“Fake News” ಕಡಿವಾಣ ಹಾಕಲು ಮೊದಲ ಪ್ರಕರಣ ಸತೀಶ್ ಜಾರಕಿಹೊಳಿ ಮೇಲೆ ಹಾಕಿ : ಬಿಜೆಪಿ

Bengaluru: ಕೇಂದ್ರ ಸರ್ಕಾರ ಗೃಹಲಕ್ಷ್ಮೀ ಯೋಜನೆ ಜಾರಿಯಾಗದಂತೆ ತಡೆಯಲು ರಾಜ್ಯದ ಸರ್ವರ್ ಗಳನ್ನು ಹ್ಯಾಕ್ ಮಾಡಿದೆ ಎಂದು ತಲೆಬುಡವಿಲ್ಲದ ಫೇಕ್ ನ್ಯೂಸ್ (BJP slams Satish Jarkiholi) ಸೃಷ್ಟಿ ಮಾಡಿರುವ

ಸಚಿವ ಸತೀಶ್ ಜಾರಕಿಹೊಳಿ ಮೇಲೆಯೇ ಪ್ರಕರಣ ದಾಖಲಿಸಿ ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.

ಈ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಅರೇ ಸಿದ್ದರಾಮಯ್ಯರವರೇ, ನಿಮಗೆ ಇಷ್ಟೊಂದು ಭಯವೇಕೆ? ಅಂದು ನಿಮ್ಮ ಮತ್ತು ನಿಮ್ಮ ಸರ್ಕಾರದ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ಲೋಕಾಯುಕ್ತಕ್ಕೆ ಬೀಗ ಜಡಿದಿದ್ದೀರಿ.

ಇಂದು ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಗ್ಯಾರಂಟಿಗಳನ್ನು, ನಿಮ್ಮ ತುಘಲಕ್ ನಡೆಯನ್ನು ಪ್ರಶ್ನಿಸುವ, ಪ್ರತಿಭಟಿಸುವ, ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದೀರಿ.

ಸರ್ಕಾರದ ಲೂಟಿಕೋರತನ ಬೀದಿಗೆ ಬರಬಾರದೆಂದು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಕೊಟ್ಟ ಉಪಾಯವೇ ಇದು? ಎಂದು (BJP slams Satish Jarkiholi) ಲೇವಡಿ ಮಾಡಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಬಸವನಗೌಡ ಪಾಟೀಲ್ ಯತ್ನಾಳ, ಸಿದ್ದರಾಮಯ್ಯನವರು ನೆನ್ನೆ “Fake News” ಹರಡಿಸುವವರ

ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ ಎಂಬ ಸುದ್ದಿ ನೋಡಿದೆ. ಇವರ ಮಂತ್ರಿ ಮಂಡಲದ ಮಂತ್ರಿ “ರಾಜ್ಯ ಸರ್ಕಾರದ ಸರ್ವರ್ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ” ಎಂದು ಹೇಳಿರುವುದು “Fake News”.

ಇದನ್ನು ಓದಿ: ರಾಜ್ಯದಲ್ಲಿ ಆನ್‌ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ

ಇಲ್ಲವೇ ಮಂತ್ರಿಗಳು ಹಾಗು ರಾಜ್ಯ ಸರ್ಕಾರ ಇದನ್ನು ಸಾಬೀತುಪಡಿಸಬೇಕು. ಪೊಳ್ಳು ಭರವಸೆಗಳನ್ನು ನೀಡಿ, ಈಡೇರಿಸಲಾಗದೆ ಈಗ ದಿನಕ್ಕೊಂದು ನೆಪ, ಹೊಸ ಕಥೆ ಹೇಳುವುದು ಕರ್ನಾಟಕ ಸರ್ಕಾರಕ್ಕೆ ರೂಢಿಯಾಗಿದೆ.

ನಿಮ್ಮ ಮಂತ್ರಿಗಳು “ಸೇವಾ ಸಿಂಧು” ಸರ್ವರ್ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂದು ಹೇಳಿದ್ದಾರೆ. ಇದು ನಿಜವೇ? ಈ ಬಗ್ಗೆ ಯಾವ ಠಾಣೆಯಲ್ಲಿ ಮೊಕದ್ದಮೆ ಧಾಖಲಾಗಿದೆ? ಕೇಂದ್ರ ಸರ್ಕಾರದ ಮೇಲೆ ಇಂತಹ

ಆರೋಪಗಳನ್ನು ಮಾಡಿ ಕೇಂದ್ರ ಹಾಗು ರಾಜ್ಯದ ನಡುವಿನ ಸಂಬಂಧ ಹಾಳುಮಾಡುವುದು ದ್ರೋಹವಲ್ಲವೇ? ಸೇವಾ ಸಿಂಧು ಸರ್ವರ್ ಹ್ಯಾಕ್ ಆಗಿದ್ದೇ ಆದರೆ ಯಾವ ಸಮಯದಲ್ಲಾಗಿತ್ತು,

ಯಾರಿಂದ ಅಂತ ಬಹಿರಂಗಪಡಿಸಿ. ನೀವೇ ಹೇಳಿರುವಂತೆ “Fake News” ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊದಲ ಪ್ರಕರಣ ಸತೀಶ್ ಜಾರಕಿಹೊಳಿ ಮೇಲೆ ದಾಖಲಿಸಿ ಎಂದು ಒತ್ತಾಯಿಸಿದ್ದಾರೆ.

Exit mobile version