Bengaluru: ಆಹಾರ ಸಚಿವ ಕೆಎಚ್ ಮುನಿಯಪ್ಪ (application cancel for rationcard) ಅವ್ರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಹೊಸ ಎಪಿಎಲ್, ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು
ಮುಗಿಬಿದ್ದವರಿಗೆ ನಿರಾಸೆ ಸುದ್ದಿ ಕೊಟ್ಟಿದ್ದಾರೆ. ಸದ್ಯಕ್ಕೆ ಎಪಿಎಲ್ (APL) ಹಾಗೂ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ಇದಕ್ಕೆ ಕಾರಣ ಏನು ಅಂತಾ ಮುಂದೆ ಹೇಳುತ್ತೇವೆ ಎಂದಿರುವ ಅವರು ಸೆಪ್ಟೆಂಬರ್ (September) ತಿಂಗಳಲ್ಲೂ 10 ಕೆಜಿ ಅಕ್ಕಿ ನೀಡುವುದು ಅನುಮಾನ ಎಂದಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು
ಸಚಿವ ಕೆಎಚ್ ಮುನಿಯಪ್ಪನವರು ಯಾಕೆ ಎಂಬುದಕ್ಕೆ ಸದ್ಯದಲ್ಲಿಯೇ ಕಾರಣವನ್ನು ಹೇಳುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ಹೊಸದಾಗಿ ಎಪಿಎಲ್, ಬಿಪಿಎಲ್ (BPL) ಪಡಿತರ ಚೀಟಿ ಪಡೆಯಲು
ಮುಂದಾಗಿದ್ದವರಿಗೆ (application cancel for rationcard) ನಿರಾಸೆಯಾಗಿದೆ.
ಕೇರಳಾದ ಶೌಚಾಲಯದ ತ್ಯಾಜ್ಯ ವಿಟ್ಲದಲ್ಲಿ ವಿಲೇವಾರಿ: ಸಾರ್ವಜನಿಕರ ದೂರಿಗೂ ಕಿವಿಕೊಡದ ಪೊಲೀಸ್ !
ಎಪಿಎಲ್, ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ನಾವೇ ಓಪನ್ ಮಾಡಿಲ್ಲ ಅದಕ್ಕೆ ಕಾರಣ ಏನು ಅಂತಾ ಸದ್ಯದಲ್ಲೇ ಹೇಳುತ್ತೇವೆ ಎಂದು ವಿಧಾನಸೌಧದಲ್ಲಿ (Vidhanasoudha) ಸುದ್ದಿಗೋಷ್ಠಿ
ನಡೆಸಿ ಮಾತನಾಡಿದರು. ಇನ್ನೂ ಸ್ವಲ್ಪ ದಿನ ಎಪಿಎಲ್, ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಹೇಳಿದರು. ಗ್ಯಾರಂಟಿ (Guarantee) ಯೋಜನೆಗಳ ಘೋಷಣೆ ಬಳಿಕ ಎಪಿಎಲ್ ಹಾಗೂ
ಬಿಪಿಎಲ್ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಹಲವರಿಗೆ ಇಲಾಖೆಯ ನಿರ್ಧಾರ ನಿರಾಸೆ ತಂದಿದೆ.

ಅಲ್ಲದೆ ಜಿಲ್ಲಾ ಮಟ್ಟದ ಆಹಾರ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದೇವೆ. ಕಳೆದ ತಿಂಗಳು ಡಿಬಿಟಿ (DBT) ವಿಷಯದಲ್ಲಿ ತಡವಾಯಿತು. ಈ ತಿಂಗಳ 25 ಅಥವಾ 26ರೊಳಗೆ ಫಲಾನುಭವಿಗಳ ಬ್ಯಾಂಕ್
(Bank) ಖಾತೆಗೆ ಹಣ ಸಂದಾಯವಾಗುತ್ತದೆ. ಹಾಗೂ ಜೋಳ, ರಾಗಿ, ಅಕ್ಕಿ ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಹೇಳಿದರು.
ತೆಲಂಗಾಣ (Telangana) ಮತ್ತು ಆಂಧ್ರ ಪ್ರದೇಶಗಳು ಈಗಾಗಲೇ ಅಕ್ಕಿ ಕೊಡಲು ಮುಂದೆ ಬಂದಿದ್ದು, ಅಕ್ಕಿಯ ದರದ ಬಗ್ಗೆ ಮಾತುಕತೆ ನಡೆಯುತ್ತಿದೆ. ವಾರ ಅಥವಾ 10 ದಿನಗಳ ಒಳಗೆ ಎಲ್ಲವೂ
ಅಂತಿಮ ಆಗಲಿದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇವೆ ಮತ್ತು ಮಾಹಿತಿ ಪಡೆಯುತ್ತಿದ್ದೇನೆ. ಮುಂದಿನ ತಿಂಗಳು ಪಡಿತರದಲ್ಲಿ ಹತ್ತು ಕೆಜಿ ಅಕ್ಕಿ ಸಿಗುತ್ತೆ ಎಂದು ಹೇಳುವುದಕ್ಕೆ ಆಗುವುದಿಲ್ಲ
ಎಂದು ಹೇಳಿದ ಕೆಎಚ್ ಮುನಿಯಪ್ಪ ಅವರು ಸೆಪ್ಟೆಂಬರ್‌ನಲ್ಲಿ 10 ಕೆಜಿ ಪಡಿತರ ಅಕ್ಕಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಭವ್ಯಶ್ರೀ ಆರ್.ಜೆ