ಬೇಕೂಂತಲೇ ಕಾರಿಗೆ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ದಂಪತಿಯನ್ನು ಬೆನ್ನಟ್ಟಿ ಬೆದರಿಸಿದ: ದರೋಡೆಗೆ ಯತ್ನಿಸಿದ ದುಷ್ಕರ್ಮಿ

Bengaluru : ಬೆಂಗಳೂರಿನ ಸರ್ಜಾಪುರ(Sarjapur) ರಸ್ತೆಯಲ್ಲಿ ಓಡಾಡುವರೇ ಎಚ್ಚರ ! ನಿಮ್ಮನ್ನು ದರೋಡೆ ಮಾಡೋಕೆ ದುಷ್ಟರು ಹೊಂಚು ಹಾಕುತ್ತಿದ್ದಾರೆ. ಇದಕ್ಕೆ ನಿನ್ನೆ ನಡೆದ ಘಟನೆಯೊಂದು(Be careful in Sarjapur) ಇಲ್ಲಿ ನಡೆವ ದುಷ್ಕೃತ್ಯಗಳಿಗೆ ಸಾಕ್ಷಿಯಾಗಿ ನಿಂತಿದೆ.

ಮುಂಜಾನೆ 3 ಸರ್ಜಾಪುರ ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಕಾರಿಗೆ ಬೇಕಂತಲೇ ಡಿಕ್ಕಿ ಹೊಡೆದಿದ್ದಲ್ಲದೇ ಚಾಲಕನನ್ನು ಬೆನ್ನಟ್ಟಿ ಬೆದರಿಸಿರುವ ಘಟನೆ ನಡೆದಿದೆ.

ಈ ಘಟನೆಯ ದೃಶ್ಯ ಕಾರಿನೊಳಗಿನ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋದಲ್ಲಿ ಮುಂಜಾನೆ 3 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದ ದಂಪತಿಯನ್ನು ಬೈಕ್ ಸವಾರನೊಬ್ಬ ಹಿಂಬಾಲಿಸಿ ಬೆದರಿಸಿರೋ ಘಟನೆ ಬೆಳಕಿಗೆ ಬಂದಿದೆ!

ಬೈಕ್ ಸವಾರನೊಬ್ಬ ಕಾರಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಕಾರಿನಲ್ಲಿದ್ದ ದಂಪತಿಗಳನ್ನು ದಿಟ್ಟಿಸುತ್ತ, ಅವರ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ!

ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬೆಂಗಳೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಟಿಜನ್ಸ್ ಮೂವ್‌ಮೆಂಟ್ ಎಂಬ ಸಾಮಾಜಿಕ ಜಾಲತಾಣದ(Social Media) ಪುಟ ಈ ವೀಡಿಯೊವನ್ನು ಹಂಚಿಕೊಂಡಿದೆ ಮತ್ತು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸೋಫಾಸ್ (Be careful in Sarjapur) ಮತ್ತು ಮೋರ್ ಬಳಿಯ ಸರ್ಜಾಪುರ ರಸ್ತೆಯಲ್ಲಿ ಭಯಾನಕ ಘಟನೆ ವರದಿಯಾಗಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿರುವ ತಮ್ಮ ಸೊಸೈಟಿ ತನಕ 5 ಕಿ.ಮೀ ದೂರ ಕಾರನ್ನು ಹಿಂಬಾಲಿಸಿದ್ದಾರೆ.

ರಾತ್ರಿಯಲ್ಲಿ ನಿಮ್ಮ ಕಾರನ್ನು ತೆರೆಯಬೇಡಿ. ಡ್ಯಾಶ್ ಕ್ಯಾಮ್(Dash cam) ಬಳಸಿ ಎಂದು ಎಚ್ಚರಿಕೆ ನೀಡುವ ಮುಖೇನ ಘಟನೆಯ ಬಗ್ಗೆ ವಿವರಿಸಿ ತಿಳಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್‌ ಬಾಟಲಿಗಳು: ಕಾಣೆಯಾಯ್ತು ಸ್ವಚ್ಛ ಭಾರತ

ವೈರಲ್(Viral) ಆಗಿರುವ ವಿಡಿಯೋದಲ್ಲಿ ಬೈಕ್ ಸವಾರ ಎದುರಿನಿಂದ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ನಂತರ ಕಾರಿನಿಂದ ಇಳಿಯುವಂತೆ ದಂಪತಿಯನ್ನು ಬೆದರಿಸಿದರೂ ಅವರು ಹೊರಗೆ ಹೋಗಲು ನಿರಾಕರಿಸಿದ್ದಾರೆ.

ಆದರೆ, ಕಾರನ್ನು ಹಿಂದಕ್ಕೆ ಸರಿಸಿದ ಬೈಕ್ ಸವಾರ ಅವರನ್ನು ಹಿಂಬಾಲಿಸಿ ಕಾರಿನ ಕಿಟಕಿಗೆ ಡಿಕ್ಕಿ ಹೊಡೆದಿದ್ದಾನೆ!

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಇಂತಹ ಭಯಾನಕ ಘಟನೆಗಳು ಸಾಮಾನ್ಯವಾಗಿದೆ ಎಂದು ಹಲವರು ಟ್ವಿಟರ್‌ನಲ್ಲಿ(Twitter) ದೂರಿದ್ದಾರೆ.

ಮಿಥ್ಲೇಶ್ ಕುಮಾರ್ ಎಂಬ ಟ್ವಿಟರ್‌ ಬಳಕೆದಾರರು ಈ ರೀತಿ ಬರೆದುಕೊಂಡಿದ್ದು, ಸರ್ಜಾಪುರ ರಸ್ತೆಯಲ್ಲಿ ಇದು ಸಾಮಾನ್ಯ ಅಭ್ಯಾಸವಾಗಿದೆ. ಇದಕ್ಕೆ ಮುಖ್ಯ ಕಾರಣ: ಬೀದಿದೀಪಗಳು ಅಷ್ಟೇನೂ ಉರಿಯುತ್ತಿಲ್ಲ, ಮತ್ತು ಕೆಲವೇ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ಬಿಜೆಪಿಯ ಅರವಿಂದ್‌ ಸರ್, ದಯವಿಟ್ಟು ಬೀದಿದೀಪಗಳಿಗಾಗಿ ಬಿಬಿಎಂಪಿಯೊಂದಿಗೆ(BBMP) ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ಈ ನಡುವೆ ಬೆಂಗಳೂರು ಪೊಲೀಸರು ಕಾರ್ಯಾಚರಣೆಗಿಳಿದು ತನಿಖೆ ಆರಂಭಿಸಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕಾಗಿ ಟ್ವೀಟ್ ಅನ್ನು ಬೆಳ್ಳಂದೂರು ಬಿಸಿಪಿಗೆ(BCP) ರವಾನಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

Exit mobile version