ಕನ್ನಡದಲ್ಲಿ ಬರೆದ ಚೆಕ್‌ ಅಮಾನ್ಯ ಮಾಡಿದ ಬ್ಯಾಂಕ್‌ಗೆ 85,177 ರೂ. ದಂಡ!

bANK

Dharwad : ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದ್ದು, ಗ್ರಾಹಕರೊಬ್ಬರು ಕನ್ನಡದಲ್ಲಿ ಚೆಕ್‌(Check) ಬರೆದು ಬ್ಯಾಂಕ್‌ಗೆ(Bank) ಸಲ್ಲಿಸಿದ್ದರು.

Sample of Bank Cheque

ಈ ಚೆಕ್‌ ಅನ್ನು ಅಮಾನ್ಯ ಮಾಡಿ, ಗ್ರಾಹಕರಿಗೆ ಅನಗತ್ಯ ತೊಂದರೆ ನೀಡಿದ ಆರೋಪದ ಮೇಲೆ ಧಾರವಾಡ ಜಿಲ್ಲೆಯ ಹಳಿಯಾಳ ತಾಲೂಕಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India) ಶಾಖೆಗೆ 85,177 ರೂಪಾಯಿ ದಂಡ ವಿಧಿಸಲಾಗಿದೆ.

ಇದನ್ನೂ ಓದಿ : https://vijayatimes.com/siddaramaiah-slams-bjp-sunil-kumar-2/

ಹಳಿಯಾಳದ ನಿವಾಸಿಯಾದ ವಾದಿರಾಜಾಚಾರ್ಯ ಇನಾಮದಾರ ಎಂಬುವರು ತಮ್ಮ ಖಾತೆಯಲ್ಲಿನ ಹಣ ಪಡೆಯಲು ಕನ್ನಡದಲ್ಲಿ ಚೆಕ್‌ ಬರೆದು ಬ್ಯಾಂಕ್‌ಗೆ ನೀಡಿದ್ದರು. ಆದರೆ ಚೆಕ್‌ ಅನ್ನು ಇಂಗ್ಲಿಷ್‌ನಲ್ಲೇ ಬರೆಯಬೇಕೆಂದು ವಾದಿಸಿದ ಬ್ಯಾಂಕ್‌, ಕನ್ನಡದಲ್ಲಿ ಬರೆದಿದ್ದ ಚೆಕ್‌ ಅನ್ನು ಅಮಾನ್ಯ ಮಾಡಿತ್ತು.

ಬ್ಯಾಂಕ್‌ನ ಈ ನಡೆಯ ವಿರುದ್ದ ಧಾಡವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ವಾದಿರಾಜಾಚಾರ್ಯ ಇನಾಮದಾರ ಅವರು ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಕನ್ನಡದಲ್ಲಿ ಬರೆದ ಚೆಕ್‌ ಅನ್ನು ಅಮಾನ್ಯ ಮಾಡಿರುವುದನ್ನು, ಸೇವಾ ನ್ಯೂನ್ಯತೆ ಎಂದು ಪರಿಗಣಿಸಿ, ಹಳಿಯಾಳ ಎಸ್ಬಿಐ ಬ್ಯಾಂಕ್ ಶಾಖೆಯು ದೂರುದಾರರಿಗೆ ಪರಿಹಾರ ಮೊತ್ತವಾಗಿ ಒಟ್ಟು 85,177 ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ.

ಇದನ್ನೂ ಓದಿ : https://vijayatimes.com/tender-coconut-health-benefits/

ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕುಗಳು ತ್ರಿಭಾಷಾ ಸೂತ್ರವನ್ನು ಅನುಸರಿಸಬೇಕು. ತ್ರಿಭಾಷಾ ಸೂತ್ರದ ಬಳಕೆ ನಿಯಮಾನುಸಾರ ಸ್ಥಳೀಯ ಭಾಷಾ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ಸ್ಥಳೀಯ ಭಾಷೆಗಳಿಗೂ ಮಾನ್ಯತೆ ನೀಡಬೇಕು. ಆದರೆ ಹಳಿಯಾಳದ ಎಸ್ಬಿಐ ಬ್ಯಾಂಕ್ ಈ ಪ್ರಕರಣದಲ್ಲಿ ತ್ರಿಭಾಷಾ ಸೂತ್ರವನ್ನು ಉಲ್ಲಂಘನೆ ಮಾಡಿದೆ.

ಅದನ್ನು ಆಯೋಗವು ಸೇವಾ ನ್ಯೂನ್ಯತೆ ಎಂದು ಪರಿಗಣಿಸಿ ದಂಡ ವಿಧಿಸಿದೆ. ಇನ್ನು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಈ ಮಹತ್ವದ ತೀರ್ಪು ನೀಡಿದ್ದಾರೆ.
Exit mobile version