ಬಿಟ್​ ಕಾಯಿನ್​ ದಂಧೆ: ವಿಚಾರಣೆ ವೇಳೆ ಇಬ್ಬರು ಪೊಲೀಸರನ್ನು ವಶಕ್ಕೆ ಪಡೆದ ಎಸ್​ಐಟಿ

Bengaluru: ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ತನಿಖೆ ನಡೆಸುತ್ತಿದ್ದು, ಮಹತ್ತರ (Bit Coin Case-SIT) ಬೆಳವಣಿಗೆ ನಡೆದಿದೆ. ನಿನ್ನೆ ವಿಚಾರಣೆಗೆ ಬಂದಿದವರನ್ನು ವಶಕ್ಕೆ

ಪಡೆದಿದ್ದು, ಇದರಲ್ಲಿ ಇಬ್ಬರು (Bit Coin Case-SIT) ಪೊಲೀಸರು ಕೂಡ ಸೇರಿದ್ದಾರೆ.

ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ (Sriki) ಯನ್ನು ಬಂಧಿಸಿ ತನಿಖೆ ನಡೆಸಿತ್ತು. ಆ ವೇಳೆ ಸಿಸಿಬಿ ತನಿಖೆಯಲ್ಲಿ ಲೋಪ ನಡೆದಿದೆ ಎಂದುಎಸ್‍ಐಟಿ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ

FIR ಕೂಡ ದಾಖಲಾಗಿತ್ತು. ಈ ಪ್ರಕರಣದ ಪ್ರಮುಖ ಸಾಕ್ಷಿ ಶ್ರೀಕಿ ತನಿಖೆಗೆ ಸಹಕರಿಸದೇ ಸತಾಯಿಸುತ್ತಿದ್ದಾನೆ.

ಜ.24ರಂದು ವಿಚಾರಣೆಗೆ ಕರೆದವರನ್ನೆಲ್ಲಾ ನಿನ್ನೆ ವಶಕ್ಕೆ ಪಡೆದಿದ್ದು, ಈ ಪೈಕಿ ಇಬ್ಬರು ಪೊಲೀಸರು ಎಂದು ಇದೀಗ ತಿಳಿದುಬಂದಿದೆ. ಪೊಲೀಸ್ ಇನ್ಸ್​ಪೆಕ್ಟರ್​​ ಪ್ರಶಾಂತ್ ಬಾಬು (Prashanth Babu) ಹಾಗೂ

ಸೈಬರ್ ಎಕ್ಸ್​​ಪರ್ಟ್ ಸಂತೋಷ್ ಎಂಬವರನ್ನು ನಿನ್ನೆ ವಶಕ್ಕೆ ಪಡೆಯಲಾಗಿದ್ದು, ಇಂದು(ಜ.25) ಬಂಧಿಸಿ ಮಧ್ಯಾಹ್ನ ಮೂರು ಘಂಟೆಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಎಸ್​ಐಟಿ ಸಿದ್ಧತೆ ನಡೆಸುತ್ತಿದೆ.

ಕಾಂಗ್ರೆಸ್ (Congress) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಅರೋಪ ಮಾಡಿತ್ತು. ಆದರೆ ಈಗ ತನಿಖೆ ವೇಳೆ ಕೇವಲ ಮೂರೂವರೆ ಲಕ್ಷ ರೂಪಾಯಿ

ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆ ಮಾಹಿತಿ ಲಭ್ಯವಾಗಿದೆ. ಎಸ್ಐಟಿ (SIT) ರಚನೆಯಾಗಿ ಆರು ತಿಂಗಳು ಕಳೆದಿದ್ದರೂ ಇದುವರೆಗೆ ಯಾರನ್ನೂ ಅರೆಸ್ಟ್ ಮಾಡಿರಲಿಲ್ಲ.

ಸದ್ಯ ಒಂದೇ ಒಂದು ಬಿಟ್ ಕಾಯಿನ್​ಗಳನ್ನು ಎಸ್​ಐಟಿ ವಶಕ್ಕೆ ಪಡೆದುಕೊಂಡಿಲ್ಲ. ತಾಂತ್ರಿಕ ವಸ್ತುಗಳು (ಎವಿಡೆನ್ಸ್​ಗಳನ್ನು (Evidence) ದುರುಪಯೋಗ ಮಾಡಿದ್ದಾರೆ) ಎಂಬುದು ತನಿಖೆ ವೇಳೆ ಪತ್ತೆಯಾಗಿತ್ತು.

ಸದ್ಯ ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನು ಸಿಐಟಿ ನಡೆಸುತ್ತಿದೆ.

ಎಸ್​ಐಟಿ ತನಿಖೆ ನಡೆಸುತ್ತಿದ್ದು, ಮತ್ತೊಂದು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಕರೆದಿದ್ದವರನ್ನೆಲ್ಲಾ ವಶಕ್ಕೆ ಪಡೆದು ತನಿಖೆ ಕೈಗೊಂಡಿತ್ತು. ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ನಡೆಯುತ್ತಿದ್ದು,

ವಶಕ್ಕೆ ಪಡೆದುಕೊಂಡವರ ವಿಚಾರಣೆ ವೇಳೆ ಏನೆಲ್ಲಾ ಮಾಹಿತಿ ಹೊರಬರುತ್ತೆ? ಆಗ ಎಸ್​ಐಟಿಯ ಮುಂದಿನ ನಡೆಯೇನು ಎನ್ನುವುದೇ ಕುತೂಹಲ ಮೂಡಿಸಿದೆ.

ಕೆಲ ಬಿಜೆಪಿ (BJP) ನಾಯಕರುಗಳ ಹೆಸರುಗಳು ಈ ಪ್ರಕರಣದಲ್ಲಿ ಕೇಳಿಬಂದಿದ್ದು, ಇದರಿಂದ ಈ ಬಿಟ್​ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಎಸ್ಐಟಿ ಅಧಿಕಾರಿಗಳು

ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ತನಿಖೆಯಲ್ಲಿ ಏನೆಲ್ಲ ಅಂಶಗಳು ಬೆಳಕಿಗೆ ಬರಲಿವೆ ಎನ್ನುವುದುನ್ನು ಕಾದುನೋಡಬೇಕಿದೆ.

ಇದನ್ನು ಓದಿ: ಲೋಕಸಭಾ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ; ಕೈಗೆ ಭಾರೀ ಆಘಾತ ನೀಡಿದ ಮಮತಾ ಬ್ಯಾನರ್ಜಿ..!

Exit mobile version