ಕಪ್ಪು ಎಳ್ಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದೆ ಕರೆಯಬಹುದು. ಇದು ಯಾವುದೇ ರೋಗಗಳು ಬಾರದಂತೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಚರ್ಮದ ಸಮಸ್ಯೆಗಳು (benefits of black sesame)
ಬಾರದಂತೆ ನೋಡಿಕೊಳ್ಳುವುದರಿಂದ ಹಿಡಿದು ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ನಿಯಂತ್ರಣದಲ್ಲಿಡುವವರೆಗೆ ಕಪ್ಪು ಎಳ್ಳು ಪ್ರಯೋಜನಕಾರಿಯಾಗಿದೆ.

ಭಾರತೀಯರ ಸಾಂಪ್ರದಾಯಿಕ ಅಡುಗೆ ಮನೆಗಳಲ್ಲಿ ಪ್ರಕೃತಿಯ ಅಪಾರವಾದ ಕೊಡುಗೆಗಳು ತುಂಬಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅನೇಕ ತಲೆಮಾರಿನವರು ಸಾವಿರಾರು ವರ್ಷಗಳಿಂದ ಪ್ರಕೃತಿ ನೀಡಿದ
ಮಸಾಲೆಗಳಿಂದ ಆರೋಗ್ಯವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಕಪ್ಪು ಎಳ್ಳು ಕೂಡ ಇಂತಹ ಅದ್ಭುತಗಳಲ್ಲಿ ಒಂದು. ಇದು ಚರ್ಮದ ಸಮಸ್ಯೆಗಳು ಬಾರದಂತೆ ತಡೆಯುವುದರಿಂದ ಹಿಡಿದು, ಥೈರಾಯ್ಡ್
(Thyroid) ವಿರುದ್ಧ ಹೋರಾಡುವವರೆಗೆ, ಕಪ್ಪು ಎಳ್ಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.
ಕಪ್ಪು ಎಳ್ಳನ್ನು ಮತ್ತೊಂದು ಹೆಸರಿನಿಂದ ಅಂದರೆ ನಿಗೆಲ್ಲಾ ಬೀಜಗಳು ಅಂತಾನೂ ಕರೆಯುತ್ತಾರೆ. ಇದು ಖಾದ್ಯಗಳಿಗೆ ಘಮ ಘಮ ಸುವಾಸನೆಯನ್ನು ನೀಡುವುದಲ್ಲದೆ, ಜೀವಸತ್ವಗಳು, ಫೈಬರ್ (Fiber),
ಅಮೈನೊ ಆಮ್ಲಗಳು, ಪ್ರೋಟೀನ್ (Protein), ಕೊಬ್ಬಿನಾಮ್ಲಗಳು ಮತ್ತು ಅತ್ಯಧಿಕ ಪೋಷಕಾಂಶಗಳನ್ನು ಸೇರಿದಂತೆ ಹಲವಾರು ಒಳ್ಳೆಯ ಗುಣಗಳಿಂದ ತುಂಬಿದೆ, ಇದು ಒಟ್ಟಾರೆ ನಮ್ಮ ಆರೋಗ್ಯವನ್ನು
ನಿಯಂತ್ರಣದಲ್ಲಿಡಲು (benefits of black sesame) ಸಹಾಯಕವಾಗಿದೆ.
ಕಪ್ಪು ಎಳ್ಳಿನ ಪ್ರಯೋಜನಗಳು:
ಇದು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದ್ದು, ಇದನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮಗಳನ್ನು ನೀಡುತ್ತದೆ. ಇದರ ಬಗ್ಗೆ ಹಲವಾರು ಅಧ್ಯಯನಗಳನ್ನು ಮಾಡಲಾಗಿದೆ
ಎಂದು ಮಹಾಜನ್ (Mahajan) ಅವರು ಹೇಳುತ್ತಾರೆ. ಇನ್ನು ಇದು ಸಾವನ್ನು ಹೊರತುಪಡಿಸಿ ಇನ್ನೆಲ್ಲಾ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ. ಕಲೋಂಜಿ
ಇದನ್ನು ಓದಿ: ನಾಳೆ ಜುಲೈ 26ರಂದು ನಡೆಯುವ 24ನೇ ಕಾರ್ಗಿಲ್ ವಿಜಯೋತ್ಸವಕ್ಕೆ ಭಾರತ ಹೇಗೆ ಸಿದ್ಧತೆ ನಡೆಸಿದೆ : ಹೇಗಿರಲಿದೆ ಈ ಬಾರಿ ಸಂಭ್ರಮ?
ಅಥವಾ ಕಪ್ಪು ಎಳ್ಳಿನ ಕೆಲವು ಪ್ರಮುಖ ಆರೋಗ್ಯದ ಪ್ರಯೋಜನಗಳು ಮಾಹಿತಿ ಈಗಿದೆ.
- ಚರ್ಮದ ಸಮಸ್ಯೆ:
ಮಾನ್ಸೂನ್ನಲ್ಲಿ ನೀವೇನಾದ್ರು ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ, ಅಥವಾ ನಿಮಗೆ ಸೋರಿಯಾಸಿಸ್ (Psoriasis) ಹಾಗೂ ಮೊಡವೆ ಸಮಸ್ಯೆ ಇದ್ರೆ ಹಾಗಾದರೆ ಈ ಕಪ್ಪು ಬೀಜಗಳು ಇಂತಹ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುವುದಲ್ಲದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಜೀವಿ ವಿರೋಧಿ, ವೈರಲ್ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಪರಾವಲಂಬಿ ವಿರೋಧಿ
ಗುಣ ಲಕ್ಷಣಗಳಿವೆ. ಇದು ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಮಹಾಜನ್ ಹೇಳುತ್ತಾರೆ. ಚರ್ಮದ ಸಮಸ್ಯೆಗಳ ವಿರುದ್ಧ ಇದು ಪರಿಣಾಮಕಾರಿ ಎಂದು ಹೇಳಲಾಗಿದೆ.
ಅಲ್ಲದೆ ಅಧ್ಯಯನಗಳಿಂದಲೂ ಸಾಬೀತು ಪಡಿಸಲಾಗಿದೆ. ಇದು ಸೋರಿಯಾಸಿಸ್, ಮೊಡವೆ, ವಲ್ಗರಿಸ್ ರೋಗಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ ಹಾಗೂ ಅಲ್ಲಲ್ಲಿ ಆದ ಗಾಯದ ಕಲೆಗಳನ್ನು
ಸಹ ಕಡಿಮೆ ಮಾಡುತ್ತದೆ. ಹಾಗಾಗಿ ಕಲೋಂಜಿ (Kalonji) ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. - ತೂಕ ಇಳಿಸಿಕೊಳ್ಳಲು ಸಹಕಾರಿ:
ಪ್ರತಿದಿನ ಆಹಾರ ಮತ್ತು ವ್ಯಾಯಾಮದಲ್ಲಿ ಬದಲಾವಣೆಗಳನ್ನು ಮಾಡುವುದು ಹಾಗು ತೂಕ ಇಳಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ದಿನನಿತ್ಯದ ಆಹಾರದಲ್ಲಿ ಆರೋಗ್ಯಕರ ಆಹಾರವನ್ನು ಸೇರಿಸುವುದು
ಒಳ್ಳೆಯದು, ಇದರ ಜೊತೆಗೆ ಎಳ್ಳಿನ ಬಳಕೆ ಕೂಡ ಒಂದು. ಇದು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಸಕ್ರಿಯ ಪದಾರ್ಥಗಳನ್ನು ಒಳಗೊಂಡಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಇದು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕಗಳನ್ನು ಸಹ ಹೊಂದಿರುತ್ತದೆ, ಇವೆಲ್ಲವೂ ತೂಕ ನಷ್ಟಕ್ಕೆ ಕಾರಣವಾಗಬಹುದು. ಕಲೋಂಜಿಯಲ್ಲಿನ ಸಕ್ರಿಯ ಪದಾರ್ಥಗಳು ತೂಕ ನಷ್ಟಕ್ಕೆ ಕಾರಣವಾಗಬಹುದು ಡವ್ ಪ್ರೆಸ್ (Dovepress) ಅಲ್ಲಿ ಪ್ರಕಟವಾದ ಅಧ್ಯಯನವು ಕಂಡು ಹಿಡಿದಿದೆ. ಇದು ದೇಹದ ತೂಕ ಕಡಿಮೆ ಮಾಡುವ ಮೂಲಕ ಬಾಡಿ ಫಿಟ್ (Body Fit) ಇರುವಂತೆ ನೋಡಿಕೊಳ್ಳುತ್ತದೆ. - ಥೈರಾಯ್ಡ್ ನ ನಿಯಂತ್ರಣ:
ಥೈರಾಯ್ಡ್ ಅಂತಃಸ್ರಾವಕ ಗ್ರಂಥಿಯಾಗಿದ್ದು, ಇದು ಚಯಾಪಚಯ ಕ್ರಿಯೆಯನ್ನು ನಿರ್ವಹಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು (Harmon’s) ತಯಾರಿಸುವುದಲ್ಲದೆ ಬಿಡುಗಡೆ ಮಾಡುತ್ತದೆ.
ಇದು ಸರಿಯಾಗಿ ಕೆಲಸ ಮಾಡದಿದ್ದಾಗ, ಹೈಪೋಥೈರಾಯ್ಡಿಸಮ್ (Hypothyroidism) ಅಥವಾ ಹೈಪರ್ ಥೈರಾಯ್ಡಿಸಮ್ಗೆ ಕಾರಣವಾಗಬಹುದು ಹಾಗಾಗಿ ಆಹಾರದಲ್ಲಿ ಎಳ್ಳನ್ನು ಬಳಸುವುದರಿಂದ
ಥೈರಾಯ್ಡ್ ಸಮಸ್ಯೆಯನ್ನು ತಡೆಗಟ್ಟಲು ಇದು ಬಹಳ ಸಹಾಯಕಾರಿಯಾಗಿದೆ ಎಂದು ಮಹಾಜನ್ ತಿಳಿಸಿದ್ದಾರೆ. - ಕೊಲೆಸ್ಟ್ರಾಲ್ನ ನಿಯಂತ್ರಣ
ಇನ್ನು ಎಲ್ಲರಲ್ಲೂ ಕಾಡುವಂತಹ ದೊಡ್ಡ ಸಮಸ್ಯೆ ಅಂದ್ರೆ ಅದು ಅಧಿಕ ಕೊಲೆಸ್ಟ್ರಾಲ್, ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಹೃದಯಾಘಾತ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆಗಳು
ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ತಡೆಗಟ್ಟಲು ಆರೋಗ್ಯಕರ ಆಹಾರವು ಪ್ರಮುಖವಾಗಿದೆ. ಹಾಗಾಗಿ ದೈನಂದಿನ ಆಹಾರದಲ್ಲಿ ಕಪ್ಪು
ಎಳ್ಳನ್ನು ಬಳಸುವುದು ಉತ್ತಮ. ಎಲ್.ಡಿ.ಎಲ್ (L.D.L) (ಕೆಟ್ಟ) ಮತ್ತು ಎಚ್.ಡಿ.ಎಲ್ (H.D.L) (ಉತ್ತಮ) ಕೊಲೆಸ್ಟ್ರಾಲ್ ಅನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುವುದರಿಂದ ಆಹಾರದಲ್ಲಿ ಎಳ್ಳನ್ನು
ಬಳಸಲು ಮಹಾಜನ್ ಶಿಫಾರಸು ಮಾಡುತ್ತಾರೆ.

5.ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ :
ಎಳ್ಳನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದು ಬಹಳ ಒಳ್ಳೆಯದು, ಇದು ಅವುಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕತಜ್ಞರು ಹೇಳಿದ್ದಾರೆ.
ವಾಸ್ತವವಾಗಿ, ಬ್ರಿಟಿಷ್ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ರಿಸರ್ಚ್ನಲ್ಲಿ (British journal of Pharmaceutical Research) ಪ್ರಕಟವಾದ ಅಧ್ಯಯನವು ನಾವು ಸೇವಿಸುವ ಆಹಾರದಲ್ಲಿನ ಸ್ಯಾಟಿವಾ
(sativa) ಅಂದರೆ ಕಪ್ಪು ಎಳ್ಳನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದ್ದಾರೆ.
6. ಗ್ಯಾಸ್ಟ್ರಿಕ್ ಸಮಸ್ಯೆ:
ಇನ್ನು ನೀವೇನಾದ್ರು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ. ಈ ಎಳ್ಳು ಅತ್ಯಂತ ಸಹಾಯಕಾರಿಯಾಗಿದೆ. ಇದು ಹಿಸ್ಟಮೈನ್ಗಳ (Histamines) ಬಿಡುಗಡೆಯನ್ನು ತಡೆಯುವ ಗುಣಲಕ್ಷಣಗಳನ್ನು ಹೊಂದಿದೆ,
ಅಲ್ಲದೆ ಇದು ಗ್ಯಾಸ್ಟ್ರಿಕ್ (gastric) ಸಮಸ್ಯೆಗಳನ್ನು ತಡೆಯಲು ಕೂಡ ಸಹಾಯ ಮಾಡುತ್ತದೆ.
ಹೇಗೆ ಎಳ್ಳನ್ನು ಬಳಸುವುದು:
೧. ಪ್ರತಿ ದಿನ 2 ಗ್ರಾಂ. ಎಳ್ಳನ್ನು ತೆಗೆದುಕೊಂಡು ಇದರಲ್ಲಿ ಅರ್ಧದಷ್ಟನ್ನು ಹುರಿದು, ಅವುಗಳನ್ನು ರುಬ್ಬಿ, ಮತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಬೆಲ್ಲದ ಜೊತೆಯಲ್ಲಿ ಕುಡಿಯಬೇಕು.
೨. ಎಳ್ಳನ್ನು, ಜೀರಿಗೆ, ಕೊತ್ತಂಬರಿ ಬೀಜಗಳು ಮತ್ತು ಸೋಂಪಿನ ಜೊತೆಯಲ್ಲಿ ಸೇರಿಸಿ ಒಣಗಿಸಿ ಹುರಿದು ನುಣ್ಣಗೆ ಪುಡಿ ಮಾಡಿ. ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ಮತ್ತು ಅದನ್ನು
ಭದ್ರವಾಗಿ ಡಬ್ಬದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ ಹಾಗು ಇದನ್ನು ಮಸಾಲೆ ಮಿಶ್ರಣದಲ್ಲಿಯೂ ಸೇರಿಸಿಕೊಳ್ಳಬಹುದು. ಅಲ್ಲದೆ ಇದು ಒಳ್ಳೆಯ ಮಸಾಲಾ ಮಿಶ್ರಣವಾಗಿದ್ದು ನಾವು
ಸೇವಿಸುವ ಆಹಾರ ಪದಾರ್ಥಗಳಿಗೆ ಬೆರೆಸಿ ಸೇವಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ.
೩. ಕಪ್ಪು ಎಳ್ಳನ್ನು ಅನ್ನದಿಂದ ಮಾಡುವ ತಿಂಡಿ, ಪಲ್ಯಗಳು, ಗ್ರೇವಿಗಳಿಗೆ ಮತ್ತು ಚಪಾತಿಗಳಿಗೆ ಸೇರಿಸಿ ತಿನ್ನಬಹುದು.
೪. ಸಂಭಾವ್ಯ ಅಪಾಯಗಳ ಬಗ್ಗೆ ತಿಳಿದುಕೊಳ್ಳಲು ನೀವು ಯಾವಾಗಲೂ ಆರೋಗ್ಯ ಆರೈಕೆ ಮಾಡುವಲ್ಲಿ ಎಳ್ಳನ್ನು ಬಳಸಲು ಸುರಕ್ಷಿತವೆಂದು ಪರಿಗಣಿಸಲಾಗಿದ್ದರೂ ವೈದ್ಯರನ್ನು
ಕೇಳಬೇಕು. ಯಾವುದೇ ಅಡ್ಡಪರಿಣಾಮವಿದ್ದಲ್ಲಿ ಅದನ್ನು ನಿಲ್ಲಿಸಬೇಕು.
ಭವ್ಯಶ್ರೀ ಆರ್.ಜೆ