ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಟೋಲ್ ಬೂತ್ಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್

Ambulance

ಜುಲೈ 20 ರ ಬುಧವಾರದಂದು ಟೋಲ್ ಬೂತ್‌ಗೆ(Toll Booth) ಆಂಬುಲೆನ್ಸ್(Ambulance) ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಉಡುಪಿ(Udupi) ಜಿಲ್ಲೆಯ ಬೈಂದೂರಿನಲ್ಲಿ(Byndoor) ನಡೆದಿದೆ. ಉಡುಪಿ ಜಿಲ್ಲೆಯ ಟೋಲ್ ಬೂತ್ ರಸ್ತೆಯ ಮಧ್ಯೆ ಕುಳಿತಿದ್ದ ಹಸುವನ್ನು ದೂರದಿಂದಲೇ ನೋಡಿದ ಆಂಬ್ಯುಲೆನ್ಸ್ ಚಾಲಕ ಹಸುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದಾರೆ. ಮಳೆ ನೀರು ರಸ್ತೆಯ ಮೇಲೆ ನಿಂತಿದ್ದ ಕಾರಣ, ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಆಂಬ್ಯುಲೆನ್ಸ್ ಚಕ್ರಗಳು ಜಾರಿ ನಿಯಂತ್ರಣ ತಪ್ಪಿ, ನೇರವಾಗಿ ಟೋಲ್ ಬೂತ್ಗೆ ಡಿಕ್ಕಿ ಹೊಡೆದಿದೆ.

ಈ ಭೀಕರ ದೃಶ್ಯ ಟೋಲ್ ಬೂತ್ನ ಸಿಸಿಟಿವಿ ಕ್ಯಾಮೆರಾದಲ್ಲಿ(CCTV Camera) ಸೆರೆಯಾಗಿದೆ. ಮೊದಲನೇ ಸಿಸಿಟಿವಿ ದೃಶ್ಯದಲ್ಲಿ ಇದು ಕೇವಲ ಅಪಘಾತವಾಗಿ ಕಂಡರೂ, ಎರಡನೇ ಸಿಸಿಟಿವಿ ದೃಶ್ಯದಲ್ಲಿ ಇದು ಹಸುವನ್ನು ತಪ್ಪಿಸಲು ಹೋಗಿ ಆದ ಅಪಘಾತ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಆಂಬ್ಯಲೆನ್ಸ್ ಚಾಲಕ ಹೇಳಿಕೆ ನೀಡಿದ್ದು, ಹಸುವನ್ನು ತಪ್ಪಿಸಲು ಹೋಗಿ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು-ಶಿರೂರು ಟೋಲ್ ಗೇಟ್‌ಗೆ ವೇಗವಾಗಿ ಬಂದ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದು ಪಲ್ಟಿಯಾಗುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ಹರಿದಾಡಿದೆ. ದೃಶ್ಯದ ಪ್ರಕಾರ, ಅಪಘಾತವನ್ನು ತಪ್ಪಿಸಲು, ಒಬ್ಬ ಟೋಲ್ ಬೂತ್ ಉದ್ಯೋಗಿ ಹಸುವನ್ನು ದಾರಿಯಿಂದ ಸ್ಥಳಾಂತರಿಸಲು ಧಾವಿಸಿದರೆ, ಮತ್ತೊಬ್ಬ ಬ್ಯಾರಿಕೇಡ್ ತೆಗೆಯಲು ಪ್ರಯತ್ನಿಸುತ್ತಾನೆ. ಮತ್ತೊಂದೆಡೆ, ವೇಗದಿಂದ ಬರುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ನೇರವಾಗಿ ಬಂದು ಬೂತ್‌ಗೆ ಅಪ್ಪಳಿಸಿ ಪಲ್ಟಿಯಾಗಿದೆ.

Exit mobile version