• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಹೂವುಗಳನ್ನು ಬಳಸಿ ಹೂವಿನಂತಹ ಕೋಮಲ ತ್ವಚೆ ಪಡೆಯಲು ಈ ಕ್ರಮ ಅನುಸರಿಸಿ

Mohan Shetty by Mohan Shetty
in ಆರೋಗ್ಯ, ಲೈಫ್ ಸ್ಟೈಲ್
ಹೂವುಗಳನ್ನು ಬಳಸಿ ಹೂವಿನಂತಹ ಕೋಮಲ ತ್ವಚೆ ಪಡೆಯಲು ಈ ಕ್ರಮ ಅನುಸರಿಸಿ
0
SHARES
1
VIEWS
Share on FacebookShare on Twitter

ಪ್ರತಿಯೊಬ್ಬರಿಗೂ ಸುಂದರವಾಗಿರುವ ಆಸೆ ಇದ್ದೇ ಇರುತ್ತದೆ. ಹಾಗಾಗಿ, ತಮ್ಮ ಸೌಂದರ್ಯವನ್ನು (Beauty Tips Of Flowers) ಹೆಚ್ಚಿಸಿಕೊಳ್ಳಲು ಸಾಕಷ್ಟು ಹಣವನ್ನು ವ್ಯರ್ಥ ಮಾಡುತ್ತಾರೆ ಅಥವಾ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ.

Rose

ಅದೇ ರೀತಿ, ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಹಲವಾರು ಪ್ಯಾಕ್ ಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಅಂತವರಿಗೆ ಹೂವಿನಿಂದಲೇ ಮಾಡಿಕೊಳ್ಳಬಹುದಾದ ಕೆಲವು ಪ್ಯಾಕ್ ಗಳು ಇಲ್ಲಿವೆ ನೋಡಿ.


ಗುಲಾಬಿ ಹೂವು : ಪ್ರತಿಯೊಂದು ಮನೆಯಂಗಳದಲ್ಲೂ ಗುಲಾಬಿ ಹೂವು (Rose) ಇದ್ದೇ ಇರುತ್ತದೆ.

ಚರ್ಮದ ಸೌಂದರ್ಯ ಕಾಪಾಡಲು ಗುಲಾಬಿ ಹೂವು ಸಹಾಯ ಮಾಡುತ್ತದೆ ಎಂದು ಬ್ಯೂಟಿಷಿಯನ್ ಗಳು ಸಹ ಹೇಳುತ್ತಾರೆ.

ವಿಶೇಷವಾಗಿ ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳನ್ನು (Dark Circle) ಕಡಿಮೆ ಮಾಡಲು ರೋಸ್ ವಾಟರ್ ಅನ್ನು ಬಳಸಲಾಗುತ್ತದೆ.

ಇದನ್ನೂ ಓದಿ : https://vijayatimes.com/actor-chetan-justifies/

ಕಪ್ಪು ವರ್ತುಲ ಕಡಿಮೆ ಮಾಡಿ, ಉತ್ತಮ ಫಲಿತಾಂಶವನ್ನು ಪಡೆಯಲು ಹತ್ತಿಯನ್ನು ರೋಸ್ ವಾಟರ್‌ನಲ್ಲಿ ನೆನೆಸಿ ನಿಮ್ಮ ಕಣ್ಣುಗಳ ಮೇಲೆ ಹಚ್ಚಿ.

ಗುಲಾಬಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮದ ತುರಿಕೆ, ಉರಿಯೂತ ಮುಂತಾದ ತೊಂದರೆಗಳನ್ನು ಕಡಿಮೆ ಮಾಡುತ್ತದೆ.

ಗುಲಾಬಿಯು ಉತ್ತಮ ಕ್ಲೆನ್ಸರ್ ಆಗಿ ಕೂಡ ಕೆಲಸ ಮಾಡುವ ಕಾರಣ, ರೋಸ್ ವಾಟರ್ (Rose Water) ನಮ್ಮ ಮುಖದ ಚರ್ಮದ ಮೇಲಿನ ಎಣ್ಣೆ ಹಾಗೂ ಶೇಖರಣೆಯಾದ ಕೊಳೆಯನ್ನು ಹೋಗಲಾಡಿಸುವ ಮೂಲಕ ತ್ವಚೆಯನ್ನು ತಾಜಾ ಆಗಿರಿಸುತ್ತದೆ.

ನೀವು ಗುಲಾಬಿ ಬಣ್ಣದ ಫೇಸ್ ಪ್ಯಾಕ್ ಹಾಕಿಕೊಂಡರೂ ಇದೇ ಫಲಿತಾಂಶ ದೊರೆಯುತ್ತದೆ. ಗುಲಾಬಿಯು ಟ್ಯಾನ್ ಅನ್ನು ತೆಗೆದುಹಾಕುತ್ತದೆ, ಇದಕ್ಕೆ ನೀವು ಗುಲಾಬಿ ಮತ್ತು ಗ್ಲಿಸರಿನ್ ಹೊಂದಿರುವ ಪ್ಯಾಕ್ ಅನ್ನು ಧರಿಸಬಹುದು.

Lavender


ಲ್ಯಾವೆಂಡರ್ ಹೂ : ಲ್ಯಾವೆಂಡರ್ ಹೂವು (Lavender) ಚರ್ಮದ ಎಣ್ಣೆಯ ಅಂಶ ಮತ್ತು pH ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ಚರ್ಮವನ್ನು ಶುಷ್ಕತೆಯಿಂದ ರಕ್ಷಿಸಲೂ ಸಹಾಯ ಮಾಡುತ್ತದೆ.

ಈ ಹೂವು ಬ್ಯಾಕ್ಟೀರಿಯಾ ಮತ್ತು ನಂಜು ನಿರೋಧಕ ಗುಣಗಳನ್ನು ಹೊಂದಿರುವ ಕಾರಣ, ಲ್ಯಾವೆಂಡರ್ ಪೇಸ್ ಮಾಸ್ಕ್ ಸೋಂಕುಗಳನ್ನು ನಿವಾರಿಸುತ್ತದೆ.

ಲ್ಯಾವೆಂಡರ್ ಎಣ್ಣೆ ಚರ್ಮಕ್ಕೆ ಹೊಳಪು ನೀಡುತ್ತದೆ ಹಾಗಾಗಿ ಲ್ಯಾವೆಂಡರ್ ಎಣ್ಣೆಯನ್ನು ಮುಖಕ್ಕೆ ಹಚ್ಚುವುದು ಒಳಿತು.

ಇದು ಮುಖದ ಮೇಲಿನ ಸುಕ್ಕುಗಳನ್ನು ಹೋಗಲಾಡಿಸುವುದರ ಜೊತೆಗೆ ಮೊಡವೆಗಳನ್ನು ತಡೆಯಲು ಸಹಕರಿಸುತ್ತದೆ.

ಇದನ್ನೂ ಓದಿ : https://vijayatimes.com/satyendra-jain-gets-treatment/


ಸೇವಂತಿಗೆ : ಸೇವಂತಿಗೆ ಹೂವು (Marie Gold) ಉರಿಯೂತದ ಶಮನಕಾರಿ ಗುಣಗಳಿಂದ ಸಮೃದ್ಧವಾಗಿದೆ.

ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡುವುದರ ಜೊತೆಗೆ ಕಿರಿಕಿರಿಯಿಂದ ತ್ವಚೆಯನ್ನು ರಕ್ಷಿಸುತ್ತದೆ. ಹಾಗಾಗಿ ಸೇವಂತಿಗೆ ಹೂವುಗಳನ್ನು ಒಣಗಿಸಿ ಪುಡಿ ಮಾಡಿ ಫೇಸ್ ಪ್ಯಾಕ್ ಆಗಿ ಬಳಸಬಹುದು.

ಇದನ್ನೂ ಓದಿ : https://vijayatimes.com/50-days-of-kantara/


ದಾಸವಾಳ ಹೂವು : ಈ ಹೂವಿನಲ್ಲಿ ಸಮೃದ್ಧವಾಗಿರುವ ‘ವಿಟಮಿನ್ ಸಿ’ ಚರ್ಮವನ್ನು ಆರೋಗ್ಯವಾಗಿರಿಸಲು ಸಹಕರಿಸುತ್ತದೆ.

ಎರಡು ಚಮಚ ದಾಸವಾಳದ ದಳಗಳ ಜೊತೆಗೆ ಒಂದು ಚಮಚ ಅಲೋವೆರಾ ತಿರುಳು ಹಾಗೂ ಅರ್ಧ ಚಮಚ ಮುಲ್ತಾನಿ ಮಿಟ್ಟಿ, ಸ್ವಲ್ಪ ರೋಸ್ ವಾಟರ್ ಮಿಕ್ಸ್ ಮಾಡಿ ಮುಖ, ಕುತ್ತಿಗೆ ಮತ್ತು ಕೈಗಳಿಗೆ ಪ್ಯಾಕ್ ಹಾಕಿಕೊಳ್ಳಿ.

Health Tips

ಅರ್ಧ ಗಂಟೆಯ ನಂತರ ತೊಳೆದರೆ ಮುಖ ಹೊಳಪು ಬರುತ್ತದೆ. ಈ ಹೂವುಗಳು ಚರ್ಮ ಸುಕ್ಕಾಗದಂತೆ ರಕ್ಷಿಸುತ್ತವೆ ಹಾಗೂ ಚರ್ಮದಲ್ಲಿನ ಎಣ್ಣೆಯ ಅಂಶವನ್ನು ಕಾಪಾಡಿಕೊಳ್ಳುತ್ತವೆ.


ಲಿಲಿ ಹೂವುಗಳು : ಲಿಲಿ ಹೂಗಳು ಚರ್ಮಕ್ಕೆ ಅಗತ್ಯವಾದ ಕಾಲಜಿನ್ ಅನ್ನು ಉತ್ಪಾದಿಸುವ ಕಾರಣ ಚರ್ಮದ ಆರೋಗ್ಯಕ್ಕೆ ಸಹಕಾರಿ.

ಎರಡು ಚಮಚ ಕಮಲದ ಹೂವಿನ ದಳಗಳಿಗೆ ಒಂದು ಚಮಚ ಜೇನುತುಪ್ಪ ಮತ್ತು ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಿರಿ.

ಇದನ್ನು ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಸಾಕು ಸುಕ್ಕುಗಳು, ಕಲೆಗಳು ಕಡಿಮೆಯಾಗಿ ಮುಖ ಸುಂದರವಾಗಿ ಕಾಣಿಸುತ್ತದೆ.

ಇದನ್ನೂ ಓದಿ : https://vijayatimes.com/assam-cm-slams-rahul/


ಮಲ್ಲಿಗೆ ಹೂವು : ಸುಮಧುರ ಪರಿಮಳಯುಕ್ತ ಮಲ್ಲಿಗೆ ಹೂವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಮಲ್ಲಿಗೆ ಹೂವುಗಳು ಚರ್ಮದ ತೇವಾಂಶವನ್ನು ಕಾಪಾಡಲು ಪರಿಣಾಮಕಾರಿಯಾಗಿವೆ.

ಹಾಗಾಗಿ ಅವುಗಳನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಮಲ್ಲಿಗೆಯಲ್ಲಿ ಮುಖದ ತೇವವನ್ನು ಹೆಚ್ಚಿಸಿ ಕಾಂತಿಯುತಗೊಳಿಸುವ ಗುಣವಿದೆ.

ಹಾಗಾಗಿ, ಮಲ್ಲಿಗೆಯ ಗೊಂಚಲುಗಳ ಪೇಸ್ಟ್ ಮಾಡಿ ಮತ್ತು ಅದಕ್ಕೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಕಾಲ ಮೃದುವಾಗಿ ಮಸಾಜ್ ಮಾಡಿ ಬೆಚ್ಚಗಿನ ನೀರಿನಿಂದ ತೊಳೆಯಿರಿ.

VijayaTimes


ಚೆಂಡು ಹೂ : ಹೊಳೆಯುವ ಚೆಂಡು ಹೂವು ಆಂಟಿ-ಸೆಪ್ಟಿಕ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಇದು ಚರ್ಮಕ್ಕೆ ನೈಸರ್ಗಿಕ ತೇವಾಂಶ ಮತ್ತು ಹೊಳಪನ್ನು ನೀಡುತ್ತದೆ.

https://fb.watch/gTbIAkIsD_/ COVER STORY | ಭರ್ಜರಿ ಆಯಿಲ್ ಮಾಫಿಯಾ

ಹಾಗಾಗಿ, ಚಿಕ್ಕವಯಸ್ಸಿನಲ್ಲಿ ನಿಮ್ಮ ಮುಖದ ಮೇಲೆ ಸುಕ್ಕುಗಳು ಕಾಣಿಸಿದರೆ ನಿಮ್ಮ ಮುಖ ಮತ್ತು ದೇಹಕ್ಕೆ ಈ ಹೂವಿನ ಪೇಸ್ಟ್ ಅನ್ನು ಹಚ್ಚಿಕೊಳ್ಳಿ.

ಇದರಿಂದ ದೇಹದಲ್ಲಿ ಕಾಲಜಿನ್ ಉತ್ಪತ್ತಿಯಾಗಿ ಕ್ರಮೇಣ ಸುಕ್ಕುಗಳು ಕಡಿಮೆಯಾಗಿ ಯೌವನ ಭರಿತವಾಗುತ್ತದೆ.
Tags: beauty tipsFlowerhealth tips

Related News

ನಿಂಬೆ ಹಣ್ಣನ್ನು ಈ ಆಹಾರಗಳ ಜೊತೆ ಅಪ್ಪಿತಪ್ಪಿಯೂ ಬಳಸಬೇಡಿ..!
ಆರೋಗ್ಯ

ನಿಂಬೆ ಹಣ್ಣನ್ನು ಈ ಆಹಾರಗಳ ಜೊತೆ ಅಪ್ಪಿತಪ್ಪಿಯೂ ಬಳಸಬೇಡಿ..!

September 26, 2023
ನಿಮ್ಮ ಶ್ವಾಸಕೋಶದಲ್ಲಿನ ಸಮಸ್ಯೆ ಕಂಡುಹಿಡಿಯುವುದು ಹೇಗೆ? ಇಲ್ಲಿದೆ ಒಂದಿಷ್ಟು ಟಿಪ್ಸ್‌
ಆರೋಗ್ಯ

ನಿಮ್ಮ ಶ್ವಾಸಕೋಶದಲ್ಲಿನ ಸಮಸ್ಯೆ ಕಂಡುಹಿಡಿಯುವುದು ಹೇಗೆ? ಇಲ್ಲಿದೆ ಒಂದಿಷ್ಟು ಟಿಪ್ಸ್‌

September 26, 2023
ಮೈಗ್ರೇನ್ ನೋವು ವಿಪರೀತ ಕಾಡ್ತಿದೆಯಾ? ಹಾಗಾದ್ರೆ ಈ ಆಯುರ್ವೇದಿಕ್ ಸಲಹೆಗಳನ್ನು ಪಾಲಿಸಿ ನೋಡಿ
ಆರೋಗ್ಯ

ಮೈಗ್ರೇನ್ ನೋವು ವಿಪರೀತ ಕಾಡ್ತಿದೆಯಾ? ಹಾಗಾದ್ರೆ ಈ ಆಯುರ್ವೇದಿಕ್ ಸಲಹೆಗಳನ್ನು ಪಾಲಿಸಿ ನೋಡಿ

September 25, 2023
ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?
ಆರೋಗ್ಯ

ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?

September 25, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.