ಕಲ್ಯಾಣ ಕರ್ನಾಟಕ ಗೆಲ್ಲಲು ರೆಡ್ಡಿಯೊಂದಿಗೆ ಸಂಧಾನಕ್ಕೆ ಶಾ ಚಿಂತನೆ..?!

Bangalore : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Assembly election) ಮರಳಿ ಅಧಿಕಾರ ಹಿಡಿಯುವ ತಂತ್ರಗಾರಿಕೆಯ ಭಾಗವಾಗಿ ಇದೀಗ ಬಿಜೆಪಿ ಗಾಲಿ (Janardhana Reddy) ಸಂಧಾನಕ್ಕೆ ಮುಂದಾಗಿದೆ ಎನ್ನಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ (Amitsha thought.) ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಸಿದ್ದತೆ ನಡೆಸಿದೆ.

ಅದರ ಭಾಗವಾಗಿ ಅಮಿತ್‌ಶಾ ಈಗಾಗಲೇ ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆಯನ್ನು ನಡೆಸಿದ್ದಾರೆ.

ಕಳೆದ ತಿಂಗಳು ಬಳ್ಳಾರಿಗೆ ಭೇಟಿ ನೀಡಿದ್ದ ಅಮಿತ್‌ ಶಾ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಲುವಾಗಿ ರಾಜ್ಯ ಬಿಜೆಪಿ (BJP) ನಾಯಕರೊಂದಿಗೆ ಸುದಿರ್ಘ ಚರ್ಚೆ ನಡೆಸಿದ್ದರು.

ಈ ವೇಳೆ ಜನಾರ್ಧನ ರೆಡ್ಡಿಯೊಂದಿಗೆ ಸಂಧಾನ ಮಾಡಿಕೊಂಡು, ಅವರನ್ನು ಪಕ್ಷಕ್ಕೆ ಮರಳಿ ಕರೆತರದಿದ್ದರೆ, ಪಕ್ಷಕ್ಕೆ ಸಾಕಷ್ಟು ನಷ್ಟ ಉಂಟಾಗಲಿದೆ.

ಈ ಭಾಗದ ಅನೇಕ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ನಮ್ಮ ಅಭ್ಯರ್ಥಿಗಳ ಸೋಲಿಗೆ(Amitsha thought.) ಕಾರಣವಾಗುವ ಸಾಧ್ಯತೆ

ಇದೆ ಎಂದು ಕಲ್ಯಾಣ ಕರ್ನಾಟಕದ ಕೆಲ ಬಿಜೆಪಿ ನಾಯಕರು ಅಮಿತ್‌ಶಾಗೆ (Amit Shah) ಹೇಳಿದ್ದು, “ರೆಡ್ಡಿ ವಿಷಯವನ್ನು ನಮಗೆ ಬಿಡಿ” ಎಂದು ಅಮಿತ್‌ಶಾ ಭರವಸೆ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ : https://vijayatimes.com/sumalta-ambarish-supports-bjp/

ಬಳ್ಳಾರಿ ಸಮಾವೇಶದ ನಂತರ ಕಲ್ಯಾಣ ಕರ್ನಾಟಕ ಭಾಗದ ಕುರಿತು ಬಿಜೆಪಿಯ ಚುನಾವಣಾ ತಂತ್ರಗಾರಿಕೆಯ ತಂಡದೊಂದಿಗೆ ಚರ್ಚೆ ನಡೆಸಿರುವ ಅಮಿತ್‌ಶಾ,

ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಬಿಜೆಪಿಗೆ ಸಮಸ್ಯೆಯಾಗಲಿದೆ ಎಂಬ ಅಂಶವನ್ನು ಮನಗಂಡಿದ್ದಾರೆ. ಹೀಗಾಗಿ ರೆಡ್ಡಿಯೊಂದಿಗೆ ಸಂಧಾನ ನಡೆಸಲು ಅಮಿತ್‌ಶಾ ಮುಂದಾಗಿದ್ದಾರೆ ಎನ್ನಲಾಗಿದೆ.

ದೆಹಲಿಯ (Delhi) ಪ್ರಭಾವಿ ಬಿಜೆಪಿ ನಾಯಕರೊಬ್ಬರು ನೇರವಾಗಿ ಜನಾರ್ಧನ ರೆಡ್ಡಿಯೊಂದಿಗೆ ಈ ಕುರಿತು ಮಾತುಕತೆಯನ್ನು ನಡೆಸಿದ್ದಾರೆ.

ಆದರೆ ಜನಾರ್ಧನ ರೆಡ್ಡಿ ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಬಿಜೆಪಿ ಮತ್ತು ಜನಾರ್ಧನ ರೆಡ್ಡಿ ನಡುವಿನ ಸಂಧಾನ ಸೂತ್ರಗಳ ಕುರಿತು ದೆಹಲಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಖುದ್ದು ಅಮಿತ್‌ಶಾ ಇದರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರೆಡ್ಡಿಯ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿಕೊಂಡು, ಜನಾರ್ಧನ ರೆಡ್ಡಿಗೆ ಗಂಗಾವತಿ ಕ್ಷೇತ್ರದ ಟಿಕೆಟ್‌ದೊಂದಿಗೆ,

ಕಲ್ಯಾಣ ಕರ್ನಾಟಕ ಭಾಗದ ಉಸ್ತುವಾರಿಯನ್ನೂ ನೀಡುವ ಬಗ್ಗೆ ಚರ್ಚೆ ನಡೆದಿದೆ.

ಆದರೆ ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ಜನಾರ್ಧನ ರೆಡ್ಡಿ ತೆಗೆದುಕೊಂಡಿಲ್ಲ. ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಸಂಧಾನ ನಡೆಯುವ ಸಾಧ್ಯತೆ ಹೆಚ್ಚಿದೆ.

Exit mobile version