ಕಳ್ಳತನವಾದ ಕಾರನ್ನು ಕೇವಲ 2 ಗಂಟೆಗಳಲ್ಲಿ ಹುಡುಕಿಕೊಟ್ಟ ಆಪಲ್‌ ಏರ್‌ಟ್ಯಾಗ್!

South Corolina : ಉತ್ತರ ಕೆರೊಲಿನಾ ಮೂಲದ ದಂಪತಿಗಳು ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕಳ್ಳರು ರಾತ್ರಿ ವೇಳೆ ಕಳ್ಳತನ ಮಾಡಿದ್ದಾರೆ. ಕಳ್ಳತನವಾದ (Airtag found stolen car) ಕಾರನ್ನು ಕೇವಲ ೨ ಗಂಟೆಯಲ್ಲಿ ಆಪಲ್‌ ಏರ್‌ಟ್ಯಾಗ್‌(Apple AirTag) ಹಿಂದಿರುಗಿಸಿಕೊಟ್ಟಿದೆ! ಈ ಘಟನೆಯ ವಿವರ ಹೀಗಿದೆ.

ಆಪಲ್ ಏರ್‌ಟ್ಯಾಗ್ ಯುಎಸ್(US) ದಂಪತಿಗೆ ತಮ್ಮ ಕದ್ದ ಕಾರನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆಯಲು ಸಹಾಯ ಮಾಡಿದೆ ಎಂದು ಸುದ್ದಿ ವಾಹಿನಿ WRAL ವರದಿ ಮಾಡಿದೆ.

ಡೋರ್‌ಬೆಲ್ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯಗಳ ಪ್ರಕಾರ, ಅಕ್ಕಪಕ್ಕದವರ ಮನೆಗೆ ನುಗ್ಗುವ ಪ್ರಯತ್ನ ವಿಫಲವಾದ ನಂತರ (Airtag found stolen car) ಕಳ್ಳರು ಲೆಸ್ಲಿ ಮತ್ತು ಅಂತರ್ ಮುಹಮ್ಮದ್ ಎಂಬ ದಂಪತಿಗಳ ಮನೆಗೆ ನುಸುಳಿ,

ಮನೆಯ ಮುಂದೆ ನಿಲ್ಲಿಸಿದ್ದ ಟೊಯೊಟಾ ಕ್ಯಾಮ್ರಿಯನ್ನು(Toyota Camry) ಕಾರನ್ನು ಖದೀಯಲು ಸಂಚು ಮಾಡಿದ್ದಾರೆ.

ಉತ್ತರ ಕೆರೊಲಿನಾ ಮೂಲದ ದಂಪತಿಗಳು ನಿದ್ರಿಸುವ ಸಮಯದಲ್ಲಿ ಕಳ್ಳರು ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ಆದಾಗ್ಯೂ, ಕಾರಿಗೆ ಅಳವಡಿಸಲಾಗಿದ್ದ ಆಪಲ್‌ನ ಟ್ರ್ಯಾಕಿಂಗ್ ಸಾಧನ(Tracking Mxhine) ಏರ್‌ಟ್ಯಾಗ್‌ ಅವರ ಕಾರನ್ನು ಹುಡುಕಿಕೊಡುವಲ್ಲಿ ಯಶಸ್ವಿಯಾಗಿದೆ.

ಆಪಲ್‌ ಏರ್‌ಟ್ಯಾಗ್‌ ಮಾಡಿದ ಸಹಾಯಕ್ಕೆ ದಂಪತಿಗಳು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

https://youtu.be/rEpgWOTakmA

ಆಪಲ್‌ ಏರ್‌ಟ್ಯಾಗ್‌ ಕಾರಿನ ಸ್ಥಳವನ್ನು ಸುಲಭವಾಗಿ ಗುರುತಿಸುವ ತಂತ್ರಜ್ಞಾನವನ್ನು ಹೊಂದಿದೆ.

ತಮ್ಮ ಕಾರು ಕಳ್ಳತನವಾಗಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ, ದಂಪತಿಗಳು ಕ್ಯಾರಿ ಪೊಲೀಸರಿಗೆ ಕರೆ ಮಾಡಿದ ದೂರು ನೀಡಿದ್ದಾರೆ.

ಶೀಘ್ರವೇ ಪೊಲೀಸರು ಮಾಹಿತಿ ಕಲೆಹಾಕಿದಾಗ ದಂಪತಿಗಳ ಕಾರನ್ನು ಅವರ ಮನೆಯಿಂದ ಸುಮಾರು 12 ಮೈಲಿ ದೂರದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವುದನ್ನು ಕೇವಲ (Airtag found stolen car) ಎರಡೂವರೆ ಗಂಟೆಗಳ ಒಳಗೆ ಆಪಲ್‌ ಏರ್‌ಟ್ಯಾಗ್‌ ಮೂಲಕ ಟ್ರ್ಯಾಕ್ (Track)ಮಾಡಲಾಗಿದೆ.

ಡರ್ಹಾಮ್ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಕ್ಯಾರಿ ಪೊಲೀಸರು ಫೆಬ್ರವರಿ 4 ರಂದು ಬೆಳಿಗ್ಗೆ 11 ಗಂಟೆಗೆ ಮೂವರು ಅಪ್ರಾಪ್ತ ಶಂಕಿತರನ್ನು ಬಂಧಿಸಿದ್ದಾರೆ!

ನಾನು ಫೈಂಡ್ ಮೈ ಎಂಬ ಅಪ್ಲಿಕೇಶನ್ಗೆ ಹೋದೆ. ಅದು ನನ್ನ ಕಾರು ಎಲ್ಲಿದೆ ಎಂಬುದನ್ನು ನಿಖರವಾಗಿ ಗುರುತಿಸಲು,

ಜೂಮ್ ಇನ್ ಮಾಡಲು ಮತ್ತು ಪಾರ್ಕಿಂಗ್ ಸ್ಥಳವನ್ನು ಬಹುತೇಕ ನಿಖರವಾಗಿ ತಿಳಿಯಲು ತೋರಿಸಿಕೊಟ್ಟಿತು ಎಂದು ಅಂಟಾರ್ ವ್ರಾಲ್ ಸುದ್ದಿ ಪತ್ರಿಕೆ ಮಾಹಿತಿ ನೀಡಿದರು.

Exit mobile version