ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ಹುಟ್ಟಿಕೊಂಡಿತು : ನಟ ಚೇತನ್

Actor

Politics : ಇಂದಿರಾ ಗಾಂಧಿಯವರು(Indira Gandhi) 1970ರ ದಶಕದ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ(Actor Chethan Ahimsa allegation) ಹುಟ್ಟಿಕೊಂಡಿತು.

ಭ್ರಷ್ಟಾಚಾರದ ವಿಷವಾಗಿ ಕಾಂಗ್ರೆಸ್ ಆರೋಪಗಳನ್ನು ಮಾಡುತ್ತಿರುವುದು ಅಸಂಬದ್ಧ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ(Social Activist) ಚೇತನ್(Actor Chethan Ahimsa allegation) ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್‌ ಮುಖಪುಟದಲ್ಲಿ ಬರೆದುಕೊಂಡಿರುವ ಅವರು,

ಇದನ್ನೂ ಓದಿ : https://vijayatimes.com/team-india-faces-south-africa/

ಇಂದಿರಾ ಗಾಂಧಿಯವರು 1970ರ ದಶಕದ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ಹುಟ್ಟಿಕೊಂಡಿತು. ಭ್ರಷ್ಟಾಚಾರದ ವಿಷಯವಾಗಿ ಕಾಂಗ್ರೆಸ್ ಆರೋಪಗಳನ್ನು ಮಾಡುತ್ತಿರುವುದು ಅಸಂಬದ್ಧ.
ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಬಿಜೆಪಿ(BJP) ಎಂಬ ಹೇಳಿಕೆಯನ್ನು ಕಾಂಗ್ರೆಸ್ನ ಮಾಜಿ ಸಚಿವರಾದ ಹೆಚ್.‌ ಆಂಜನೇಯ ಅವರು ನೀಡಿದ್ದಾರೆ.

ನಾವು ಆಂಜನೇಯ ಅವರ ವೈಚಾರಿಕತೆಯನ್ನು ಗೌರವಿಸುತ್ತೇವೆಯಾದರೂ ಈ ಹೇಳಿಕೆಯು ಸ್ಪಷ್ಟವಾಗಿ ಪಕ್ಷಪಾತದಿಂದ ಹುಟ್ಟಿರುವಂಥದ್ದು. ಅವರ ಮಾತು ಸತ್ಯವೂ ಅಲ್ಲ ಎಂದು ನಟ ಚೇತನ್ ಹೇಳಿದ್ದಾರೆ. ಇನ್ನು ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಹೆಚ್. ಆಂಜನೇಯ ಅವರು ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾಗಿದ್ದಾಗ ವಸತಿ ನಿಲಯಗಳಿಗೆ ಹಾಸಿಗೆ,

https://youtu.be/SyhbbPUYOjU

ದಿಂಬು ಮತ್ತು ಮಂಚ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹಾಸಿಗೆ, ದಿಂಬು ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದು ಸಮರ್ಥಿಸಿಕೊಂಡು,

ಭ್ರಷ್ಟಾಚಾರವನ್ನು ಹುಟ್ಟು ಹಾಕಿದ್ದೆ ಬಿಜೆಪಿ. ಹೀಗಾಗಿ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಲ್ಲಿ ಬಿಜೆಪಿ ಪಕ್ಷ ಭಾಗಿಯಾಗಿದೆ ಎಂದು ಆರೋಪಿಸಿದ್ದರು.

Exit mobile version