ಪ್ರತಿಯೊಬ್ಬರಿಗೂ ಸುಂದರವಾಗಿ ಕಾಣಿಸುವ, ಕೋಮಲವಾದ ತ್ವಚೆ ಹೊಂದುವ, ಆಸೆ ಇರುತ್ತೆ. ಆದರೆ ಮಾರುಕಟ್ಟೆಗಳಲ್ಲಿ ಸಿಗುವಂತಹ ರಾಸಾಯನಿಕ ಮಿಶ್ರಿತ ಕ್ರೀಮ್ಗಳನ್ನು (Cream) ಬಳಸುವುದರಿಂದ ನಮ್ಮ ಚರ್ಮಕ್ಕೆ ತೊಂದರೆಯೇ ಹೊರತು (benefits of aleovera) ಅದರಿಂದ ಉಪಯೋಗಗಳೇನಿಲ್ಲ.
ಇದರ ಬದಲಿಗೆ ನೈಸರ್ಗಿಕವಾಗಿ ಸಿಗುವಂತಹ ಅಲೋವೆರಾ ಜೆಲ್ಲನ್ನು ಬಳಸಿದರೆ ತ್ವಚೆಗೆ ಉಪಯುಕ್ತವಾಗಿರುತ್ತೆ.
ಇದಕ್ಕೆ ಯಾವುದೇ ರೀತಿ ರಾಸಾಯನಿಕ ಬಳಸಿರುವುದಿಲ್ಲ. ಇದನ್ನು ಪ್ರತಿಯೊಬ್ಬರೂ ಮನೆಯಲ್ಲೇ ಆರಾಮಾಗಿ ಅಲೋವೆರಾ ಜೆಲ್ಲನ್ನು (Aloe vera) ಮುಖಕ್ಕೆ ಹಚ್ಚಬಹುದು.
ಇದರ ಜೆಲ್ಲನ್ನು ಕೂದಲಿಗೂ, ಮುಖಕ್ಕೂ ಬಳಸಬಹುದಾಗಿದೆ. ಒಟ್ಟಿನಲ್ಲಿ ಸೌಂದರ್ಯವನ್ನು ವೃದ್ದಿಸುವಲ್ಲಿ ಇದರ ಪಾತ್ರ ಬಹಳ ಮುಖ್ಯವಾಗಿದೆ.

ಮೊಡವೆಗೆ ರಾಮಬಾಣ: ಮುಖದಲ್ಲಿರುವ ಮೊಡವೆ ಪಿಗ್ಮೆಂಟೇಷನ್ (Pigmentation) ಅಂತಹ ಚರ್ಮದ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಇದರಲ್ಲಿ ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಾ ಗುಣಗಳಿರುತ್ತವೆ. ನಿಮಗೆ ತಿಳಿದಿರುವ ಹಾಗೆ ನಾವು ಬಳಸುವ ಫೇಸ್ ವಾಶ್ (Face Wash) ನಲ್ಲಿ ಕೂಡ ಅಲೋವೆರಾ ಜೆಲ್ ಅನ್ನು ಇದೇ ಕಾರಣಕ್ಕಾಗಿ ಬಳಸುತ್ತಾರೆ.
ಆದರೆ ಇಂತಹ ರಾಸಾಯನಿಕಯುಕ್ತ ಫೇಸ್ ವಾಶ್ ಗಳನ್ನು ಬಳಸುವುದಕ್ಕಿಂತ, ನೈಸರ್ಗಿಕವಾಗಿ ಬೆಳೆದಿರುವ ಅಲೋವೆರಾವನ್ನು ಬಳಸುವುದು (benefits of aleovera) ಬಹಳ ಒಳ್ಳೆಯದು.
ಮೊಡವೆ, ಬಿಸಿಲಿನಿಂದಾದ ಟ್ಯಾನ್, ಸಣ್ಣ ಸುಟ್ಟ ಗಾಯಗಳಿಗೆ, ಒಣ ಚರ್ಮ ಕಡಿತ ಅಥವಾ ಚರ್ಮದ ಗಾಯಗಳಿಗೆ, ಹುಳುಕಡ್ಡಿ ಮತ್ತು ಟೀನಿಯಾ ವರ್ಸಿಕೂರ್, ಎಸ್ಟಿಮಾ, ರೋಸಾಸಿಯಾ, ಚರ್ಮದ ಸುಕ್ಕುಗಳು, ಕೀಟಗಳು ಕಚ್ಚಿರುವುದಕ್ಕೆ
ಈ ರೀತಿಯ ಚರ್ಮದ ಸಮಸ್ಯೆಗಳಿಗೆ ಅಲೋವೆರ ಜೆಲ್ ಉಪಯುಕ್ತವಾಗಿದೆ. ಬೇಸಿಗೆಯಲ್ಲಿ ಬಿಸಿಲಿಗೆ ಓಡಾಡಿ ಮೈ ಕೈ ಹಾಗೂ ಮುಖದಲೆಲ್ಲ ಸನ್ ಟ್ಯಾನ್ (Sun Tan) ಆಗುತ್ತದೆ.
ಹಾಗಾಗಿ ಕೈಕಾಲುಗಳು ಕಪ್ಪಾಗಿ ಕಾಣಲಾರಂಬಿಸುತ್ತವೆ. ಈ ಕಪ್ಪನ್ನು ಹೋಗಲಾಡಿಸಲು ಇದನ್ನು ಬಳಸಲಾಗುತ್ತದೆ.

ನೀವೇ ಮನೆಯಲ್ಲಿ ಸುಲಭವಾಗಿ ಅಲೋವೆರಾ ಫೇಸ್ ಪ್ಯಾಕನ್ನು ಹೇಗೆ ತಯಾರಿಸ ಬಹುದು ಅಂತ ತಿಳಿಯೋಣ ಬನ್ನಿ”
ಒಂದು ಬೌಲ್ ನಲ್ಲಿ 1 ಚಮಚ ಅಲೋವೆರ ಜೆಲ್ ಅನ್ನು ತೆಗೆದುಕೊಂಡು ಆ ಜೆಲ್ಗೆ ಜೇನುತುಪ್ಪವನ್ನು ಸೇರಿಸಿ.
ನಂತರ ಇದಕ್ಕೆ ನಿಂಬೆರಸ ಮತ್ತು ರೋಜ್ ವಾಟರ್ (Rose Water) ಅನ್ನು ಮಿಕ್ಸ್ ಮಾಡಬೇಕು. ಆಗ ನಿಮ್ಮ ಅಲೋವೆರಾ ಫೇಸ್ ಮಾಸ್ಕ್ (Mask) ಸಿದ್ಧವಾಗುತ್ತದೆ.
ಅಲೋವೆರಾ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚುವ ರೀತಿ:
ಮೊದಲು ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ ನಂತರ ರೆಡಿ ಇರುವ ಫೇಸ್ ಪ್ಯಾಕ್ (Face Pack) ಅನ್ನು ಮುಖಕ್ಕೆ ಹಚ್ಚಿ, ನಮ್ಮ ಕೈಗಳಿಂದ ನಿಧಾನವಾಗಿ ಮಸಾಜ್ ಮಾಡಬೇಕು ನಂತರ ಈ ಪ್ಯಾಕ್ ಅನ್ನು ಕನಿಷ್ಠ 15 ನಿಮಿಷಗಳು ಬಿಟ್ಟು ನಂತರ ಮಾಮೂಲಿ ನೀರಿನಿಂದ ಮುಖವನ್ನು ತೊಳೆಯಬೇಕು.
ಈ ಫೇಸ್ ಪ್ಯಾಕ್ ಅನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಮಾತ್ರವೇ ಬಳಸಿ. ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ಕಾಣುವಿರಿ.