ಶಾಲೆಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸುವುದು ಜಾತ್ಯತೀತತೆಗೆ ವಿರುದ್ಧವಾದ ನಡೆ : ನಟ ಚೇತನ್

Ganesha Festival

ಶಾಲೆಗಳಲ್ಲಿ(Schools) ಗಣೇಶ ಚತುರ್ಥಿಯನ್ನು(Ganesh Festival) ಆಚರಿಸುವುದು ಜಾತ್ಯತೀತತೆಗೆ ವಿರುದ್ಧವಾದ ನಡೆ. ಗಣೇಶನನ್ನು ಕೂಡ ತರಗತಿಗಳಿಂದ ಹೊರಗಿಡಬೇಕು ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ(Social Activist) ಚೇತನ್(Chethan Ahimsa) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಸರ್ಕಾರಿ ಶಾಲೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗಣೇಶ ಚತುರ್ಥಿಯನ್ನು ಆಚರಿಸಬಹುದು ಎಂದು ಕರ್ನಾಟಕದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್(BC Nagesh) ಅವರು ಹೇಳಿಕೆಯನ್ನು ನೀಡಿದ್ದಾರೆ.

ಇದು ಜಾತ್ಯತೀತತೆಗೆ ವಿರುದ್ಧವಾದ ನಡೆ. ಹಿಜಾಬ್ಗಳನ್ನು ಸರ್ಕಾರಿ ತರಗತಿಗಳಿಂದ ಹೇಗೆ ಹೊರಗಿಡಬೇಕೋ, ಹಾಗೆಯೇ ಗಣೇಶನನ್ನು ಕೂಡ ತರಗತಿಗಳಿಂದ ಹೊರಗಿಡಬೇಕು. ಎಲ್ಲ ಧರ್ಮಗಳನ್ನು ಸರಕಾರದಿಂದ ದೂರವಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ತಮ್ಮ ಇನ್ನೊಂದು ಬರಹದಲ್ಲಿ ಕಾಂಗ್ರೆಸ್‌(Congress) ಮತ್ತು ಬಿಜೆಪಿಯನ್ನು(BJP) ಟೀಕಿಸಿದ್ದು, ಆರೆಸ್ಸೆಸ್/ಬಿಜೆಪಿ ತಮ್ಮ ದ್ವೇಷಪೂರಿತ, ವಿಭಜಕ ಹಿಂದುತ್ವದ ಮೂಲಕ ಯಾವತ್ತೂ ದೇಶಪ್ರೇಮಿಯಾಗಿಲ್ಲ.

ಕಾಂಗ್ರೆಸ್ — ಅದರ ಯಥಾಸ್ಥಿತಿಯ, ಸ್ವ-ಸೇವೆಯ ಉದಾರವಾದ ಮೂಲಕ ಹುಸಿ ದೇಶಭಕ್ತಿ. ಸಮಾನತೆ, ನ್ಯಾಯ ಮತ್ತು ನಮ್ಮ ಸಂವಿಧಾನದ ಪೀಠಿಕೆಯನ್ನು ಬದುಕುವ ಮತ್ತು ವಾಸ್ತವಿಕಗೊಳಿಸುವವರು ನಿಜವಾದ ದೇಶಭಕ್ತರು ಎಂದಿದ್ದಾರೆ. ಇದಕ್ಕೂ ಮುನ್ನ ಸರ್ಕಾರಿ ಶಾಲೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗಣೇಶ ಚತುರ್ಥಿಯನ್ನು ಆಚರಿಸಬಹುದು ಎಂದು ಕರ್ನಾಟಕದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಹೇಳಿಕೆ ನೀಡಿದ್ದರು.

ಶಿಕ್ಷಣ ಸಚಿವರ ಹೇಳಿಕೆ ಬೆನ್ನಲ್ಲೇ ಶಾಲೆಗಳಲ್ಲಿ ಮುಸ್ಲಿಂ ಧರ್ಮೀಯರ ಹಬ್ಬಗಳನ್ನು ಕೂಡಾ ಆಚರಣೆ ಮಾಡಲು ಅವಕಾಶ ನೀಡಬೇಕೆಂದು ಕೋರಿ ವಕ್ಫ್‌ಬೋರ್ಡ್‌ ಅಧ್ಯಕ್ಷರು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಈ ವಿವಾದ ರಾಜ್ಯದಲ್ಲಿ ಸದ್ದು ಮಾಡುತ್ತಿದೆ.

Exit mobile version