ದೇಶದ ಆಸ್ತಿಗಳನ್ನೆಲ್ಲಾ ಗೆಳೆಯನಿಗೆ ಕೊಟ್ಟವರನ್ನೇನು ಮಾಡಬೇಕು: ‘ಮೋದಾನಿ’ ವಿರುದ್ಧ ನಟ ಕಿಶೋರ್ ವಾಗ್ದಾಳಿ

Bengaluru: ಬಹುಬಾಷಾ ನಟ ಕಿಶೋರ್‌ ಕುಮಾರ್‌ (Actor Kishore Against MODI) ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದ್ದು, ಇವರ ಸರ್ಕಾರದ ಅವಧಿಯಲ್ಲಿ ನಡೆದ

ಅನೇಕ ಘಟನೆಗಳನ್ನು ಟೀಕಿಸಿ ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಸುಧೀರ್ಘ (Actor Kishore Against MODI) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಅದಾನಿ ವಿರುದ್ಧ ಹಿಂಡನ್ಬರ್ಗ್ (Hindenburg) ಆರೋಪ, ರೈತರ ಪ್ರತಿಭಟನೆ, ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ, ಸಂಸದೆ ಮಹುವಾ ಮೊಯಿತ್ರಾರನ್ನು ಉಚ್ಚಾಟನೆ ಸಂಬಂಧ ತಮ್ಮ

ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್‌ (Facebook) ಪೋಸ್ಟ್‌ ನಲ್ಲಿ “ನಾಚಿಕೆಗೆಟ್ಟ ವಿಶ್ವಗುರುವಿನ ನವ ಭಾರತಕ್ಕೆ ಸ್ವಾಗತ. ತಾನು ಮಾಡುತ್ತಿರುವ ಕುಕೃತ್ಯಗಳು ಜಗತ್ತಿಗೆ ಕಾಣುತ್ತಿರುವುದನ್ನು ತಿಳಿದೂ ಮುಂದುವರೆಸುವುದು

ಭಂಡತನ. ನಾಚಿಕೆಗೇಡಿತನದ ಪರಾಕಾಷ್ಟೆ” ಎಂದು ಪ್ರಧಾನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತಿ ದೊಡ್ಡ ಸ್ಕ್ಯಾಮ್ (Scam) ಗಾರ ಎಂದು ಆರೋಪ ಹೊತ್ತ, ನೀತಿ ಆಯೋಗದ

ವರದಿಯ ಪ್ರಕಾರ ಯೋಗ್ಯತೆಯೇ ಇಲ್ಲದೇ ಇದ್ದರೂ ಬರೀ ವಿಶ್ವಗುರುವಿಗೆ

ತನ್ನ ಏರೋಪ್ಲೇನ್‌ ಹತ್ತಿಸಿ ದೇಶದ ಬಹುಪಾಲು ಆಸ್ತಿಯನ್ನು ತನ್ನದಾಗಿಸಿಕೊಂಡ ಅದಾನಿ ವಿರುದ್ಧ ಹಿಂಡನ್ಬರ್ಗ್ ಆರೋಪ ಮತ್ತು ಅದರ ಹಲವು ಸಾಕ್ಷಿಗಳು ಹೊರ ಬಂದು ವರ್ಷವೇ ಕಳೆದರೂ

ಕಮಕ್ ಕಿಮಕ್ಕನ್ನದ, ರೈತರನ್ನು ಆತಂಕವಾದಿಗಳೆಂದು ಕರೆದು ಅವರ ಮೇಲೆ ಜೀಪು ಹತ್ತಿಸಲು ತನ್ನ ಮಗನಿಗೆ ಕುಮ್ಮಕ್ಕು ಕೊಟ್ಟ ಗೃಹರಾಜ್ಯ ಸಚಿವ ಟೇನಿ ಬಗ್ಗೆ 2 ವರ್ಷವಾದರೂ ಮಾತಾಡದೇ

ಕೈಕಟ್ಟಿ ಕೂತ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ವಿಶ್ವ ಪ್ರಸಿದ್ಧ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಬ್ರಿಜ್ ಭೂಷಣ (Brij Bhushan)ನ ಕೂದಲೂ ಅಲ್ಲಾಡಿಸಲಾಗದ, ನಾಚಿಕೆಯೇ ಇಲ್ಲದ ಸರ್ಕಾರ, ಮೋದಾನಿಯ

ಜೋಡಿಯ ಬಣ್ಣ ಬಯಲು ಮಾಡಿದ್ದಕ್ಕೆ, ಆಧಾರವೇ ಇಲ್ಲದ ಆರೋಪದ ನೆಪದಲ್ಲಿ ಬಂಗಾಳದ ದಿಟ್ಟ ಮಹಿಳಾ ಸಂಸದೆ ಮಹುವಾ ಮೊಯಿತ್ರಾರನ್ನು ನಂಬಲಸಾಧ್ಯ ವೇಗದಲ್ಲಿ ಉಚ್ಚಾಟನೆ ಮಾಡಿಬಿಡುತ್ತದೆ.

ಲಾಗಿನ್ ಐಡಿ ಪಾಸ್ವರ್ಡ್ (Login ID Password) ಸ್ನೇಹಿತನಿಗೆ ಕೊಟ್ಟದ್ದಕ್ಕೆ ಸಂಸತ್ತಿನಿಂದ ಉಚ್ಚಾಟನೆಯಾಗಬಹುದಾದರೆ, ದೇಶದ ಆಸ್ತಿಗಳನ್ನೆಲ್ಲಾ ಗೆಳೆಯನಿಗೆ ಕೊಟ್ಟ ವಿಶ್ವಗುರುವನ್ನೇನು ಮಾಡಬೇಕು

ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ನೋಡಿ ಮೊಯಿತ್ರಾಜೀ (Moitrajee) ಕಲಿಯಿರಿ ನಮ್ಮ ವಿಶ್ವಗುರುವಿನಿಂದ ಉಚ್ಚಾಟನೆಯಾಗದೆ ಗೆಳೆಯರಿಗೆ ಲಾಭ ಮಾಡಿಕೊಡುವುದು ಮತ್ತು ಗೆಳೆಯರಿಂದ ಲಾಭ ಪಡೆಯುವುದು ಹೇಗೆ ಎಂದು

” ಪೋಸ್ಟ್‌ ಹಂಚಿಕೊಂಡಿದ್ದಾರೆ.

ಇದನ್ನು ಓದಿ: ನನ್ನ ಮೇಲೆ ದಾಳಿ ನಡೆಸಲು ಸಿಎಂ ಪಿಣರಾಯಿ ಸಂಚು: ಗಂಭೀರ ಆರೋಪ ಮಾಡಿದ ರಾಜ್ಯಪಾಲ ಆರಿಫ್ ಖಾನ್

Exit mobile version