ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಪ್ರಕರಣದ ಅಪರಾಧಿ ಜೊತೆ ವೇದಿಕೆ ಹಂಚಿಕೊಂಡ ಬಿಜೆಪಿ ಸಂಸದ !

Gujarat : 2002 ರ ಬಿಲ್ಕಿಸ್ ಬಾನೋ (Bilkis Bano gang rape) ಗ್ಯಾಂಗ್ ರೇಪ್‌ ಪ್ರಕರಣದ ಅಪರಾಧಿಯೊಬ್ಬನ ಜೊತೆ ಬಿಜೆಪಿ ಸಂಸದ ಜಸ್ವಂತಸಿನ್ಹ್ ಭಭೋರ್ (Jaswantsinh Bhabhor) ಮತ್ತು ಲಿಮ್ಖೇಡಾ

ಕ್ಷೇತ್ರದ ಶಾಸಕರಾಗಿರುವ ಅವರ ಸಹೋದರ ಸೈಲೇಶ್ ಭಭೋರ್ ಭಾನುವಾರ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು ಭಾರೀ ವಿವಾದ (Bilkis Bano gang rape) ಸೃಷ್ಟಿಸಿದ್ದಾರೆ.


ಕಳೆದ ವರ್ಷ ಅವಧಿಗಿಂತ ಮುನ್ನವೇ ಜೈಲಿನಿಂದ ಬಿಡುಗಡೆಯಾದ 2002 ರ ಬಿಲ್ಕಿಸ್ ಬಾನೋ (Bilkis Bano) ಗ್ಯಾಂಗ್‌ರೇಪ್ ಪ್ರಕರಣದ 11 ಅಪರಾಧಿಗಳಲ್ಲಿ ಒಬ್ಬರು ಭಾನುವಾರ ಗುಜರಾತ್‌ನಲ್ಲಿ (Gujarat) ನಡೆದ

ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ ಮತ್ತು ಶಾಸಕರೊಂದಿಗೆ ವೇದಿಕೆ ಹಂಚಿಕೊಂಡು ನೆರೆದವರಲ್ಲಿ ಅಚ್ಚರಿಯ ಜೊತೆಗೆ ಅನುಮಾನ ಮೂಡಿಸಿದ್ದಾರೆ.


ಶಿಕ್ಷೆಗೊಳಗಾದ ಅತ್ಯಾಚಾರಿ ದಾಹೋದ್, ಬಿಜೆಪಿ (BJP) ಸಂಸದ ಜಸ್ವಂತ್‌ಸಿನ್ಹ್ ಭಭೋರ್ (Jaswantsinh Bhabhor) ಮತ್ತು ಲಿಮ್ಖೇಡಾ ಕ್ಷೇತ್ರದ ಶಾಸಕರಾಗಿರುವ ಅವರ ಸಹೋದರ ಸೈಲೇಶ್ ಭಭೋರ್ ಅವರೊಂದಿಗೆ

ನೀರು ಸರಬರಾಜು ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದಾನೆ.

ಇದನ್ನೂ ಓದಿ : https://vijayatimes.com/karnataka-police-force-post/

ಕಾರ್ಯಕ್ರಮದಲ್ಲಿ ಅವರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದು, ಕಾರ್ಯಕ್ರಮದ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರ್ಯಕ್ರಮ ಕುರಿತಾದ ವೀಡಿಯೊಗಳು ಮತ್ತು ಫೋಟೋಗಳು

ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳು ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಫೋಟೋಸ್(Photos) ಮತ್ತು ವೀಡಿಯೊಗಳನ್ನು(Videos) ಆಧಾರವಾಗಿಟ್ಟುಕೊಂಡು ಪ್ರಶ್ನಿಸಿದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸರಣಿ ಟ್ವೀಟ್ ಮೂಲಕ ಆರೋಪಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : https://vijayatimes.com/urigowda-nanjegowda-controversy/

ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಟ್ವಿಟ್ಟರ್‌ನಲ್ಲಿ (Tweeter) ಬಿಲ್ಕಿಸ್ ಬಾನೋ ಅವರ ಅತ್ಯಾಚಾರಿ ಆರೋಪಿ ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದು,

ಈ ರಾಕ್ಷಸರನ್ನು ಮತ್ತೆ ಜೈಲಿನಲ್ಲಿ ನೋಡಲು ಬಯಸುತ್ತೇನೆ ಮತ್ತು ಅದರ ಕೀ ಯಾರಿಗೂ ಸಿಗದ ರೀತಿ ಕಣ್ಮರೆಯಾಗಬೇಕು ಎಂದು ಹೇಳಿದ್ದಾರೆ.

ಈ ಸರ್ಕಾರವು ಇಂತಹ ಆರೋಪಿಗಳಿಗೆ ಹೇಗೆ ಬೆಂಬಲ ನೀಡಿದೆ? ಭಾರತವು ತನ್ನ ನೈತಿಕ ದಿಕ್ಸೂಚಿಯನ್ನು ಮರಳಿ ಪಡೆಯಬೇಕೆಂದು ನಾನು ಬಯಸುತ್ತೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.

2002 ರ ಗೋಧ್ರಾ ನಂತರದ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಎಲ್ಲಾ 11 ಅಪರಾಧಿಗಳು ಕಳೆದ ವರ್ಷ 2022 ರ ಆಗಸ್ಟ್‌ನಲ್ಲಿ ಗೋಧ್ರಾ ಉಪ ಜೈಲಿನಿಂದ ಹೊರನಡೆದರು.
Exit mobile version