“ನರಸತ್ತ ಚುನಾವಣಾ ಆಯೋಗ”- ನಟ ಕಿಶೋರ್ ಗಂಭೀರ ಆರೋಪ!

ನರಸತ್ತ ಚುನಾವಣಾ ಆಯೋಗ ಬೆಂಬಲಕ್ಕಿರುವಾಗ ಕೆಲಸ ಮಾಡುವುದಕ್ಕಿಂತ ಸುಳ್ಳು ಹೇಳುವುದು ಅವನಿಗೆ ಸಲೀಸಲ್ಲವೇ.. ಯಾರೇ ಅಧಿಕಾರಕ್ಕೆ ಬರಲಿ ದೇಶ ನಮ್ಮದು. ಧರ್ಮ ದ್ವೇಷ ಹಣದ ಮಂಕುಬೂದಿಗೆ ಮರುಳಾಗಿ ಪ್ರಶ್ನಿಸದೆ ಬಿಟ್ಟರೆ, ಇದೇಗತಿ ಎಂದು ನಟ ಕಿಶೋರ (Actor Kishore) ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಚುನಾವಣಾ ಆಯೋಗದ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನರಸತ್ತ ಚುನಾವಣಾ ಆಯೋಗ (Election Commission) ಬೆಂಬಲಕ್ಕಿರುವಾಗ ಕೆಲಸ ಮಾಡುವುದಕ್ಕಿಂತ ಸುಳ್ಳು ಹೇಳುವುದು ಅವನಿಗೆ ಸಲೀಸಲ್ಲವೇ.. ಯಾರೇ ಅಧಿಕಾರಕ್ಕೆ ಬರಲಿ ದೇಶ ನಮ್ಮದು. ಧರ್ಮ ದ್ವೇಷ ಹಣದ ಮಂಕುಬೂದಿಗೆ ಮರುಳಾಗಿ ಪ್ರಶ್ನಿಸದೆ ಬಿಟ್ಟರೆ, ಇದೇಗತಿ. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಮೆಚ್ಚಬೇಕು.. ಇಲ್ಲಾ ಪೈಪೋಟಿ ಮಾಡಲೇಬೇಕೆಂದರೆ ಅವರಿಗಿಂತ ಒಳ್ಳೆಯದನ್ನೇನಾದರೂ ಮಾಡಬೇಕು.

MSP, ಸೇನಾ ಭರ್ತಿ, ಉದ್ಯೊಗ ಖಾತ್ರಿ, ಆರೋಗ್ಯ ಮತ್ತು ವಿದ್ಯಾಭದ್ರತೆ, ಬಡತನ ಮಹಿಳಾ ಭತ್ತೆ, ವೃದ್ಧಾಪ್ಯ ಸ್ಥಿರತೆ ಯಂತಹ ಅತ್ಯಾವಶ್ಯಕ ಗ್ಯಾರಂಟಿಗಳ ಜೊತೆ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ನ್ಯಾಯಾಂಗದ ಸಮಾನ ಅಧಿಕಾರದ ಭರವಸೆ , ಪ್ರಜಾಪ್ರಭುತ್ವವನ್ನು ಪ್ರಭಲಗೊಳಿಸುವ ಭರವಸೆಗಳು ಪ್ರಬುದ್ಧ ಪ್ರಗತಿಶೀಲ ಜನಪರ ಪ್ರಣಾಳಿಕೆಯೆಂದು ಎಲ್ಲರೂ ಶ್ಲಾಘನೀಯ ಎನ್ನುತ್ತಿರುವಾಗ.

ಈ ಕಾಮಾಲೆ ಕಣ್ಣಿನ ಸುಳ್ಳ ಭ್ರಷ್ಠ ಮನುಷ್ಯನಿಗೆ ಅದರಲ್ಲೂ , 48 ಪುಟದಲ್ಲಿ ನಮಗೆ ಎಲ್ಲೂ ಕಾಣದ ಹಿಂದೂ-ಮುಸ್ಲಿಂ (Hindu-Muslim) ಕಾಣಿಸಿದರೆ ಏನು ಮಾಡುವುದು ?? (ಇಂಟರ್ನೆಟ್ಟಿನಲ್ಲಿ ಎಲ್ಲರಿಗೂ ಪರಿಶೀಲಿಸಲು ಲಭ್ಯವಿದೆ) ಅದಲ್ಲದೇ ಇದು ಇವನದ್ದೇ ವಿಚಾರಧಾರೆಯ ಮುಸ್ಲಿಂ ಲೀಗ್ (Muslim League) ಎನ್ನುತ್ತಾನೆ ಎಂದು ಟೀಕಿಸಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ, ಪ್ರಬುದ್ಧ ಪ್ರಗತಿಶೀಲ ಜನಪರ ಕೆಲಸದಿಂದ ದೇಶ ಹಾಳಾಗುತ್ತದೆಂದು ಹೇಳುತ್ತಾನೆ. ಅವರು ಮೋದಾನಿಯ ದಾನವೀ ಶಕ್ತಿಯೆಂದರೆ ಇವನು ಅದನ್ನೇ ತಿರುಚಿ ಅವರು ಸ್ತ್ರೀ ಶಕ್ತಿಯ ವಿರೋಧಿಗಳು ಎನ್ನುತ್ತಾನೆ. ಮಾಡಿದ ಕೆಲಸದ ಮೇಲೆ ಓಟು ಕೇಳುವ ಯೋಗ್ಯತೆಯಿಲ್ಲದೇ ಕಡೇಪಕ್ಷ ಇನ್ನೊಬ್ಬರಿಂದ ನೋಡಿ ಕಲಿಯಲು ಕೂಡ ಬರದೇ, ಎಲ್ಲದಕ್ಕೂ ಬರೀ ದ್ವೇಷದ ಬಣ್ಣ ಹಚ್ಚುವ, ಚುನಾವಣಾ ನೀತಿ ಸಂಹಿತೆಯನ್ನು ಧೂಳೀಪಟ ಮಾಡುವ ಹೊಲಸು ಕೆಲಸವಷ್ಟೇ ಎಂದು ಕಿಡಿಕಾರಿದ್ದಾರೆ.

Exit mobile version