ವಿಷದ ಬಾಟಲಿಯನ್ನು 6ನೇ ಗ್ಯಾರಂಟಿಯಾಗಿ ನೀಡಲು ಆಟೋ, ಟೆಂಪೋ ಚಾಲಕರ ಆಗ್ರಹ

ಉತ್ತರ ಕನ್ನಡ : ರಾಜ್ಯ ಸರ್ಕಾರವು ಶಕ್ತಿ ಯೋಜನೆ (Auto Tempo drivers problems) ಜಾರಿಗೆ ತಂದ ನಂತರ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಬೇಡಿಕೆ ಕಡಿಮೆಯಾಗಿದೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳು ಇದಕ್ಕೆ ಕಾರಣವಾಗಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪಾಸ್‌ಗಳನ್ನು ಒದಗಿಸಲಾಗಿದೆ. ಪ್ರಯಾಣಿಕರನ್ನು

ನಂಬಿ ಜೀವನ ಸಾಗಿಸುತ್ತಿದ್ದ ಆಟೋ ರಿಕ್ಷಾ ಚಾಲಕರು ಈಗ ಸಂಕಷ್ಟಕ್ಕೆ (Auto Tempo drivers problems) ಸಿಲುಕಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಿಸುಮಾರು 8,500 ಆಟೋ-ರಿಕ್ಷಾಗಳಿವೆ, ಮತ್ತು ಹಿಂದೆ, ಚಾಲಕರ ದೈನಂದಿನ ಆದಾಯದ ಮೂಲವು ನಗರ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ

ಪ್ರಯಾಣಿಸುವ ಜನರಿಂದ ಬರುತ್ತಿತ್ತು. ಆದರೆ ಈಗ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಆನ್‌ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ

ಇದರಿಂದಾಗಿ ನಗರ ಪ್ರದೇಶದ ಮಹಿಳೆಯರು ನಗರ ಸಾರಿಗೆ ಅವಲಂಬಿಸಿದರೆ, ಪ್ರವಾಸ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಬರುವವರು ಸಹ ಸರ್ಕಾರಿ ಬಸ್ (Government Bus) ನತ್ತ ಮುಖ ಮಾಡಿದ್ದಾರೆ.

ಇದರಿಂದಾಗಿ ಆಟೋ-ರಿಕ್ಷಾಗಳಿಗೆ ಪ್ರಯಾಣಿಕರು ಗಣನೀಯವಾಗಿ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ (Private Bus) ಓಡಾಟ ಕಡಿಮೆಯಾಗಿದೆ.

ಗ್ಯಾರಂಟಿ ಯೋಜನೆ ಜಾರಿಯಾಗಿ ವಾರಗಳು ಕಳೆದಿದೆ ಆದರೆ ಈ ಹಿಂದೆ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಗೆ ಆಟೋಗಳು ಮತ್ತು ಟೆಂಪೋಗಳು ಅವಿಭಾಜ್ಯವಾಗಿತ್ತು ಮತ್ತು ಈ ಹಿಂದೆ ಈ ವೃತ್ತಿಯನ್ನು

ನಂಬಿದ್ದ ಕೆಲವು ಆಟೋ ಚಾಲಕರು ಇದೀಗ ತಮ್ಮ ವೃತ್ತಿಯನ್ನೇ ಬದಲಿಸುವ ಸ್ಥಿತಿಗೆ ಬಂದಿದ್ದು ಪ್ರಯಾಣಿಕರ ಕೊರತೆಯಿಂದ ಜಿಲ್ಲೆಯ ಬಹುತೇಕ ಆಟೋ ನಿಲ್ದಾಣದಲ್ಲಿ ದಿನದ ಕೂಲಿ

ಸಹ ದುಡಿಯದ ಸ್ಥಿತಿಗೆ ಆಟೋಚಾಲರು ಬಂದು ನಿಂತಿದ್ದಾರೆ.

ಇದನ್ನೂ ಓದಿ : ಕನಿಷ್ಠ 7 ಭಾರತೀಯ ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ : ವಿಶ್ವ ಆರೋಗ್ಯ ಸಂಸ್ಥೆ

ಮಹಿಳೆಯರಿಗಾಗಿ ಸರ್ಕಾರ (Government)ಫ್ರೀ ಬಸ್ ಪ್ರಯಾಣವನ್ನು ಬಿಟ್ಟಿದೆ. ಆದ್ರೆ ಆಟೋ ಚಾಲಕ ಜೀವನದ ಮೇಲೆ ಇದರ ಜೊತೆ ಬರೆ ಎಳೆದಿದ್ದು ಆಟೋ ಚಾಲಕರು

ಇದರಿಂದ ಸಂಕಷ್ಟ ಅನುಭವಿಸುವಂತಾಗಿದೆ. ರಾಜ್ಯದ ಆಟೋ ಚಾಲಕರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಹೀಗಾಗಿ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು..

10,000 ರೂ ಪರಿಹಾರ ಹಣವಾಗಿ ಆಟೋ ಚಾಲಕರಿಗೆ ಪ್ರತಿ ತಿಂಗಳು ನೀಡಬೇಕು. ಇಲ್ಲವಾದರೇ ಆಟೋ ಚಾಲಕರಿಗೆ ವಿಷದ(Poison) ಬಾಟಲಿ ಆರನೇ ಗ್ಯಾರಂಟಿಯಾಗಿ ನೀಡಬೇಕು ಎಂದು

ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಒಂದು ವೇಳೆ ನಮ್ಮ ಬದುಕಿನ ಬಗ್ಗೆ ಸರ್ಕಾರ ಕಿಂಚಿತ್ತು ಯೋಚನೆ ಮಾಡದೆ ಇದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಆಟೋ ಚಾಲಕರ ಸಂಘ ನೀಡಿದೆ

ರಶ್ಮಿತಾ ಅನೀಶ್

Exit mobile version