ಕೆಮ್ಮು ನೆಗಡಿಗೆ ಇಂಗಿನಿಂದ ಶೀಘ್ರ ಪರಿಹಾರ

Asafoetida

ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ  ಕೆಮ್ಮು, ಜ್ವರ ಹಾಗೂ ನೆಗಡಿ ಬಾದೆ ಹೆಚ್ಚಾಗಿದೆ. ಆಸ್ಪತ್ರಗೆ ಹೋಗಲು ಕೊರೊನಾ ಮತ್ತು ಓಮಿಕ್ರಾನ್‌ ಭಯ, ಹಾಗದ್ರೆ ಆಸ್ಪತ್ರೆಗೆ ಹೋಗದೆ  ಶೀಘ್ರವಾಗಿ ಕೆಮ್ಮು ಶೀತಕ್ಕೆ ಮುಕ್ತಿ ಸಿಗಬೇಕಾ ? ಹಾಗಾದ್ರೆ ಈ ಟಿಪ್ಸ್‌ ಅನುಸರಿಸಿ

ವಾತವರಣದಲ್ಲಿ ಏರು ಪೇರಿನಿಂದಾಗಿ ಕೆಮ್ಮು, ನೆಗಡಿ, ತಲೆನೋವಂತ ಕಾಯಿಲೆಗಳು ನಮಗೆ ಕಾಣಿಸಿಕೊಳ್ಳುತ್ತವೆ ಈ ಎಲ್ಲಾ ಸಣ್ಣ ಪುಟ್ಟ ಖಾಯಿಲೆಗಳಿಗೆ  ಮನೆಯಲ್ಲಿನ ಇಂಗು ಬಹಳ ಉಪಯೋಗಕಾರಿಯಾದ ಔಷಧಿಯಾಗಿದೆ

ನೆಗಡಿ ಮತ್ತು ಕೆಮ್ಮು ನಿವಾರಣೆ ಮಾಡುವುದಕ್ಕೆ ಇಂಗು ಬಹಳ ಉಪಯೋಗಕಾರಿಯಾಗಿದೆ.

ಒಂದು ಸಣ್ಣ ಪಾತ್ರೆಯಲ್ಲಿ ನೀರನ್ನು ಕುದಿಯಲಿಟ್ಟು ಅದಕ್ಕೆ 2-3 ಹನಿಯಷ್ಟು ಇಂಗನ್ನು ಹಾಕಿ ಅದರಿಂದ ಬರುವ ಆವಿಯನ್ನು ತೆಗೆದುಕೊಂಡರೆ ಬಹು ಬೇಗನೆ ನೆಗಡಿ ಮತ್ತು ಕೆಮ್ಮು ಕಡಿಮೆಯಾಗುತ್ತದೆ.

ಎದೆಯಲ್ಲಿ ಕಫ ಕಟ್ಟಿದ್ದರೆ ಇಂಗಿನ ಎನ್ನೆಯನ್ನು ಎದೆಭಾಗ ಮತ್ತು ಕುತ್ತಿಗೆಗೆ ಹಚ್ಚಿ ಮಸಾಜ್‌ ಮಾಡಿದರೆ ದೇಹದ ಉಷ್ಣತೆ ಪ್ರಮಾಣ ಜಾಸ್ತಿಯಾಗಿ ಎದೆಯಲ್ಲಿನ ಕಫ ಕರಗಿ ಹೋಗುತ್ತದೆ.  

ಒಂದು ಚಮಚ ಇಂಗು ಹಾಗೂ ಒಂದು ಚಮಚ ಒಣ ಶುಂಠಿಯ ಪುಡಿಯನ್ನುಜೇನುತುಪ್ಪದಲ್ಲಿ ಬೆರೆಸಿ ಗಟ್ಟಿಯಾದ ಉಂಡೆ ಮಾಡಿ ಅದನ್ನು ಬಾಯಲ್ಲಿಟ್ಟುಕೊಂಡು ಅದರ ರಸ ಕುಡಿಯುವುದರಿಂದ ಇದು ಶ್ವಾಸಕೋಶಕ್ಕೆ ತಲುಪಿ ಗಂಟಲು ಮತ್ತು ಎದೆ ಭಾಗದಲ್ಲಿರುವ ಕಫವನ್ನು ಕರಗಿಸುವಲ್ಲಿ ಬಹಳ ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ . ಈ ರೀತಿ ಮಾಡುವುದರಿಂದ ಕೆಮ್ಮು ಮತ್ತು ಕಫದ ಸಮಸ್ಯೆಯಿಂದ ಬಹುಬೇಗನೆ ಮುಕ್ತಿ ಪಡೆಯಬಹುದಾಗಿದೆ.           

ಅಜೀರ್ಣ ನಿವಾರಣೆಗೂ ಇಂಗು ಬಹಳ ಉಪಯೋಗಕಾರಿ :

ನಮ್ಮ ಪೂರ್ವಜರು ಪುರಾತನ ಕಾಲದಿಂದಲೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಇಂಗನ್ನು ಉಪಯೋಗಿಸುತ್ತಿದ್ದು ಅಜೀರ್ಣವಾದರೆ ಇಂಗನ್ನು ಬಿಸಿನೀರಿನಲ್ಲಿ ಹಾಕಿ ಸೇವಿಸುವುದರಿಂದ ಅಜೀರ್ಣವನ್ನು ತಡೆಗಟ್ಟಬಹುದಾಗಿದೆ. ಇಂಗಿನಲ್ಲಿ ಉರಿಯೂತ ಶಮನಕಾರಿ ಮತ್ತು ಆಂಟಿಆಕ್ಸಿಡೆಂಟ್ ಗುಣಗಳಿದ್ದು, ಹೊಟ್ಟೆಗೆ ಶಮನ ನೀಡುವುದು, ಗ್ಯಾಸ್ ನಿವಾರಿಸುವುದು, ಕರುಳಿನ ಹುಳದ ಸಮಸ್ಯೆ ನಿವಾರಿಸುವುದು ಮತ್ತು ಐಬಿಎಸ್ ಸಮಸ್ಯೆಯನ್ನು ತಗ್ಗಿಸಿ ಹೊಟ್ಟೆಯನ್ನು ಸ್ವಚ್ಚವಾಗಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ :
ಇಂಗು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲೂ ಕೂಡ ಸಹಕಾರಿಯಾಗಿದ್ದು, ಇಂಗಿನಲ್ಲಿರುವ ಕೊಮೆರಿನ್ ಎಂಬ ಅಂಶವು ರಕ್ತದೊತ್ತಡವನ್ನು (blood pressure) ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ ಇದರಲ್ಲಿರುವ ಔಷಧೀಯ ಗುಣಗಳಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಿ ದೇಹವನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. 

ಹಲ್ಲು ನೋವು ನಿವಾರಣೆಗೆ :

ಇಂಗಿನಲ್ಲಿ ಆಂಟಿ ಆಕ್ಸಿಡೆಂಟ್ಸ್‌ ಅಂಶಗಳಿದ್ದು, ಇದು ನೋವು ಮತ್ತು ಸೋಂಕಿಗೆ ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಲ್ಲು ನೋವು ಇರುವ ಜಾಗದಲ್ಲಿ ಅಥವಾ ವಸಡಿನಲ್ಲಿ ರಕ್ತ ಬರುತ್ತಿದ್ದರೆ ಆ ಭಾಗಕ್ಕೆ ಇಂಗನ್ನು ಇಟ್ಟರೆ ಬಹುಬೇಗನೆ ನೋವು ಮತ್ತು ಸೋಂಕು ನಿವಾರಣೆಯಾಗುತ್ತದೆ.

Exit mobile version