ಜೋಳವನ್ನು ನೀವೆಲ್ಲರೂ ಹೆಚ್ಚು ಇಷ್ಟಪಟ್ಟು ತಿಂದು, “ಕಾರ್ನ್ ಸಿಲ್ಕ್ ” (Corn Silk) ಅಥವಾ ಜೋಳದ ಕೂದಲನ್ನು ಕಿಂಚಿತ್ತೂ ಯೋಚಿಸದೆ ಧಾರಾಳವಾಗಿ ಬಿಸಾಡುತ್ತೀರಾ? ಹಾಗಾದ್ರೆ ಈ ವರದಿ ಓದಲೇ ಬೇಕು. ಯಾಕಂದ್ರೆ ಜೋಳದ ಕೂದಲಿನಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದ್ರೆ, ಮುಂದೆ ಖಂಡಿತಾ ನೀವು ಜೋಳದ ಕೂದಲನ್ನು ಬಿಸಾಡುವುದಿಲ್ಲ.

ಹಾಗಾದ್ರೆ ಜೋಳದ ಕೂದಲಿನಿಂದಾಗುವ ಆರೋಗ್ಯ ಪ್ರಯೋಜನಗಳು ಏನೆಂದು ತಿಳಿಯೋಣ ಬನ್ನಿ …!!
- ಜೋಳದ ಕೂದಲು ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಬಹಳಷ್ಟು ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ.
- ಇನ್ನು “ಕಾರ್ನ್ ಸಿಲ್ಕ್” (Corn Silk) ನಲ್ಲಿರುವ ವಿಟಮಿನ್ “ಕೆ” (Vitamin K) ಗಾಯವಾದಾಗ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಾಗುವ ರಕ್ತಸ್ರಾವವನ್ನು ತಡೆಯಬಹುದು.
- ಇನ್ನು ಇತ್ತೀಚಿನ ದಿನಗಳಲ್ಲಿ ಕಾರ್ನ್ ಸಿಲ್ಕ್ ದೇಹದಲ್ಲಿಯ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿ ಎಂದು ತಿಳಿದುಬಂದಿದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣ ಮಾಡುತ್ತದೆ.
- ಇದಿಷ್ಟೇ ಅಲ್ಲದೆ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನೂ ಸಹ ನಿಯಂತ್ರಣ ಮಾಡುತ್ತದೆ.
ಹಾಗಿದ್ದರೆ “ಕಾರ್ನ್ ಸಿಲ್ಕ್” ಬಳಸೋದು ಹೇಗೆ …?
- ನೀರನ್ನು ಕುದಿಸಿ , ಅದಕ್ಕೆ ಸ್ವಲ್ಪ ನಿಂಬೆರಸ ಬೆರೆಸಿ , ಕಾರ್ನ್ ಸಿಲ್ಕ್ ಸೇರಿಸಿ ಬೇಯಿಸಿ ಕುಡಿಯಬಹುದು.
- ಮಿಕ್ಸಿ ಜಾರ್ನಲ್ಲಿ ಸ್ವಲ್ಪ ನೀರಿಗೆ ಜೇನುತುಪ್ಪ ಸೇರಿಸಿ , ಕಾರ್ನ್ ಸಿಲ್ಕ್ ಸೇರಿಸಿ ರುಬ್ಬಿ ,ಸೂರ್ಯನ ಬಿಸಿಲಿನಲ್ಲಿ ಇರಿಸಿ ಸಂಜೆ ಕುಡಿದರೆ ಉತ್ತಮ.

ಕಾರ್ನ್ ಸಿಲ್ಕ್ ಟೀ :-
ಕುದಿಯುವ ನೀರಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ , ಕಾರ್ನ್ ಸಿಲ್ಕ್ ಸೇರಿಸಿ ಕುಡಿಯುವುದೇ “ಕಾರ್ನ್ ಟೀ”(Corn Tea)
ದಿನಕ್ಕೆ ಮೂರು ಬಾರಿ ಕಾರ್ನ್ ಟೀ ಕುಡಿದರೆ ಸಂಧಿವಾತ (Goat) ಮಾಯವಾಗುತ್ತದೆ. ಅದಲ್ಲದೇ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು,ಹೃದಯರೋಗ , ಮೂತ್ರದಸೋಂಕು ಇತ್ಯಾದಿಗಳನ್ನು ತಡೆಯಲು ಮೂತ್ರವರ್ದಕ ಗುಣಲಕ್ಷಣಗಳನ್ನು ಕಾರ್ನ್ ಟೀ ಹೊಂದಿದೆ.
ಆದ್ರೆ ಒಂದು ಪ್ರಮುಖ ಸೂಚನೆ. ಕಾರ್ನ್ ಸಿಲ್ಕ್ ಅನ್ನು ಬಳಸುವಾಗ ಸಾವಯವ ರೀತಿಯಲ್ಲಿ ಬೆಳೆದದ್ದನ್ನು ಮಾತ್ರ ಉಪಯೋಗಿಸಬೇಕು , ಕೀಟನಾಶಕ ಸಿಂಪಡಿಸಿರುವುದನ್ನು ಬಳಸಬಾರದು. ಕಾರ್ನ್ ಸಿಲ್ಕ್”ನಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿರುವಾಗ ನಾವ್ಯಾಕೆ ಅದನ್ನ ಬಳಸದೇ ಬಿಸಾಡಬೇಕಲ್ವಾ..!!??
Gayatri M.N