ಚಿಕನ್ ಬಿರಿಯಾನಿ ಟ್ವಿಸ್ಟ್ : ಬಿರಿಯಾನಿ ತಿನ್ನೋ ಮುನ್ನ ಎಚ್ಚರ !

Kasaragodu : ಕಾಸರಗೋಡು ಮೂಲದ ಅಂಜುಶ್ರೀ(Anjushree) ಪಾರ್ವತಿ (19) ಚಿಕನ್ ಬಿರಿಯಾನಿ(Anjushree died after eating biryani) ತಿಂದು ಮೃತಪಟ್ಟ ಪ್ರಕರಣ ಇದೀಗ ಸ್ಫೋಟಕ ಸುದ್ದಿಯೊಂದು ಬೆಳಕಿಗೆ ಬಂದಿದೆ.

ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ಅಂಜುಶ್ರೀ ದೇಹದಲ್ಲಿ ವಿಷದ ಕುರುಹುಗಳು ಪತ್ತೆಯಾಗಿದೆ. ಆಕೆಯ ದೇಹದ ಲಿವರ್ ಮೇಲೆ ವಿಷದ ಪರಿಣಾಮ ಬೀರಿ ಸಾವಿಗೀಡಾಗಿದ್ದಾಳೆ ಎಂಬ ಸ್ಪೋಟಕ ಮಾಹಿತಿ ಇದೀಗಾ ಬಯಲಾಗಿದೆ.

ಕಾಸರಗೋಡಿನ ಚೆಮ್ನಾಡ್ ಗ್ರಾಮದ ಪಂಚಾಯಿತಿಯ ತಳಕಳಿ ಗ್ರಾಮದ ಅಂಜಶ್ರೀ ಕಳೆದ ಡಿಸೆಂಬರ್ 30ರಂದು ಮಧ್ಯಾಹ್ನದ ಊಟಕ್ಕಾಗಿ ಕಾಸರಗೋಡು ಪಟ್ಟಣದ

ಅಡ್ಕತ್ ಬೈಲ್ ನಲ್ಲಿರುವ ಅಲ್ ರೊಮ್ಯಾನ್ಶಿಯಾ ರೆಸ್ಟೋರೆಂಟ್(Romancia Restaurant) ನಲ್ಲಿ 65 ರೂ. ಗೆ ಒಂದು ಚಿಕನ್ ಬಿರಿಯಾನಿ ಮತ್ತು ಸಲಾಡ್ ಆರ್ಡರ್ ಮಾಡಿದ್ದರು .

ಫುಡ್ ಡೆಲಿವರಿ ಬಾಯ್(Anjushree died after eating biryani) ಮನೆಗೆ ತಲುಪಿಸಿದ ಆಹಾರವನ್ನು ಅಂಜುಶ್ರೀ ಮತ್ತು ಆಕೆಯ ತಾಯಿ ಅಂಬಿಕಾ,

ಸಹೋದರ ಶ್ರೀಕುಮಾರ್ ಮತ್ತು ಅವರ ಸಂಬಂಧಿಕರಾದ ಶ್ರೀ ನಂದನ್ ಮತ್ತು ಈತನ ಸಹೋದರಿ ಅನುಶ್ರೀ ಈ ಆಹಾರ ಸೇವಿಸಿದ್ದರು.

ಆಹಾರ ಸೇವಿಸಿದ ಅಂಜುಶ್ರೀ ಹಸ್ತವ್ಯಸ್ತಗೊಂಡಿದ್ದಳು ನಂತರ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ : https://vijayatimes.com/symptoms-of-kidney-problem/

ಪ್ರಾಥಮಿಕ ಚಿಕಿತ್ಸೆ ಬಳಿಕ ಆಕೆ ಮನೆಗೆ ಮರಳಿದ್ದಳು. ಆದರೆ ಶುಕ್ರವಾರ ಬೆಳಗ್ಗೆ ಮತ್ತೆ ಪ್ರಜ್ಞ ಹೀನಳಾಗಿ ಬಿದ್ದಿದ್ದ ಆಕೆಯನ್ನು ಮಂಗಳೂರಿನ(Mangaluru) ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹೇಳಲಾಗಿದೆ.

ಅದ್ಯಾಗೋ ಚಿಕಿತ್ಸೆ ಫಲಕಾರಿಯಾಗದೆ ಅಂಜುಶ್ರೀ ಕೊನೆ ಉಸಿರುಳಿದಿದ್ದಾಳೆ.

ಒಂದು ವರ್ಷದೊಳಗೆ ಎರಡನೇ ಪ್ರಕರಣ ಇದಾಗಿದೆ. ಕಳೆದ ಮೇ 1 ರಂದು ಹೋಟೆಲ್ ಒಂದರಲ್ಲಿ ವಿದ್ಯಾರ್ಥಿನಿ ಶವರ್ಮ ಸೇವಿಸಿದ ಪರಿಣಾಮವಾಗಿ,

ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು ಈ ಘಟನೆ ಕೇರಳದಾದ್ಯಂತ(Kerala) ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ : https://vijayatimes.com/chetan-statement/

ಅಂತಹದ್ದೆ ಇನ್ನೊಂದು ಘಟನೆ ಇದು. ಇದುವರೆಗೂ ಅಂಜಶ್ರೀ ಬಿರಿಯಾನಿ ಸೇವಿಸಿರುವ ಪರಿಣಾಮ ಫುಡ್ ಪಾಯಿಸನ್(Food poisoning) ಆಗಿ ಮೃತಪಟ್ಟಿದ್ದಾಳೆ ಎಂದೆನಂಬಲಾಗಿತ್ತು.

ಆದರೆ ಮಾಹಿತಿ ಕಲೆ ಹಾಕುತ್ತಿದ್ದಂತೆ ಹೊಸ ಟ್ವಿಸ್ಟ್ ಒಂದು ಹೊರಬಿದ್ದಿದೆ. ಅಂಜಶ್ರೀ ಸಾವಿಗೂ ಮುನ್ನ ಗೂಗಲ್ ನಲ್ಲಿ ಇಲಿ ಪಾಷಾಣಕ್ಕಾಗಿ ಹುಡುಕಾಟ ನಡೆಸಿದರುವುದು ಅದಲ್ಲದೆ ಮೊಬೈಲ್ ನಲ್ಲಿ ಡೆತ್ ನೋಟ್(Death note) ಸಹ ಪತ್ತೆಯಾಗಿದೆ ಎಂದು ತನಿಖ ವರದಿ ತಿಳಿಸಿದೆ.

ಕೆಮಿಕಲ್ ಪರೀಕ್ಷಾ ವರದಿ(Chemical test report) ಬಂದ ಬಳಿಕವೇ ಇದು ಆತ್ಮಹತ್ಯೆಯೋ

ಅಥವಾ ಫುಡ್ ಪಾಯಿಸನ್ ಆಗಿ ಮೃತಪಟ್ಟಿದ್ದಾಳೆಯೋ ಎಂದು ಅಧಿಕೃತವಾಗಿ ಖಚಿತಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಆಯ್ಕೆಯ ಕುಟುಂಬಸ್ಥರು ಸಾವಿನ ನಿಗೂಢತೆಯನ್ನು ಆದಷ್ಟು ಬೇಗ ಬೆಳಕಿಗೆ ತರಬೇಕೆಂದು ಒತ್ತಾಯ ಏರಿದ್ದಾರೆ.

ಒಂದು ವೇಳೆ ಇದು ಫುಡ್ ಪಾಯಿಸನ್ ಆಗಿದ್ದರೆ ಸಾವಿಗೆ ಬೇರೆ ಕಾರಣಗಳನ್ನು ಪತ್ತೆ ಮಾಡಬೇಕು ಎಂದು ಸಂಬಂಧಿಕರು ಒತ್ತಯಿಸುತ್ತಿದ್ದಾರೆ. .

Exit mobile version