ದೇಹದಲ್ಲಿನ ರಕ್ತಹೀನತೆಯನ್ನು ನಿವಾರಿಸಲು ಈ ಆಹಾರಗಳನ್ನು ಸೇವಿಸಬೇಕು: ಪೌಷ್ಟಿಕ ತಜ್ಞರ ಸಲಹೆ .

Health tips for Anemia: ರಕ್ತಹೀನತೆ ಎಂದು ಕರೆಯಲ್ಪಡುವ ಕಬ್ಬಿಣದ ಕೊರತೆಯು ದೇಹದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುವುದಲ್ಲದೆ ಈ ರಕ್ತ ಹೀನತೆಯನ್ನು ನಮ್ಮ ಕಣ್ಣುಗಳಿಂದ ತಿಳಿಯಬಹುದು. ಕೆಂಪು ರಕ್ತ ಕಣಗಳ ಕೊರತೆಯನು ಕಾಂಜಂಕ್ಟಿವಾಯಿಂದ ತಿಳಿಯಬಹುದು. ಕಾಂಜಂಕ್ಟಿವಾ (Conjunctiva) ರಕ್ತಹೀನತೆಯ ಸಮಸ್ಯೆ ಇದ್ದರೆ ತೆಳುವಾಗಿ ಕಾಣಿಸುತ್ತದೆ. ಕಬ್ಬಿಣದ ಕೊರತೆಯಿಂದ ಜನರಿಗೆ ದೃಷ್ಟಿ ಸಮಸ್ಯೆ ಉಂಟಾಗುತ್ತದೆ ಮತ್ತು ದೃಷ್ಟಿಯಲ್ಲಿ ಬದಲಾವಣೆಗಳ ಅನುಭವಿಸುತ್ತಾರೆ.

ಕಬ್ಬಿಣದ ಕೊರತೆಯಿಂದ ಕಣ್ಣಿಗೆ ಪರಿಣಾಮ ಬೀರುತ್ತದೆ. ಕಣ್ಣಿನ ಮೇಲೆ ದುಷ್ಪರಿಣಾಮ ಬೀಳುವುದಷ್ಟೇ ಅಲ್ಲದೆ ಕಣ್ಣು ಒಣಗಲು ಅಥವಾ ತುರಿಕೆಯಾಗಲು ಶುರುವಾಗುತ್ತದೆ. ಈ ಕೊರತೆಯಿಂದ ಸಾಮಾನ್ಯವಾಗಿ ಆಯಾಸ, ದೌರ್ಬಲ್ಯ, ತಲೆ ತಿರುಗುವಿಕೆ, ಕೂದಲು ಉದುರುವಿಕೆ ಮತ್ತು ಚರ್ಮದ ಶುಷ್ಕತೆ, ಉಸಿರಾಟದ ತೊಂದರೆ ಮತ್ತು ಹೃದಯ ಬಡಿತದಲ್ಲಿ ಬದಲಾವಣೆ ಅಂತ ಲಕ್ಷಣ ಕಾಣುತ್ತದೆ.

ಈ ಕೊರತೆಯನ್ನು ಹೋಗಲಾಡಿಸಲು ಕೆಲವು ಪದಾರ್ಥಗಳನ್ನು ತಿನ್ನಬೇಕು ಎಂದು ಡಿಟಾಕ್ಸ್ ಫ್ರೀ (Detox-free) ಸಂಸ್ಥಾಪಕಿ ಮತ್ತು ಹೋಲಿಸ್ಟಿಕ್ ನ್ಯೂಟ್ರಿಷನಿಷ್ಟ್ ಪ್ರಿಯಾಂಶಿ ಭಟ್ನಾಗರ್ (Priyanshi Bhatnagar) ಅವರು ಕೆಲವು ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಡ್ರೈ ಫ್ರೂಟ್ಸ್ಗಳು : ಬಾದಾಮಿ, ಗೋಡಂಬಿ, ಸೂರ್ಯಕಾಂತಿ ಬೀಜಗಳು ಮತ್ತು ಕುಂಬಳಕಾಯಿ ಬೀಜಗಳು ಅಲ್ಲದ ಕಬ್ಬಿಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಒಂದು ಔನ್ಸ್ ಬಾದಾಮಿಯು ಸುಮಾರು ಒಂದು ಮಿ. ಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಏಪ್ರಿಕಾಟ್ ಗಳು (Apricots), ಒಣದ್ರಾಕ್ಷಿ ಮತ್ತು ಪ್ಲಮ್ ಗಳಂತಹ ಒಣ ಹಣ್ಣುಗಳಿಂದ ಈ ಮಲ್ಲದ ಕಬ್ಬಿಣ ಸಮೃದ್ಧಿಯಾಗುತ್ತದೆ. ಒಂದು ಕಪ್ ಒಣಗಿದ ಎಪ್ರಿಕಾರ್ಟ್ ಸುಮಾರು 7.5 ಮಿಲಿ ಗ್ರಾಂ ಕಬ್ಬಿಣಾಂಶವನ್ನು ಹೊಂದಿರುತ್ತದೆ.

ಕೆಂಪು ಮಾಂಸ ಮತ್ತು ಚಿಕನ್: ಎಲ್ಲಾ ರೀತಿಯ ಕೆಂಪು ಮಾಂಸಗಳಲ್ಲಿ ಹಿಮ್ ಕಬ್ಬಿಣವು ಉತ್ತಮ ಮೂಲವಾಗಿರುತ್ತದೆ. ಇದು ದೇಹದಿಂದ ಹೆಚ್ಚು ಸುಲಭವಾಗಿ ಇರಲ್ಪಡುವುದಲ್ಲದೆ ಮೂರು ಔನ್ಸ್ ಬೇಯಿಸಿದ ಕೆಂಪು ಮಾಂಸದಲ್ಲಿ ಸುಮಾರು 2.1 ಮಿಲಿ ಗ್ರಾಂ ಕಬ್ಬಿಣ ಒದಗಿದೆ. ಕೋಳಿ ಮತ್ತು ಟರ್ಕಿ ಹೀಮ್ ಕಬ್ಬಿಣದಲ್ಲಿ ಉತ್ತಮ ಮೂಲಗಳಾಗಿವೆ. ಬೇಯಿಸಿದ ಚಿಕನ್ನಲ್ಲಿ (Chicken) 3 ವ್ಯಾನ್ ಸೇವನೆಯು ಸುಮಾರು 1.1 ಮಿಲಿ ಗ್ರಾಂ ಕಬ್ಬಿಣ ಅಂಶ ಇರುತ್ತದೆ.

ಮೀನು ಮತ್ತು ಅಂಗಮಾಂಸ : ಮೀನಿನಲ್ಲಿ ಅತ್ಯುತ್ತಮವಾದ ಕಬ್ಬಿಣ ಅಂಶವಿರುತ್ತದೆ. ಟ್ಯೂನ್, ಸಾಲ್ಮಾನ್ (Saalman), ಮ್ಯಾಕರಲ್ಮತ್ತು ಸಾರ್ಡಿನ್ ಗಳಂತಹ ಮೀನುಗಳು ಅತ್ಯುತ್ತಮವಾದ ಕಬ್ಬಿಣ ಅಂಶವನ್ನು ಹೊಂದಿವೆ. ಸಾಲ್ಮಾನ್ ನಾ ಮೂರು ಔನ್ಸ್ ಸೇವನೆಯು ಸುಮಾರು 0.8 ಮಿಲಿ ಗ್ರಾಂ ಕಬ್ಬಿಣವನ್ನು ಹೊಂದಿರುತ್ತವೆ. ಯಕೃತ್ತು, ಮೂತ್ರಪಿಂಡ ಮತ್ತು ಹೃದಯದಂತಹ ಅಂಗ ಮಾಂಸಗಳು ಹೆಚ್ಚಿನ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತದೆ. ಉದಾಹರಣೆಗೆ, ಮೂರು ಔನ್ಸ್ ಯಕೃತ್ತು ಸುಮಾರು 5.2 ಮಿಲಿ ಗ್ರಾಂ ಕಬ್ಬಿಣ ಅಂಶ ಹೊಂದಿರುತ್ತದೆ.

ದ್ವಿದಳ ಧಾನ್ಯಗಳು : ಮಸೂರು, ಕಡಲೆ ಮತ್ತು ಬೀನ್ಸ್ (Beans) ನಂತಹ ದ್ವಿದಳ ಧಾನ್ಯಗಳು ರಕ್ತ ಸಂಚಲನೆಗೆ ಒಳ್ಳೆಯದು, ಏಕೆಂದರೆ ಅವುಗಳು ಹೀಮಲ್ಲದ ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ. ಒಂದು ಕಪ್ ಬೇಯಿಸಿದ ಮಸೂರವು 6.6 ಮಿಲಿ ಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಸೋಯಾ (Soya) ಉತ್ಪನ್ನಗಳಾದ ತೋಪು ಮತ್ತು ಟೆಂಪೆ ಬೇಯಿಸಿದ ಒಂದು ಕಪ್ ಸೇವನೆಯಲ್ಲಿ 6.6 ಮಿಲಿ ಗ್ರಾಂ ಕಬ್ಬಿಣಾಂಶವನ್ನು ಇರುತ್ತದೆ.

ಎಲೆಗಳು ಮತ್ತು ಹಸಿರು ತರಕಾರಿಗಳು: ಒಂದು ಕಪ್ ಬೇಯಿಸಿದ ಕ್ವಿನೋವಾ ಸುಮಾರು 2.8 ಮಿಲಿ ಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಪಾಲಕ್ ಕೇಲ್ (Palak Kale) ಮತ್ತು ಸ್ವಿಸ್ ಚಾರ್ಡ್ ನಂತಹ ಹಸಿರು ಎಲೆಗಳು, ತರಕಾರಿಗಳು ಅತ್ಯುನ್ನತವಾದ ಕಬ್ಬಿಣ ಅಂಶಗಳನ್ನು ಹೊಂದಿರುತ್ತವೆ. ಒಂದು ಕಪ್ ಬೇಯಿಸಿದ ಪಾಲಾಕ್ ಸುಮಾರು 6.4 ಮಿಲಿ ಗ್ರಾಂ ಕಬ್ಬಿಣ ಹೊಂದಿರುತ್ತದೆ.

ಈ ಮೇಲ್ಕಂಡ ಆಹಾರಗಳನ್ನು ಸೇವಿಸುವುದರಿಂದ ರಕ್ತಹೀನತೆಯನ್ನು ನಿವಾರಿಸಿಕೊಳ್ಳಬಹುದು.

ಧನಂಜಯ್

Exit mobile version