Vitla: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ (Puttur) ವಿಟ್ಲದ ಜನತೆ ಒಂದು ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅದೇನಂದ್ರೆ ಕೇರಳಾದ (Disposal of Kerala waste) ಶೌಚಾಲಯಗಳ ದುರ್ವಾಸನೆಯುಕ್ತ
ತ್ಯಾಜ್ಯವನ್ನು ತಂದು ಕರ್ನಾಟಕದ ಗಡಿ ಭಾಗಗಳಲ್ಲಿ ಕದ್ದುಮುಚ್ಚಿ ಸುರಿಯುತ್ತಿದ್ದಾರೆ. ಈ ತ್ಯಾಜ್ಯ ಬಾವಿ, ಹಳ್ಳ, ಕೊಳ್ಳ ಸೇರಿ ಪರಿಸರ ಮಲಿನಗೊಳ್ಳುತ್ತಿದೆ.

ಅದ್ರಲ್ಲೂ ಇತ್ತೀಚೆಗೆ ತ್ಯಾಜ್ಯ ಸುರಿಯುವ ಘಟನೆಗಳು ಹೆಚ್ಚುತ್ತಲೇ ಇವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳಲಿಲ್ಲ.ಈ ಹಿನ್ನೆಲೆಯಲ್ಲಿ ನಿನ್ನೆ ವಿಟ್ಲ ಪರಿಸರದಲ್ಲಿ ತ್ಯಾಜ್ಯ ಭರಿತ
ಟ್ಯಾಂಕರೊಂದು (Tank) ಕೊಳಕು ಸುರಿಯಲೆಂದು ಸಿದ್ಧತೆ ನಡೆಸುತ್ತಿದ್ದಾಗ ಸಾರ್ವಜನಿಕರೇ ಇದನ್ನ ಗಮನಿಸಿ ಲಾರಿ ಚಾಲಕನನ್ನು ಉಕ್ಕುವ ಬಳಿ ತಡೆಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು
ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ (Disposal of Kerala waste) ಚಾಲಕನನ್ನು ಬಂಧಿಸಿದ್ದಾರೆ.
ರೇಷನ್ ಶಾಕ್ ! ಹೊಸ ಎಪಿಎಲ್, ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ : ಕೆಎಚ್ ಮುನಿಯಪ್ಪ
ಹದಿನೈದು ದಿನಗಳ ಹಿಂದಷ್ಟೇ ಇದೇ ರೀತಿ ಶೌಚಾಲಯದ ತ್ಯಾಜ್ಯವನ್ನು ತಂದು ಟ್ಯಾಂಕರ್ (Tanker) ಕೇಪು ಗ್ರಾಮದ ಚೆಲ್ಲಡ್ಕ ಪರಿಸರದಲ್ಲಿ ಸುರಿದು ದೊಡ್ಡ ರಾದ್ಧಾಂತವೇ ಸೃಷ್ಟಿಯಾಗಿತ್ತು.
ಪರಿಸರ ಮಾಲುನ್ಯ ಮಾಡಿದವರನ್ನು ಸಾರ್ವಜಿಕರು ಹಿಡಿದು ಪೋಲೀಸರ ವಶಕ್ಕೆ ಕೊಟ್ಟರೂ ಸಹ ಮತ್ತೆ ಅದೇ ರೀತಿಯಾಗಿ ಅಕ್ರಮ ಕೆಲಸ ಮುಂದುವರೆಯುತ್ತಿದೆ. ಈ ರೀತಿಯ ಕೊಳಕು ಕೃತ್ಯವನ್ನು
ಮಾಡಲು ಇವರಿಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬರುತ್ತಿದೆ? ಇವರು ಯಾರ ಬೆಂಬಲದಿಂದ ಈ ಕೆಲಸ ಮಾಡುತ್ತಿದ್ದಾರೆ ಅನ್ನೋದು ಸಾರ್ವಜನಿಕರ ಪ್ರಶ್ನೆ.

ಕೇರಳಾದ (Kerala) ಶೌಚಾಲಯದ ತ್ಯಾಜ್ಯವನ್ನು ತೋಟಗಳಲ್ಲಿ ತಂದು ಸುರಿಯುವುದರಿಂದ ಜನರು ಜೀವನ ಮಾಡುವುದೇ ಕಷ್ಟಕರವಾಗಿದೆ. ಈ ಕೆಟ್ಟ ವಾಸನೆಯಿಂದ ಪ್ರತಿ ನಿತ್ಯವೂ ಮೂಗು
ಮುಚ್ಚಿಕೊಂಡು ಅಡ್ಡಾಡುವುದು ಆಗಿದೆ. ಇದರ ಬಗ್ಗೆ ಅಧಿಕಾರಿಗಳು ಸರಕಾರದವರು ಪೊಲೀಸ್ ಸಿಬ್ಬಂದಿಗಳಿಗೆ ಎಲ್ಲಾ ತಿಳಿದಿದ್ದರು ಸಹ ಏನು ಮಾಡದೇ ಕಣ್ಣು ಮುಚ್ಚಿ ಕುಳಿತಿದ್ದಾರೆ.
ಈ ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.