ್ಕಿ ಬದಲು ದುಡ್ಡು ನೀಡಲು ತೀರ್ಮಾನಿಸಿದೆ. 5 ಕೆಜಿ ಅಕ್ಕಿ ಮತ್ತು 5 ಕೆಜಿ

ಅಕ್ಕಿಗೆ ಬದಲಾಗಿ ಸರ್ಕಾರ ದುಡ್ಡು ಕೊಡಲು ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪ್ರತಿ ಕೆಜಿಗೆ 34 ರೂ. ಅಂತೆ ಅಕೌಂಟ್‌ಗೆ ದುಡ್ಡು ಹಾಕಲು ತೀರ್ಮಾನಿಸಲಾಗಿದೆ.

ರಶ್ಮಿತಾ ಅನೀಶ್

Exit mobile version