ಮೂಳೆ ಮಾಂಸ ಖಂಡಗಳಿಗೆ ಸೂಪರ್ ಶಕ್ತಿ ಕೊಡುವ ರಾಮಬಾಣ: ಮಹಾಬೀರ ಬೀಜ

Mahabir Seeds : ಮಹಾಬೀರ , ಮೂಳೆಗಳಿಗೆ ಕ್ಯಾಲ್ಸಿಯಂ ಹೆಚ್ಚಿಸುವ ಅದ್ಭುತ ಬೀಜಗಳು. ಮೂಳೆ ಮಾಂಸ ಖಂಡಗಳಿಗೆ ಸೂಪರ್ ಶಕ್ತಿ ಕೊಡುವ ರಾಮಬಾಣ. ಮಂಡಿ ನೋವು ಮತ್ತು ಕೀಲು (benefits of mahabir seeds) ನೋವು ಮಲಬದ್ಧತೆ, ಸಂಧಿವಾತ ಎಲ್ಲದಕ್ಕೂ ರಾಮ ಬಾಣ ಈ ಮಹಾಬೀರ ಸೀಡ್ಸ್.

ಮಹಾಬೀರ ಬೀಜದ ವೈಜ್ಞಾನಿಕ ಹೆಸರು ಹೈಡ್ರೋಫೀಲಿಯ ಸೀಡ್ಸ್ (Hydrophilia Seeds), ಹಿಂದಿಯಲ್ಲಿ ತಾಲ್ ಮಖಾನ ಸೀಡ್, ಸಂಸ್ಕೃತದಲ್ಲಿ ಕೋಕಿಲಾಕ್ಸ್ ಸೀಡ್ಸ್, (Coccyx Seeds) ಬೀರ ಗಿಂಜಲು, ವನತುಳಸಿ, ವಿಲಾಟಿ ತುಳಸಿ ಬೀಜಗಳು ಎಂದೂ ಕರೆಯುತ್ತಾರೆ.

ಈ ಮಹಾಬೀರ ಸೀಡ್ಸ್ ಕಪ್ಪು ಬಣ್ಣದ್ದಾಗಿರುತ್ತದೆ.ಕಪ್ಪು ಎಳ್ಳಿನ ರೀತಿಯಲ್ಲಿರುತ್ತದೆ. ಚಿಯಾ ಹಾಗೂ ಕಾಮಕಸ್ತೂರಿ ಬೀಜದಂತೆ ಕಂಡರೂ ಸುಲಭವಾಗಿ ಪ್ರತ್ಯೇಕಿಸಬಹುದು. ಕಾರಣ ಈ ಮಹಾಬೀರ ಸೀಡ್ಸ್ ಇವೆರಡಕ್ಕಿಂತ ಆಕಾರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತದೆ.

ಮಹಾಬೀರ ಬೀಜವನ್ನು 250 ಎಮ್ ಎಲ್ (ml) ನೀರಿಗೆ ಒಂದು ಚಮಚ ಹಾಕಿ ರಾತ್ರಿ ಇಡೀ ನೆನಸಬೇಕು. ಚೆನ್ನಾಗಿ ನೆಂದು ಜೆಲ್ಲಿ ಜೆಲ್ಲಿಯಾಗಿ ಪರಿವರ್ತನೆ ಆಗುತ್ತದೆ. ಇದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದು ಸೇವಿಸಬೇಕು.

ಬೆಳಿಗ್ಗೆ ನೆನೆಸಿದ್ದನ್ನು ಸಂಜೆಗೆ ರಾತ್ರಿ ನೆನೆಸಿದ್ದನ್ನು ಬೆಳಿಗ್ಗೆ ಹೀಗೆ ಸತತವಾಗಿ ಮೂರು ತಿಂಗಳು ಸೇವಿಸುತ್ತಾ ಬಂದರೆ ಸಾಕು , ಎಂತಹ ಕಾಯಿಲೆ ಇದ್ದರೂ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.

ಕೀಲು ನೋವು ಮಲಬದ್ಧತೆ ಅಂತ ಕಾಯಿಲೆಗಳಿಂದ ಜೀವನ ಪರ್ಯಂತ ದೂರವಿರಬಹುದು. ಮಂಡಿಯ ಚಿಪ್ಪು ಸವೆದಿದ್ದರೂ (benefits of mahabir seeds) ಕೂಡ ಸರಿಹೋಗುತ್ತದೆ.

ಈ ಮಹಾಬೀರ ಬೀಜಗಳನ್ನು ಆಯುರ್ವೇದಿಕ್ ಅಂಗಡಿಗಳಲ್ಲಿ, ಆರ್ಗಾನಿಕ್ ಸ್ಟೋರ್ಗಳಲ್ಲಿ ದೊರೆಯುತ್ತದೆ. ಅಲ್ಲದೆ ಆನ್ಲೈನ್ ನಲ್ಲೂ(Online) ಕೂಡ ಖರೀದಿಸಬಹುದು.

ಮಹಾಬೀರ ಬೀಜದ ಅದ್ಭುತ ಪ್ರಯೋಜನಗಳು

ಸಾಮಾನ್ಯವಾಗಿ ಆಹಾರ ಪದಾರ್ಥಗಳಿಗೆ, ಸಿರಿಧಾನ್ಯಗಳಿಗೆ ಹಾಗೂ ಓಟ್ಸ್ ಗಳಿಗೆ ಹೋಲಿಸಿಕೊಂಡರೆ ಹೆಚ್ಚಿನ ಮೆಗ್ನೀಷಿಯಂ ಅಂಶ ಮಹಾಬೀರ ಬೀಜ ದಲ್ಲಿ ಕಂಡುಬರುತ್ತದೆ. ಒಮೆಗಾ 6,ಒಮೇಗಾ3 ಕೊಬ್ಬಿನಾಮ್ಲಗಳ ಉತ್ತಮ ಔಷಧಕಾರಿ ಗುಣ ಹೊಂದಿದೆ.

ಇದನ್ನು ಓದಿ: ಜೈಲಿನಿಂದಲೇ ಹೋಳಿ ಹಬ್ಬಕ್ಕೆ ನಟಿ ಜಾಕ್ವಲಿನ್‌ಗೆ ಶುಭಕೋರಿದ ಆರೋಪಿ ಸುಕೇಶ್!‌

ಪೋಷಕಾಂಶವಾಗಿ ಇದು ಕಬ್ಬಿಣ, ಮೆಗ್ನೀಷಿಯಂ,ಕ್ಯಾಲ್ಸಿಯಂ, ವಿಟಮಿನ್ b1, b2 ಹಾಗೂ ಉತ್ಕರ್ಷಣಾ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಈ ಎಲ್ಲ ವಿಶೇಷ ಗುಣಗಳಿಂದಾಗಿ ಈ ಮಹಾಬೀರ ಸೀಡ್ಸನ್ನು ಒಂದು ರೀತಿಯ ಸೂಪರ್ ಫುಡ್ ಎಂದೆ ಕರೆಯಬಹುದು.

ಈ ಮಹಾಬೀರ ಸೀಡ್ಸನ್ನು ನೆನೆ ಹಾಕಿದಾಗ ಬರುವ ಲೋಳೆ ಅಥವಾ ಜೆಲ್ ಹೊಟ್ಟೆ ಮತ್ತು ಕರುಳಿನ ಪೊರೆಗಳಿಗೆ ದಿವ್ಯ ಔಷಧಿ ಹೊಟ್ಟೆ ಮತ್ತು ಕರುಳಿಗೆ ತುಂಬಾ ಹಿತಕರವಾಗಿದ್ದು ಇದನ್ನು ದಿನನಿತ್ಯ ಬಳಸಿದಾಗ ಅತಿಸಾರ, ಕರುಳಿನ ಶುದ್ದೀಕರಣ ಉಂಟಾಗುತ್ತದೆ.

ಬೇಕು ಎಂದರೆ ನಿಂಬೆರಸ ಜೇನುತುಪ್ಪವನ್ನು ಬೆರೆಸಿ ಸಹ ಸೇವಿಸಬಹುದು. ಇದರಿಂದ ಜೀರ್ಣಾಂಗ ಮತ್ತು ದೇಹ ನಿರ್ಜಲೀಕರಣವಾಗದಂತೆ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಈ ಮಹಾಬೀರ ಬೀಜಗಳನ್ನು ಸಂರಕ್ಷಿಸುವುದು ತುಂಬಾ ಸುಲಭ,, ಗಾಳಿಯಾಡದ ಬಿಗಿಯಾದ ಮುಚ್ಚಳ ಇರುವ ಡಬ್ಬಿಗಳಲ್ಲಿ ಅಥವಾ ಕಂಟೇನರ್ ಗಳಲ್ಲಿ ಹೊರಗಿನ ವಾತಾವರಣದಲ್ಲಿ ದೀರ್ಘಾವಧಿ ವರೆಗೂ ಶೇಖರಿಸಿ ಇಡಬಹುದು.

ಯಶಸ್ವಿನಿಗೌಡ ಆರ್.*

Exit mobile version