ಬೆಂಗಳೂರು- ಮಂಗಳೂರು ಶಿರಾಡಿ ಘಾಟ್‌ ಮಾರ್ಗಕ್ಕೆ ಒಪ್ಪಿಗೆ ಸೂಚಿಸಿದ ಕೇಂದ್ರ ಸರ್ಕಾರ

ಬೆಂಗಳೂರು- ಮಂಗಳೂರು(approval for Shiradi Ghat) ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌.

ಹೊಂಡ ಗುಂಡಿಗಳ ನಡುವೆ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ ಪ್ರಯಾಣಿಕರಿಗೆ ಒಂದು ಸಂತಸದ ಸುದ್ದಿ ಸಿಕ್ಕಿದೆ.

ಅದೇನಂದ್ರೆ ಮಂಗಳೂರು-ಬೆಂಗಳೂರು ನಡುವಿನ ಶಿರಾಡಿ ಘಾಟ್(approval for Shiradi Ghat) ನ ಸುಮಾರು 23 ಕಿ.ಮೀ ಸುರಂಗ ಮಾರ್ಗದ ವಿಸ್ತೃತವಾದ ಯೋಜನೆಯ ವರದಿಗೆ ಇದೀಗ ಕೇಂದ್ರ ಸರ್ಕಾರ ಅಸ್ತು ಹೇಳಿದೆ.


ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾರನಹಳ್ಳಿ-ಅಡ್ಡ ಹೊಳೆ (ಶಿರಾಡಿ ಘಾಟ್)ಭಾಗದ ಚತುಶ್ಪಥ ರಸ್ತೆ ಕಾಮಗಾರಿಯ ಒಟ್ಟು ಮೊತ್ತ 1976 ಕೋಟಿ ರೂಪಾಯಿಗಳು

ಹಾಗೂ 15000 ಕೋಟಿ ಮೊತ್ತದ 23 ಕಿ.ಮೀ ಸುರಂಗ ಮಾರ್ಗದ ವಿಸ್ಕೃತ ಯೋಜನೆಯ ವರದಿಗೆ ಒಪ್ಪಿಗೆ ಸೂಚಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್(Nalin kumar kateel) ಟ್ವೀಟ್ನಲ್ಲಿ ತಿಳಿಸಿದ್ದಾರೆ.

ಹಾಗೆಯೇ ರಾಷ್ಟ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿಯವರು(Nithin gadkari)

ಬೆಂಗಳೂರು- ಮಂಗಳೂರು ಹೆದ್ದಾರಿ ಭಾಗವಾದ ಸಕಲೇಶಪುರದಿಂದ ಮಾರನಹಳ್ಳಿ ವರೆಗೆಗಿನ ರಸ್ತೆ ಭಾಗದ ದುರಸ್ತಿಯ ಕಾಮಗಾರಿಗೂ ಆದೇಶಿಸಿದ್ದಾರೆ.

ಪ್ರಯಾಣಿಸಲು ಸಾಧ್ಯವೇ ಇಲ್ಲದಷ್ಟು ಹಾಳಾಗಿ. ಕಳೆದ 15 ವರ್ಷಗಳಿಂದ ಜನರ ಕಣ್ಣೀರಿಗೆ ಕಾರಣವಾಗಿದ್ದ ಹಾಗೂ ಅದೆಷ್ಟೋ ಜನರ ಪ್ರಾಣವನ್ನು ಬಲಿ ಪಡೆದಿದ್ದ ಈ ಶಿರಾಡಿ ಘಾಟ್‌ನ ಕೆಟ್ಟ ರಸ್ತೆಗೆ ಸದ್ಯದಲ್ಲೇ ಮುಕ್ತಿ ಸಿಗಲಿದೆ.

ಅಷ್ಟೇ ಅಲ್ಲ ಬೆಂಗಳೂರು-ಮಂಗಳೂರು ಸಂಚಾರದ ಅವಧಿ ಕಡಿಮೆಯಾಗಿ ಪ್ರಯಾಣ ಸುಗಮವಾಗಲಿದೆ .

ಇದಕ್ಕೆ ಅನುವು ಮಾಡಿಕೊಡುತ್ತಿರುವ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರು(Narendra modi) ಹಾಗೂ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಟ್ಕರಿಯವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ.

ಇದು ಬಿಜೆಪಿ(BJP) ಸರ್ಕಾರದ ಮಹತ್ವದ ಕೊಡುಗೆ ಎಂದು ನಳಿನ್ ಕುಮಾರ್ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.

https://vijayatimes.com/nalinkumar-love-jihad-statement/


ಶಿರಾಡಿ ಘಾಟ್‌ ರಸ್ತೆಯ ಅವ್ಯವಸ್ಥೆಯ ಬಗ್ಗೆ ವಿಜಯಟೈಮ್ಸ್‌ನ(Vijayatimes) ಕವರ್‌ಸ್ಟೋರಿ (Cover story)ತಂಡ ನಿರಂತರವಾಗಿ ಸುದ್ದಿ ಬಿತ್ತರಿಸಿ, ಜನರ ಸಂಕಷ್ಟವನ್ನು ಆಳುವವರರಿಗೆ ಮುಟ್ಟಿಸಿತ್ತು.

ಕಳೆದ ತಿಂಗಳೂ ಕೂಡ ವಿಜಯಟೈಮ್ಸ್‌ ಮತ್ತೆ ಈ ರಸ್ತೆಯ ಅವ್ಯವಸ್ಥೆಯ ಕುರಿತು ‘ಚಿನ್ನದ ರಸ್ತೆ’ ಅನ್ನೋ ಶಿರ್ಷಿಕೆಯಡಿ ವಿಸ್ತೃತ ವರದಿ ಮಾಡಿ ನಿತಿನ್‌ ಗಡ್ಕರಿ,

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj bommai) ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾಯಕರಿಗೆ ಟ್ಯಾಗ್ ಮಾಡಿ ಸಮಸ್ಯೆಯ ಕುರಿತು ವಿವರಿಸಿತ್ತು.

Exit mobile version