ಸಂಸತ್ ಸದಸ್ಯರಿಗೆ ನೀಡಲಾಗಿರುವ ಸಂವಿಧಾನದ ಪ್ರತಿಗಳಲ್ಲಿ ಸಮಾಜವಾದ ಮತ್ತು ಜಾತ್ಯಾತೀತ ಎಂಬ ಪದಗಳೇ ಇಲ್ಲ (bjp against siddaramaiah) ಎಂದು ಆರೋಪಿಸಿರುವ ಮುಖ್ಯಮಂತ್ರಿ
ಸಿದ್ದರಾಮಯ್ಯ (Siddaramaiah) ಅವರಿಗೆ, ಆ ಎರಡು ಪದಗಳು ಅಂಬೇಡ್ಕರ್ ಅವರು ರಚಿಸಿದ್ದ ಮೂಲ ಸಂವಿಧಾನದಲ್ಲಿ ಇರಲೇ ಇಲ್ಲ ಎಂದು ರಾಜ್ಯ ಬಿಜೆಪಿ (BJP) ಟಾಂಗ್ ನೀಡಿದೆ.
ಈ ಕುರಿತು ಟ್ವೀಟ್ (Tweet) ಮಾಡಿರುವ ರಾಜ್ಯ ಬಿಜೆಪಿ, ಸ್ವಾಮಿ ಸ್ವಯಂಘೋಷಿತ ಸಂವಿಧಾನ ತಜ್ಞ ಸಿದ್ದರಾಮಯ್ಯರವರೇ, ನೂತನ ಸಂಸತ್ನ ಮೊದಲ ಅಧಿವೇಶನದ ದಿನದಂದು, ಸದಸ್ಯರಿಗೆ ನೀಡಿದ್ದು,
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ್ದ ಮೂಲ ಸಂವಿಧಾನ. ಬಾಬಾ ಸಾಹೇಬರು ರಚಿಸಿದ್ದ ಸಂವಿಧಾನವನ್ನು ಸದಸ್ಯರಿಗೆ ನೀಡಬಾರದೆಂಬ ನಿಯಮವೇನಾದರೂ ಇದೆಯೇ..?
ಅಂಬೇಡ್ಕರ್ (Ambedkar) ಅವರು ರಚಿಸಿರುವ ಮೂಲ ಸಂವಿಧಾನದ ಬಗ್ಗೆ ನಿಮಗೇಕೆ ಈ ಪರಿ ದ್ವೇಷ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಿದ್ದ
ನಿಮ್ಮ ನಾಯಕಿ ಇಂದಿರಾಗಾಂಧಿಯವರು, ಓಲೈಕೆ ರಾಜಕಾರಣಕ್ಕಾಗಿ ಸಮಾಜವಾದ ಮತ್ತು ಜಾತ್ಯಾತೀತ ಎಂಬ ಪದಗಳನ್ನು ಒತ್ತಾಯಪೂರ್ವಕವಾಗಿ ಸಂವಿಧಾನಕ್ಕೆ ಅಳವಡಿಸಿದ್ದರು. ನೀವು ಸದಾ
ಗುರಾಣಿಯಂತೆ ಬಳಸಿಕೊಳ್ಳುವ ಆ ಎರಡು ಪದಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ್ದ ಮೂಲ ಸಂವಿಧಾನದಲ್ಲಿ ಇರಲೇ ಇಲ್ಲ ಇನ್ನು ನಿಮ್ಮ ಸಮಾಜವಾದದ ಅಸಲಿ ಮುಖವಾಡವನ್ನು
ನಿಮ್ಮ ಪಕ್ಷದವರೇ ಬೆತ್ತಲು ಮಾಡಿದ್ದಾರೆ. ಹಿಂದೂಗಳನ್ನು ತುಚ್ಛವಾಗಿ ದ್ವೇಷಿಸುವುದೇ, ನಿಮ್ಮ ಸೋಗಲಾಡಿ ಜಾತ್ಯಾತೀತತೆ ಎಂಬುದು ಸಹ ಸಾಬೀತಾಗಿದೆ. ಮುಸ್ಲಿಂ ಲೀಗ್ನಂತಹ ಮತೀಯ ಪಕ್ಷದ ಜೊತೆ
ಸೇರಿ ದಶಕಗಳ ಕಾಲ ಅಧಿಕಾರ ಅನುಭವಿಸಿರುವ ಕಾಂಗ್ರೆಸ್ ಪಕ್ಷ, ಯಾವ ರೀತಿಯಿಂದ ಜಾತ್ಯಾತೀತ ಪಕ್ಷ ಎಂಬ ಪ್ರಶ್ನೆಗೆ ನೀವೇ ಉತ್ತರಿಸಬೇಕು ಎಂದು ಹೇಳಿದೆ.
ಇದಕ್ಕೂ ಮುನ್ನ ಈ ಕುರಿತು ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯನವರು (Siddaramaiah) , ನೂತನ ಸಂಸತ್ ಭವನದ ಪ್ರವೇಶದ ನೆನಪಿಗಾಗಿ ಸಂಸದರಿಗೆ ಕೇಂದ್ರ ಸರ್ಕಾರ ನೀಡಿರುವ ಸಂವಿಧಾನದ
ಪ್ರತಿಯ ಪ್ರಸ್ತಾವನೆಯಿಂದ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಕಿತ್ತು ಹಾಕಿರುವುದು ಬಿಜೆಪಿ ಪಕ್ಷದ ಅಂತರಂಗದಲ್ಲಿ ಸಂವಿಧಾನದ ಬಗ್ಗೆ ಇರುವ ಅಸಹನೆಗೆ ಸಾಕ್ಷಿ. ಇದು ಅತ್ಯಂತ ಖಂಡನೀಯ ಕೃತ್ಯ.
1949ರ ಸಂವಿಧಾನದ ಪ್ರತಿಯನ್ನೇ ನೀಡಲಾಗಿದೆ ಎನ್ನುವುದು ತಮ್ಮೊಳಗಿನ ದುಷ್ಟ ಆಲೋಚನೆಯನ್ನು ಮುಚ್ಚಿಕೊಳ್ಳುವ ಪ್ರಯತ್ನವಾಗಿದೆ. ತಿದ್ದುಪಡಿಯಾದ ನಂತರ ಪರಿಷ್ಕೃತ ಪ್ರತಿಯನ್ನು
ನೀಡಬೇಕಾಗಿರುವುದು ನ್ಯಾಯವೂ ಹೌದು, ಧರ್ಮವೂ ಹೌದು. 1976ರಲ್ಲಿಯೇ ಸಂವಿಧಾನಕ್ಕೆ 42ನೇ ತಿದ್ದುಪಡಿ ಮಾಡಿ ‘’ಸಮಾಜವಾದಿ’’ ಮತ್ತು “ಜಾತ್ಯತೀತ” ಎಂಬ ಪದಗಳನ್ನು ಸೇರಿಸಲಾಗಿತ್ತು.
ಈ ಪದಗಳನ್ನು ಕಿತ್ತುಹಾಕಿರುವುದು ಸಂವಿಧಾನ ವಿರೋಧಿ ನಡೆ ಮಾತ್ರವಲ್ಲ, ಇದೊಂದು ದೇಶದ್ರೋಹ ಕೃತ್ಯವಾಗಿದೆ. ಇದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿರುವ
ಅವಮಾನವಾಗಿದೆ (bjp against siddaramaiah) ಎಂದು ಕಿಡಿಕಾರಿದ್ದರು.
ಇದನ್ನು ಓದಿ: ಕಾವೇರಿದ ಕಾವೇರಿ ಕಿಚ್ಚು ; ಹೋರಾಟಕ್ಕಿಳಿದ ನಿರ್ಮಲಾನಂದನಾಥ ಶ್ರೀಗಳು..!