ವಿಶ್ವದಲ್ಲೇ ಪರಮ ಭ್ರಷ್ಟರೆಂದು ರುಜುವಾತಾದ ಮೋದಿ ಸರ್ಕಾರ ಇನ್ಯಾರ ಪರ?– ನಟ ಕಿಶೋರ್‌ ಪ್ರಶ್ನೆ

ಎಲೆಕ್ಟೊರಲ್ ಬಾಂಡಿನ (Electoral Bond) ಮುಖಾಂತರ ವಿಶ್ವದಲ್ಲೇ ಪರಮ ಭ್ರಷ್ಟರೆಂದು ರುಜುವಾತಾದ ಮೋದಿ ಮತ್ತಿವರ ಸರ್ಕಾರ ಇನ್ಯಾರ ಪರ??? ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಕಿಶೋರ್‌ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಬಿಜೆಪಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್‌ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಇವರು ಯಾರ ಪರ? ದೇಶದ ಜನಸಂಖ್ಯೆಯ 60% ಇರುವ ರೈತರ ವಿರೋಧಿ (ಗೋದೀ ಮಾಧ್ಯಮ ಮತ್ತಿವರ ಐಟಿ ಗೂಂಡಾಪಡೆಯ ಮುಖಾಂತರ ಖಾಲಿಸ್ತಾನಿಗಳೆಂದು ಹಣೆಪಟ್ಟಿ ಹಚ್ಚಿಸಿಕೊಂಡ ರೈತ ಚಳುವಳಿ, ಲಖೀಮ್ ಪುರ್ ಖೀರಿ) , 48% ಇರುವ ಮಹಿಳೆಯರ ವಿರೋಧಿ (ಮಹಿಳಾ ಪೈಲ್ವಾನರ ಹೋರಾಟ ಮತ್ತು ಮಣಿಪುರದಲ್ಲಿ ದೇಶವಿರೋಧಿ, ಅಕ್ರಮ ವಲಸಿಗರೆಂದು ಹಣೆಪಟ್ಟಿ ಹಚ್ಚಿಸಿಕೊಂಡವರು),

25% ಇರುವ ದಲಿತ ಆದಿವಾಸಿಗಳ ವಿರೋಧಿ (ಅಕ್ರಮ ವಲಸಿಗರೆಂದು ಹಣೆಪಟ್ಟಿ ಹಚ್ಚಿಸಿಕೊಂಡ ಮಣಿಪುರದ ಕುಕಿಗಳು (Manipura Kuki) , 14% ಇರುವ ಮುಸ್ಲಿಮರ, 2.5% ಇರುವ ಕ್ರಿಶ್ಚಿಯನ್ನರ ವಿರೋಧಿ (ಮಣಿಪುರ ಮತ್ತು ದೇಶಾದ್ಯಂತ ಪಾಕಿಸ್ತಾನಿಗಳು ಮತ್ತು ಅಕ್ರಮ ಧರ್ಮಾಂತರಿಗಳೆಂದು ಹಣೆಪಟ್ಟಿ ಹಚ್ಚಿಸಿಕೊಂಡವರು) 2% ಇರುವ ಸಿಖ್ಖರ ವಿರೋಧಿ ( ರೈತ ಚಳುವಳಿ) , 3% ಇರುವ ಸರ್ಕಾರಿ ನೌಕರರ ವಿರೋಧಿ (ವ್ಯರ್ಥ ಖರ್ಚಿನ ಹಣೆಪಟ್ಟಿ ಹಚ್ಚಿಸಿಕೊಂಡ ಪಿಂಚಣಿ ಸಮಸ್ಯೆ) 36 ಲಕ್ಷ ಯೋಧರ ವಿರೋಧಿ (ಪುಲ್ವಾಮಾದಲ್ಲಿ (Pulwama), ಅಗ್ನಿವೀರ್ ಮೂಲಕ ರಾಜಕೀಯ ಲಾಭಕ್ಕಾಗಿ ದೇಶದ ಹೆಸರಲ್ಲಿ ಬಲಿಯಾದವರು )

80% ಹಿಂದೂಗಳ ವಿರೋಧಿ (ಧರ್ಮಗುರುಗಳಾದ ಶಂಕರಾಚಾರ್ಯರುಗಳನ್ನೇ ದೇಶದ್ರೊಹಿಗಳನ್ನಾಗಿ ಬಿಂಬಿಸಿ ಅರ್ದಂಬರ್ಧ ರಾಮ ಮಂದಿರವನ್ನು ತನ್ನ ಪ್ರಚಾರಕ್ಕೆ ಬಳಸಿ) ಹಾಗಾದರೆ ಉಳಿದವರು ಯಾರು ? ಎಲೆಕ್ಟೊರಲ್ ಬಾಂಡಿನ ಮುಖಾಂತರ ವಿಶ್ವದಲ್ಲೇ ಪರಮ ಭ್ರಷ್ಟರೆಂದು ರುಜುವಾತಾದ ಮೋದಿ ಮತ್ತಿವರ ಸರ್ಕಾರ ಇನ್ಯಾರ ಪರ? ಎಂದು ಪ್ರಶ್ನಿಸಿದ್ದಾರೆ. ಮಣಿಪುರ ಗಲಭೆ (Manipura Voilence), ಕುಸ್ತಿಪಟುಗಳ ವಿವಾದ, ರೈತರ ಹೋರಾಟ, ಸಿಎಎ, ಚುನಾವಣಾ ಬಾಂಡ್‌ ಸೇರಿದಂತೆ ಅನೇಕ ವಿಷಯಗಳನ್ನು ಇಟ್ಟುಕೊಂಡು ನಟ ಕಿಶೋರ್‌ ಅವರು ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ದ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದಾರೆ. ಇನ್ನೊಂದೆಡೆ ಕಳೆದ ವಾದ ರಾಹುಲ್ ಗಾಂಧಿ (Rahul Gandhi) ಅವರನ್ನು ಬೆಂಬಲಿಸಿ ಪೋಸ್ಟ್‌ವೊದನ್ನು ಹಾಕಿದ್ದರು.

Exit mobile version